HOME » NEWS » State » WHATSAPP CHAT REVEALED MONEY LAUNDERING SCAM OF KARNATAKA CM BS YEDIYURAPPA FAMILY DBDEL SCT

BS Yediyurappa: ಸಿಎಂ ಯಡಿಯೂರಪ್ಪಗೆ ಸಂಕಷ್ಟ ತಂದ ವಾಟ್ಸಾಪ್ ಚಾಟ್!; ಏನಿದು ಹೊಸ ವಿವಾದ?

CM BS Yediyurappa | ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ಧ ಅಕ್ರಮ‌ ಹಣ ವರ್ಗಾವಣೆ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ PMLA ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

news18-kannada
Updated:June 15, 2021, 1:41 PM IST
BS Yediyurappa: ಸಿಎಂ ಯಡಿಯೂರಪ್ಪಗೆ ಸಂಕಷ್ಟ ತಂದ ವಾಟ್ಸಾಪ್ ಚಾಟ್!; ಏನಿದು ಹೊಸ ವಿವಾದ?
ಬಿ.ಎಸ್ ಯಡಿಯೂರಪ್ಪ
  • Share this:
ನವದೆಹಲಿ, ಜೂ. 15: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ತೀವ್ರವಾಗಿ ಚರ್ಚೆ ಆಗುತ್ತಿರುವುದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ‌.ಜೆ. ಅಬ್ರಾಹಂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ಯಡಿಯೂರಪ್ಪ ಪಾಲಿಗೆ ಈ ಬಾರಿ ಕಂಟಕಪ್ರಾಯವಾಗಿರುವುದು ವಾಟ್ಸಾಪ್ ಚಾಟ್ (WhatsApp) ಎಂಬ ವಿಷಯ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರಿಗೆ ಎದುರಾಗಿರುವ ಈ ವಾಟ್ಸಾಪ್ ಚಾಟ್ ಸಂಕಷ್ಟ ಯಾವುದು? ಮುಂದೆ ಓದಿ...

ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ  ಅಕ್ರಮ‌ ಹಣ ವರ್ಗಾವಣೆ ಮಾಡಿದ ಆರೋಪ ಹೊರಿಸಿರುವ ದೂರುದಾರ ಟಿ.ಜೆ. ಅಬ್ರಾಹಂ, ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ (PMLA) ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ದೂರು ಸ್ವೀಕಾರ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಲು ಮಂಗಳವಾರ ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಗೆ ಭೇಟಿ ನೀಡಿದ್ದರು.

ಇನ್ನು, ಯಡಿಯೂರಪ್ಪ ಕೇಳಿಬರುತ್ತಿರುವ ಆರೋಪದಲ್ಲಿ ವಿಶೇಷವಾಗಿ ಕಂಡುಬರುತ್ತಿರುವುದು ವಾಟ್ಸಪ್ ಚಾಟ್. ಯಡಿಯೂರಪ್ಪ 2020ರಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆದ ಮೇಲೆ ಅವರ ಮೊಮ್ಮಗ ಶಶಿಧರ ಮರಡಿ ಅವರು ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ಅವರಿಂದ 'ಬಿಲ್ ಕ್ಲಿಯರ್ ಗಾಗಿ' 12 ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದಾರೆ ಎಂಬುದು ದೂರು. ಶಶಿಧರ ಮರಡಿ ಅವರು ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ನಡುವೆ ವಾಟ್ಸಪ್ ನಲ್ಲೇ ಡೀಲ್ ಕುದುರಿಸಲಾಗಿದೆ‌. ಹಣ ವರ್ಗಾವಣೆ ಬಗ್ಗೆಯೂ ವಾಟ್ಸಪ್ ನಲ್ಲೇ ಡಿಸ್ಕಷನ್ ಆಗಿದೆ. ಮರಡಿ-ರಾಮಲಿಂಗಂ ವಾಟ್ಸಪ್ ಚಾಟ್ ನ ಪಿನ್ ಟು ಪಿನ್ ಮಾಹಿತಿಯನ್ನು ದೂರು ಪ್ರತಿಗೆ ಲಗತ್ತಿಸಿರುವ ಅನೆಕ್ಸ್‌ Aನಲ್ಲಿ ನೀಡಲಾಗಿದೆ.

ಇದನ್ನೂ ಓದಿ: BS Yediyurappa: ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ; ಸಿಎಂ ಕುರ್ಚಿಗೆ ಕಂಟಕ ತರುತ್ತಾ ಹಳೇ ಕೇಸ್?

ಅನೆಕ್ಸರ್ - Bನಲ್ಲಿ ಯಡಿಯೂರಪ್ಪ ಕುಟುಂಬದ ಸದಸ್ಯರು ನಡೆಸಿರುವ ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವ ಕಂಪನಿಯಿಂದ ಯಾವ ಕಂಪನಿಗೆ ಹಣ ವರ್ಗವಾಗಿದೆ ಎಂಬ ಮಾಹಿತಿ ಒದಗಿಸಲಾಗಿದೆ. ಯಾವ್ಯಾವಾಗ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಎಂಬ ಮಾಹಿತಿ ಕೊಡಲಾಗಿದೆ.

ಇದೇ ರೀತಿ ಅನೆಕ್ಸರ್ - Cನಲ್ಲಿ ಯಡಿಯೂರಪ್ಪ ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್ ಶ್ರೀ ವಿರುದ್ಧ ದೂರು ನೀಡಲಾಗಿದೆ. ಸಂಜಯ್ ಶ್ರೀ ಬ್ರಿಟಿಷ್ ಪೌರತ್ವ ಹೊಂದಿರುವ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಅನೆಕ್ಸರ್ -Dನಲ್ಲಿ ಯಡಿಯೂರಪ್ಪ ಕುಟುಂಬ ಕೋಲ್ಕತ್ತಾದಲ್ಲಿ ಕಂಪನಿಗಳನ್ನು ಹೊಂದಿರುವ ಮಾಹಿತಿ ಕೊಡಲಾಗಿದೆ.‌ ಯಡಿಯೂರಪ್ಪ ಕುಟುಂಬದವರು ಕೋಲ್ಕತ್ತಾದಲ್ಲಿ 7 ಕಂಪನಿಗಳನ್ನು ಹೊಂದಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ: Karnataka Politics: ಯಡಿಯೂರಪ್ಪ ಪರ- ವಿರೋಧಿ ಬಣದಿಂದ ಹೆಚ್ಚಿದ ಒತ್ತಡ; ಇಕ್ಕಟ್ಟಿಗೆ ಸಿಲುಕಿದ ಅರುಣ್ ಸಿಂಗ್ಹೀಗೆ ಇಂಚಿಂಚು ಮಾಹಿತಿ ನೀಡಿರುವ ದೂರುದಾರ ದೂರು ಸ್ವೀಕರಿಸಿ ತನಿಖೆ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಇಡಿ ದೂರು ರಿಜಿಸ್ಟರ್ ಮಾಡಿಕೊಳ್ಳುವುದರ ಆಧಾರದಮೇಲೆ ಯಡಿಯೂರಪ್ಪ ಮತ್ತವರ ಕುಟುಂಬದ ಭವಿಷ್ಯ ನಿರ್ಧಾರವಾಗಿದೆ. ನಾಯಕತ್ವ ಬದಲಾವಣೆ ಚರ್ಚೆ ಆಗುತ್ತಿರುವ ಯಡಿಯೂರಪ್ಪಗೆ ಇದು ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ‌.
Youtube Video

ಈಗಾಗಲೇ ಕರ್ನಾಟಕದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗದ್ದಲದಿಂದ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಸಮಸ್ಯೆಯಿಂದ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯೋದು ಖಚಿತವೆಂಬ ಮಾತೂ ಕೇಳಿಬರುತ್ತಿವೆ. ಹಳೆಯ ಕೇಸ್​ನಿಂದ ಸಿಎಂ ಯಡಿಯೂರಪ್ಪನವರಿಗೆ ಹೊಸ ಸಮಸ್ಯೆ ಶುರುವಾಗಿದೆ. ಅಧಿಕಾರ ದುರುಪಯೋಗ ಮಾಡಿಕೊಂಡ‌ ಗುರುತರ ಆರೋಪ ಎದುರಿಸುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ಆ ಹಳೇ ಕೇಸ್​ ಸಂಕಷ್ಟ ತಂದಿರುವ ಸಾಧ್ಯತೆ ಹೆಚ್ಚಾಗಿದೆ.
Published by: Sushma Chakre
First published: June 15, 2021, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories