ನವದೆಹಲಿ(ಜ. 28): ರಾಜ್ಯ ಕಾಂಗ್ರೆಸ್ ಅಧ್ಯಕ್ಷಗಾದಿ ಬಗ್ಗೆ ಚರ್ಚಿಸಲೆಂದೇ ಅಪರೂಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಹುದ್ದೆಯ ಪ್ರಬಲ ಆಕಾಂಕ್ಷಿ ಡಿ.ಕೆ. ಶಿವಕುಮಾರ್, “ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದರೆ ತಪ್ಪೇನಿದೆ?” ಎಂದು ಕೇಳಿದ್ಧಾರೆ.
ಅಲ್ಲದೆ ಜಾತಿ, ಜಿಲ್ಲೆ, ರಾಜ್ಯಗಳ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಪಕ್ಷಗಳ ನಾಯಕರು ಭೇಟಿ ಮಾಡುವುದು
ರಾಜಕೀಯದಲ್ಲಿ ಸಹಜ. ನಾನು ಕೂಡ ಹಲವು ಬಾರಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇನೆ ಎಂದು ಡಿಕೆಶಿ ಹೇಳಿದರು.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಚಾರದ ಪ್ರಶ್ನಿಸಿದಾಗ 'ಪಕ್ಷ ಮತ್ತು ಅಧ್ಯಕ್ಷರ ನೇಮಕಾತಿ ವಿಷಯವನ್ನು ದಯವಿಟ್ಟು ನನ್ನ ಬಳಿ ಕೇಳಬೇಡಿ ಎಂದು ಪತ್ರಕರ್ತರ ಬಳಿ ಮನವಿ ಮಾಡಿಕೊಂಡರು. ಹೇಗೂ ನೀವು ಏನೇನೋ ಸುದ್ದಿ ಮಾಡುತ್ತಿದ್ದೀರಿ. ಈಗಲೂ ಏನು ಬೇಕಾದರೂ ಸುದ್ದಿ ಮಾಡಿಕೊಳ್ಳಿ. ನಾನು ಯಾರ ಮೇಲೂ ಯುದ್ದಕ್ಕೆ ಹೋಗುವುದಿಲ್ಲ. ಯಾರ ಮೇಲೂ ಸ್ಪರ್ಧೆ ಮಾಡುವುದಿಲ್ಲ ಎಂದು
ಡಿಕೆಶಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: ದೆಹಲಿಗೆ ಹೋಗಿ 5 ದಿನವಾದರೂ ಡಿಕೆಶಿಗೆ ಸಿಕ್ಕಿಲ್ಲ ಸೋನಿಯಾ ಭೇಟಿ ಭಾಗ್ಯ
ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರುಗಳಿರುವ ಕಾರಣದಿಂದಲೇ ರಾಜ್ಯ ಕಾಂಗ್ರೆಸ್ನ ಸಾರಥ್ಯ ಸಿಗುತ್ತಿಲ್ಲ ಎಂಬ ಲೆಕ್ಕಾಚಾರದೊಂದಿಗೆ ಕಳೆದೈದು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟು ಎಐಸಿಸಿ ಅಧ್ಯಕ್ಷೆ
ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಡಿಕೆಶಿ ಪ್ರಯತ್ನಿಸುತ್ತಿದ್ಧಾರೆ. ಆದರೆ, ತಾನು ಸೋನಿಯಾ ಗಾಂಧಿಯಷ್ಟೇ ಅಲ್ಲ ಯಾವ ನಾಯಕರನ್ನೂ ಭೇಟಿಯಾಗಿಲ್ಲ ಎಂದು ಮಾಧ್ಯಮಗಳಿಗೆ ಡಿಕೆಶಿ ಹೇಳಿದರು. 'ನಾನು ಸೋನಿಯಾ ಗಾಂಧಿ ಅಥವಾ
ರಾಹುಲ್ ಗಾಂಧಿ ಅವರನ್ನು ಮಾಡಿಲ್ಲ. ಅಷ್ಟೇಯಲ್ಲ, ಬೇರಾವ ನಾಯಕರ ಮನೆಯ ಮೆಟ್ಟಿಲನ್ನೂ ತುಳಿದಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನಷ್ಟೇ ಭೇಟಿ ಮಾಡಿದ್ದೇನೆ. ಅದೂ ಕೂಡ ಸೌಜನ್ಯದ ಭೇಟಿ' ಎಂದರು.
ಆನಂತರ ತಮ್ಮ ದೆಹಲಿ ಭೇಟಿಯ ಉದ್ದೇಶದ ಬಗ್ಗೆ ಮಾತನಾಡಿದ ಅವರು, ನಾನು ದೆಹಲಿಗೆ ಬಂದಿರುವುದು ನನ್ನ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ವಕೀಲರು ಮತ್ತು ಚಾರ್ಟೆಡ್ ಅಕೌಂಟೆಂಟ್ಗಳನ್ನು ಭೇಟಿ ಮಾಡಲು ಅಷ್ಟೇ ಎಂದರು. ನಾನು ಕೆಪಿಸಿಸಿ ಅಧ್ಯಕ್ಷ ಪಟ್ಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ ಯಾರನ್ನೂ ಭೇಟಿ ಮಾಡಿಲ್ಲ. ಕರೆದು ಕೇಳಿದರೆ ಮಾತಾಡುತ್ತೇನೆ. ಆದರೆ ಈವರೆಗೂ ನನ್ನನ್ನೂ ಯಾರೂ ಕರೆದು ಕೇಳಿಲ್ಲ. ಸೋನಿಯಾ ಗಾಂಧಿ ಅವರ ಭೇಟಿಗೆ ಪ್ರಯತ್ನಿಸಬಹುದಿತ್ತು. ನಾನೇ ಸದ್ಯಕ್ಕೆ ಬೇಡ ಅಂತಾ ಬಿಟ್ಟಿದ್ದೀನಿ ಎಂದು ಹೇಳಿದರು.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ