ದೇವನಹಳ್ಳಿ: ರಾಜ್ಯ ಕಾಂಗ್ರೆಸ್ ಮುಖಂಡರ ಮಹತ್ವದ ಸಭೆ ಸಾದಹಳ್ಳಿಯ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿ ನಡೆಯುತ್ತಿದ್ದು, ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಒಳ ಜಗಳದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, 2013 ರಲ್ಲಿ ಬಿಜೆಪಿ ಪಕ್ಷಕ್ಕೆ ಯಾವ ಸ್ಥಿತಿ ಬಂದಿತ್ತೊ ಅದೇ ಪರಿಸ್ಥಿತಿ 2023 ರಲ್ಲಿ ರಿಪೀಟ್ ಆಗಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಬಣ ರಾಜಕೀಯದ ಬಗ್ಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಬಿಪ್ರಾಯಗಳಿವೆ. ಆದರೆ ನಮಗಿಂತ ಅವರಲ್ಲೇ ಹೆಚ್ಚು ಭಿನ್ನಾಭಿಪ್ರಾಯಗಳಿವೆ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಪ್ರಯತ್ನ ಬಿಜೆಪಿ ಪಕ್ಷದಲ್ಲಿಯೇ ನಡೆಯುತ್ತಿದೆ. ಬಿಜೆಪಿ ಹೀಗೇ ಇರೋದಿಲ್ಲ. ಬಣ ರಾಜಕೀಯದಿಂದ 2013 ರಲ್ಲಿ ಬಿಜೆಪಿಗೆ ಯಾವ ಸ್ಥಿತಿ ಬಂತೊ ಅದೇ ಸ್ಥಿತಿ ಮುಂದಿನ ಚುನಾವಣೆಯಲ್ಲಿ ನಿರ್ಮಾಣ ಆಗುತ್ತೆ. 2023 ರ ಚುನಾವಣೆಯಲ್ಲಿ ರಿಪೀಟ್ ಆಗಲಿದೆ. ಆಗ ಯಡಿಯೂರಪ್ಪ ಒಂದು, ಶ್ರೀರಾಮುಲು ಒಂದೊಂದು ಪಕ್ಷ ಕಟ್ಟಿಕೊಂಡರು. ಅದೇ ರೀತಿಯಲ್ಲಿ ಮುಂದೆ ಬಿಜೆಪಿಯಲ್ಲಿ ಆಗುತ್ತೆ. ಬೇರೆ ಬೇರೆ ಕಾರಣಗಳಿಂದ ಬಿಜೆಪಿಯಲ್ಲಿ ಶಾಸಕರು ಇರಲ್ಲ. ಅದಕ್ಕೆ ನಾವು ಈಗಿನಿಂದಲೇ ಸಿದ್ದತೆ ನಡೆಸಿದ್ದು, 2023 ರ ಚುನಾವಣೆ ಟಾರ್ಗೆಟ್ ಮಾಡುತ್ತಿದ್ದೇವೆ ಎಂದರು.
ಇದನ್ನು ಓದಿ: ಸಿ.ಪಿ. ಯೋಗೇಶ್ವರ್ಗೆ ಮಂತ್ರಿಸ್ಥಾನ ನಿಶ್ಚಿತ; ಅಚ್ಚರಿ ಹುಟ್ಟಿಸಿದ ಸಿಎಂ ಯಡಿಯೂರಪ್ಪ ಹೇಳಿಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ