ಸಮೀಕ್ಷೆ ಏನೇ ಹೇಳಲಿ, ಗೋಕಾಕ್​ನಲ್ಲಿ ಗೆಲ್ಲೋದು ಕಾಂಗ್ರೆಸ್ಸೇ: ಲಖನ್ ಜಾರಕಿಹೊಳಿ

ಗೋಕಾಕ ಕ್ಷೇತ್ರ ಗೆದ್ದು ಅಭಿವೃದ್ಧಿ ಮಾಡಬೇಕಿದೆ. ಎರಡು ಲಕ್ಷ ಮತದಾರರನ್ನ ನಾವು ಬದುಕಿಸಬೇಕಿದೆ. ಜನ ಆಶೀರ್ವಾದ ಮಾಡೇ ಮಾಡುತ್ತಾರೆ. ಮುನ್ನಡೇ ಎಷ್ಟು ಅನ್ನೊದು ಡಿ.9 ರಂದೇ ಗೊತ್ತಾಗಲಿದೆ

news18-kannada
Updated:December 6, 2019, 4:17 PM IST
ಸಮೀಕ್ಷೆ ಏನೇ ಹೇಳಲಿ, ಗೋಕಾಕ್​ನಲ್ಲಿ ಗೆಲ್ಲೋದು ಕಾಂಗ್ರೆಸ್ಸೇ: ಲಖನ್ ಜಾರಕಿಹೊಳಿ
ಲಖನ್​ ಜಾರಕಿಹೊಳಿ
  • Share this:
ಬೆಳಗಾವಿ(ಡಿ.06) : ಸಮೀಕ್ಷೆ ಬೇಗ ಸಿಗುವ ಕ್ಷೇತ್ರ ಇದಲ್ಲ, ನಾವು ಗೆದ್ದೇ ಗೆಲ್ಲುತ್ತೇವೆ. ಗೋಕಾಕದಲ್ಲಿ ಮಾವ ಅಳಿಯಂದಿರ ಭ್ರಷ್ಟಾಚಾರ ಬಹಳ ಆಗಿತ್ತು, ನಗರದಲ್ಲಿ ಎಲ್ಲ ಕಡೆ ಅಭಿವೃದ್ಧಿ ಆಗಿಲ್ಲ, ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. ಡಿಸೆಂಬರ್ ಅಲ್ಲ, ಯಾವಾಗಲೂ ಅವರ ಜೊತೆ ಸೇರಲ್ಲ, ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್​​​ ಜಾರಕಿಹೊಳಿ ಹೇಳಿದರು. 

ಗೋಕಾಕ ಕ್ಷೇತ್ರ ಗೆದ್ದು ಅಭಿವೃದ್ಧಿ ಮಾಡಬೇಕಿದೆ. ಎರಡು ಲಕ್ಷ ಮತದಾರರನ್ನ ನಾವು ಬದುಕಿಸಬೇಕಿದೆ. ಜನ ಆಶೀರ್ವಾದ ಮಾಡೇ ಮಾಡುತ್ತಾರೆ. ಮುನ್ನಡೇ ಎಷ್ಟು ಅನ್ನೊದು ಡಿ.9 ರಂದೇ ಗೊತ್ತಾಗಲಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಭಯದ ವಾತಾವರಣ ಇತ್ತು : ಅಶೋಕ್ ಪೂಜಾರಿ

ಈಗಿನ ಚುನಾವಣೆಗೂ ಹಿಂದಿಗೂ ಬಹಳ ಅಂತರ ಇದೆ, ಯಾರು‌ ಚುನಾವಣೆ ನಿರೀಕ್ಷೆಯಲ್ಲಿರಲಿಲ್ಲ. ಕ್ಷೇತ್ರದಲ್ಲಿ ಭಯದ ವಾತಾವರಣ ಇತ್ತು, ಅವರಿಗೆ ಮುಕ್ತವಾಗಿ ಮಾತನಾಡದಂತೆ ಇತ್ತು, ಜನರು ತಮ್ಮ ನಿರ್ಧಾರ ಮತದಾನ ಮಾಡಿ ಪ್ರಕಟ ಮಾಡಿದ್ದಾರೆ ಜೆಡಿಎಸ್ ಅಭ್ಯರ್ಥಿ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದ್ದಾರೆ.

ಗೋಕಾಕ್​​ನಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಬಂದು ಪ್ರಚಾರ ಮಾಡಿದ್ದು ಪರಿಣಾಮ ಬೀರಿದೆ. ಜೆಡಿಎಸ್  ಪಕ್ಷದವರು ಈ ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ :  ತೆಲಂಗಾಣ ಎನ್​ಕೌಂಟರ್​: ದುಷ್ಟರಿಗೆ ಆಗಬೇಕಾದ ಶಿಕ್ಷೆಯಾಗಿದೆ; ಡಿಸಿಎಂ ಲಕ್ಷಣ ಸವದಿ

ನಾನು ಜಾತಿ ಆಧಾರದ ಮೇಲೆ ಚುನಾವಣೆ ಮಾಡಿಲ್ಲ, ಎಲ್ಲ ಜಾತಿಯವರು ಇಲ್ಲಿ ಇದ್ದಾರೆ, ಎಲ್ಲರು ಸಹಕಾರ ಕೊಟ್ಟಾಗ ನಾವು ಗೆಲ್ಲಬಹುದು. ನಾನು ವೈಯ್ಯಕ್ತಿಕವಾಗಿ  ಚುನಾವಣೆ ಗಂಭೀರವಾಗಿ ತೆಗೆದುಕೊಳ್ಳಲ್ಲ, ಗೆಲುವು ಸೋಲು ಸಾಮಾನ್ಯ. ವಾಸ್ತವವಾಗಿ ಸೋಲು ಗೆಲುವು ಮತದಾರರಿಗೆ ಮಿಸಲು ಹೊರತಾಗಿ ಅಶೋಕ ಪೂಜಾರಿಗೆ ಅಲ್ಲ ಎಂದರು.
First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ