ಬೆಂಗಳೂರು: ಶಿವಮೊಗ್ಗ (Shivamogga), ಬೆಳಗಾವಿಯಲ್ಲಿ (Belagavi) ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಯಾನ ಶುರುವಾಗುತ್ತಿದೆ. ಅಭಿವೃದ್ಧಿ (Development) ಹೆಸರಲ್ಲಿ ಮೋದಿ ಮಹಾ ಮತ ಬೇಟೆಗೆ ಬರುತ್ತಿದ್ದಾರೆ. ಮೋದಿ ಕಾರ್ಯಕ್ರಮ ಹಲವು ಹೊಸತನಗಳಿಗೆ ಸಾಕ್ಷಿ ಆಗುತ್ತಿದೆ. ಫೆಬ್ರವರಿ 13ಕ್ಕೆ ಬೆಂಗಳೂರು ಏರೋಶೋ (Aero India 2023) ಉದ್ಘಾಟನೆಗೆ ಬಂದು ಹೋಗಿದ್ದ ಪ್ರಧಾನಿ ಇಂದು ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಮೋದಿ ಮೇನಿಯಾ ಅಬ್ಬರಿಸಲಿದ್ದು, ಮೋದಿ ಸ್ವಾಗತಕ್ಕೆ ಬಿಜೆಪಿ (BJP) ವಿಶಿಷ್ಠ ರೀತಿಯಲ್ಲಿ ಸಜ್ಜಾಗಿದೆ. ಬೆಳಗ್ಗೆ 11:15ಕ್ಕೆ ಶಿವಮೊಗ್ಗ ನೂತನ ಏರ್ಪೋರ್ಟ್ಗೆ (Shivamogga Airport) ಪ್ರಧಾನಿ ಮೋದಿ ಬಂದಿಳಿಯಲಿದ್ದಾರೆ. ಬೆಳಗ್ಗೆ 11:30ಕ್ಕೆ ಏರ್ಪೋರ್ಟ್ ಲೋಕಾರ್ಪಣೆ ಆಗಲಿದೆ. ಇದೇ ವೇಳೆ ಯಡಿಯೂರಪ್ಪಗೆ 80ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲಿರುವ ಮೋದಿ, ಕೇಂದ್ರ-ರಾಜ್ಯದ ಯೋಜನಾ ಕಾಮಗಾರಿಗಳಿಗೆ ಚಾಲನೆ ನೀಡುತ್ತಾರೆ. ಬಳಿಕ ಏರ್ಪೋರ್ಟ್ನಲ್ಲೇ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾರೆ.
ಶಿವಮೊಗ್ಗ ಬಳಿಕ ಬೆಳಗಾವಿಗೆ ಮೋದಿ ಲಗ್ಗೆ
ಶಿವಮೊಗ್ಗ ಕಾರ್ಯಕ್ರಮ ಮುಗಿಸಿ ಪ್ರಧಾನಿ ಮೋದಿ ಬೆಳಗಾವಿಗೆ ಪ್ರಯಾಣ ಬೆಳೆಸುತ್ತಾರೆ. ಬೆಳಗಾವಿಯಲ್ಲಿ ಮೋದಿ ಅಭಿವೃದ್ಧಿ ಹೆಸರಲ್ಲಿ ಮತಬೇಟೆ ನಡೆಸುತ್ತಾರೆ. ಬೆಳಗಾವಿ ನಗರದಲ್ಲಿ ಮೋದಿ 10 ಕಿಲೋ ಮೀಟರ್ಗೂ ಹೆಚ್ಚು ದೂರ ರೋಡ್ಶೋ ನಡೆಸಿ ಆಮೇಲೆ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
Looking forward to being among the people of Belagavi tomorrow! https://t.co/8w9vQRR6NG
— Narendra Modi (@narendramodi) February 26, 2023
ಮೋದಿ ಸ್ವಾಗತಿಸಲಿರುವ ಜನಸಾಮಾನ್ಯರು
ಶಿವಮೊಗ್ಗದಿಂದ ಬೆಳಗಾವಿಗೆ ಬಂದಿಳಿದಾಗ ಮೋದಿಯವರನ್ನು ಸ್ವಾಗತಿಸೋದು ಸಾಮಾನ್ಯ ನಾಗರೀಕರು, ಪೌರ ಕಾರ್ಮಿಕರು. ಹೌದು, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ನೇಕಾರ ಕಲ್ಲಪ್ಪ ಟೋಪಗಿ, ಪೌರ ಕಾರ್ಮಿಕ ಮಹಿಳೆ ಮೀನಾಕ್ಷಿ, ರೈತ ಕಾರ್ಮಿಕ ಮಹಿಳೆ ಶೀಲಾ ಖನ್ನುಕರ್, ಆಟೋ ಚಾಲಕ ಮಯೂರ ಚೌಹಾಣ್, ಕಟ್ಟಡ ಕಾರ್ಮಿಕ ಮಂಗೇಶ್ ಅವರು ಮೋದಿಯವರನ್ನು ಬರಮಾಡಿಕೊಳ್ಳಲಿದ್ದಾರೆ.
ಮೋದಿ ವೇದಿಕೆಗೆ ಸಿರಿಧಾನ್ಯಗಳಿಂದ ಸಿಂಗಾರ
ಇನ್ನು, ಕರ್ನಾಟಕದ ಸಿರಿಧಾನ್ಯಗಳ ಬಗ್ಗೆ ಮೋದಿ ಪದೇ ಪದೇ ಮಾತನಾಡುತ್ತಿದ್ದಾರೆ. ಹಾಗಾಗಿ ಬೆಳಗಾವಿ ಕೃಷಿ ಇಲಾಖೆ ವೇದಿಕೆಯ ಮುಂಭಾಗವನ್ನು ಸಿರಿಧಾನ್ಯಗಳಿಂದ ಸಿಂಗರಿಸುತ್ತಾರೆ. ಹಾಗೇ ಪಿಎಂ ಕಿಸಾನ್, ಜಿ 20, ಅಂತಾರಾಷ್ಟ್ರೀಯ ಮಟ್ಟದ ಮಿಲೇಟ್ಸ್ ವರ್ಷದ ಲೋಗೋಗಳನ್ನ ಸಿರಿಧಾನ್ಯದಲ್ಲಿ ಬಿಡಿಸಲಾಗಿದೆ.
ಉದ್ಘಾಟನೆ, ಶಂಕುಸ್ಥಾಪನೆ, ಹಣ ಬಿಡುಗಡೆ
ನಾಳೆ ಬೆಳಗಾವಿ ಸಮಾವೇಶದಲ್ಲಿ ಮೋದಿ ಹಲವು ಜನಪರ ಕೆಲಸಗಳಿಗೆ ನಾಂದಿ ಹಾಡಲಿದ್ದಾರೆ. 16,000 ಕೋಟಿ ರೂಪಾಯಿ ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಮಾಡಲಿದ್ದಾರೆ. ಬಳಿಕ 190 ಕೋಟಿ ರೂಪಾಯಿ ವೆಚ್ಚದ ರೈಲು ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೆ, 1098 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ ಲೋಕಾರ್ಪಣೆ ಮಾಡಲಿದ್ದು, 1,132 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ.
ಬೆಳಗಾವಿ ಸಮಾವೇಶಕ್ಕೆ ಸುಮಾರು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮಕ್ಕೆ 15 ಎಲ್‌ಇಡಿ ಸ್ಕ್ರೀನ್ ಹಾಕಿದ್ದಾರೆ. 50 ಎಕರೆ ಪ್ರದೇಶದಲ್ಲಿ 3 ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಸಮಾವೇಶಕ್ಕೆ ಬರುವ ಜನರಿಗೆ 1,500ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಬಂದವರಿಗೆಲ್ಲಾ ಊಟದ ವ್ಯವಸ್ಥೆಯೂ ಇದೆ. ಜೊತೆಗೆ ಅಷ್ಟೇ ಬಿಗಿ ಭದ್ರತೆಯನ್ನೂ ಹಾಕಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ