ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ನಡುವಿನ ಭಿನ್ನಮತ ಸ್ಫೋಟಕ್ಕೆ ಕಾರಣವೇನು ಗೊತ್ತಾ?

news18
Updated:September 5, 2018, 7:49 AM IST
ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ನಡುವಿನ ಭಿನ್ನಮತ ಸ್ಫೋಟಕ್ಕೆ ಕಾರಣವೇನು ಗೊತ್ತಾ?
  • Advertorial
  • Last Updated: September 5, 2018, 7:49 AM IST
  • Share this:
ನ್ಯೂಸ್ 18 ಕನ್ನಡ

ಬೆಳಗಾವಿ (ಸೆ.5): ಕಾಂಗ್ರೆಸ್​ ಮುಖಂಡರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಈಗ ಭಿನ್ನಮತ ಭುಗಿಲೆದ್ದಿದೆ. ಆತ್ಮೀಯ ಸ್ನೇಹಿತರಾಗಿದ್ದ ಇವರಿಬ್ಬರ ನಡುವೆ ಏಕಾಏಕಿ ಮನಸ್ತಾಪ ಶುರುವಾಗಲು ಹಲವು ಕಾರಣಗಳೇ ಇವೆ.

ಅಸಲಿಗೆ ಈ ಇಬ್ಬರು ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್​ನ ಪ್ರಭಾವಶಾಲಿ ನಾಯಕರು. ರಾಜಕೀಯ ಶಕ್ತಿ, ಆರ್ಥಿಕ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಮಿಗಿಲಾಗಿ ಇದ್ದಾರೆ. ಇದೇ ಹಣದ  ವಿಚಾರವಾಗಿಯೇ ಇವರಿಬ್ಬರ ನಡುವೆ ಈಗ ಮನಸ್ತಾಪ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಸಕ್ಕರೆ ಕಾರ್ಖಾನೆಗೆ ಹಿಂದಿನ ಸರ್ಕಾರವೇ ಶೂರಿಟಿ  ನೀಡಿತ್ತಂತೆ. ಅದರಂತೆ ಹೆಬ್ಬಾಳ್ಕರ್ ಅವರು ವಿಜಯಪುರ, ಬೆಳಗಾವಿ, ಸಿರಸಿ, ಮಂಗಳೂರು ಬ್ಯಾಂಕ್​ಗಳಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಇದರ ಜೊತೆಗೆ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕೋಟಿ, ಕೋಟಿ ವ್ಯವಹಾರ ನಡೆದಿದ್ದು, ಕೊಡು-ತೆಗೆದುಕೊಳ್ಳುವಿಕೆ ವ್ಯವಹಾರದಲ್ಲಿ ಇಬ್ಬರ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ ಎಂಬ ಮಾತುಗಳು ಬೆಳಗಾವಿ ಜನರಲ್ಲಿ ಕೇಳಿಬರುತ್ತಿವೆ.

ಇಬ್ಬರ ನಡುವಿನ ಭಿನ್ನಮತ ತಾರಕಕ್ಕೇರಿದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸಂಧಾನ ಸಭೆಯೂ ಕೂಡ ಈಚೆಗೆ ನಡೆದಿತ್ತು. ಆದರೆ, ಆ ಸಭೆಯಲ್ಲಿ ರಮೇಶ್​ ಜಾರಕಿಹೊಳಿ ಸಿಟ್ಟಿಗೆದ್ದು, ಬೆಳಗಾವಿ ವಿಚಾರದಲ್ಲಿ ಯಾರೇ ತಲೆ ಹಾಕಿದರೂ ತಾವು ರಾಜೀನಾಮೆ ನೀಡಿ ಹೊರಹೋಗುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ರಮೇಶ್​ ಮಾತಿನಿಂದ ಕಂಗಾಲಾದ ವೇಣುಗೋಪಾಲ್ ಈ ವಿಚಾರವನ್ನು ಹೈಕಮಾಂಡ್​ಗೆ ಮುಟ್ಟಿಸಿದ್ದರು. ಆನಂತರ ಭಿನ್ನಮತ ಶಮನದ ಜವಾಬ್ದಾರಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್​ ವಹಿಸಿತು ಎನ್ನಲಾಗಿದೆ.

ಕೆ.ಸಿ.ವೇಣುಗೋಪಾಲ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಅದೇ ದಿನ ಒಂದು ತಾಸಿಗೂ ಅಧಿಕ ಪ್ರತ್ಯೇಕ ಮಾತುಕತೆ ನಡೆಸಿದಾಗಲೂ  ಲಕ್ಷ್ಮೀ ಕಣ್ಣೀರು ಹಾಕಿಕೊಂಡು, ರಮೇಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ, ಡಿಕೆಶಿ, ಡಿಸಿಎಂ ಪರಮೇಶ್ವರ್ ಮುಂದೆಯೂ ಕಣ್ಣೀರು ಹಾಕಿದ್ದರು. ಇದೇ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲೂ ಜಾರಕಿಹೊಳಿ, ಹೆಬ್ಬಾಳ್ಕರ್ ನಡುವೆ ಮಾತುನ ಚಕಮಕಿ ನಡೆದಿತ್ತು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...