• Home
  • »
  • News
  • »
  • state
  • »
  • Ashwini Puneeth Rajkumar: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅಶ್ವಿನಿ ಪುನೀತ್​ ರಾಜ್​ಕುಮಾರ್? ದೊಡ್ಮನೆ ಸೊಸೆಯ ದೊಡ್ಡ ನಿರ್ಧಾರ!

Ashwini Puneeth Rajkumar: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅಶ್ವಿನಿ ಪುನೀತ್​ ರಾಜ್​ಕುಮಾರ್? ದೊಡ್ಮನೆ ಸೊಸೆಯ ದೊಡ್ಡ ನಿರ್ಧಾರ!

ಅಶ್ವಿನಿ ಪುನೀತ್​ ರಾಜ್​ಕುಮಾರ್, ಪುನೀತ್​ ರಾಜ್​ ಕುಮಾರ್​

ಅಶ್ವಿನಿ ಪುನೀತ್​ ರಾಜ್​ಕುಮಾರ್, ಪುನೀತ್​ ರಾಜ್​ ಕುಮಾರ್​

ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಮೇಲೆ ರಾಜಕೀಯ ಪ್ರವೇಶಿಸುವಂತೆ ವಿವಿಧ ಪಕ್ಷಗಳು ಒತ್ತಡ ಹೇರುತ್ತಿವೆಯಂತೆ.‘ ಆದ್ರೆ ದೊಡ್ಮನೆ ಸೊಸೆ ಮಾತ್ರ ದೊಡ್ಡ ನಿರ್ಧಾರವನ್ನೇ ಕೈಗೊಂಡಿದ್ದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ಡಿ.08): ರಾಜಕುಮಾರ್ (Raj Kumar)​​ ಕುಟುಂಬವನ್ನು ಸ್ಯಾಂಡಲ್​ವುಡ್​ನಲ್ಲಿ ದೊಡ್ಮನೆ ಎಂದೇ ಕರೀತಾರೆ. ಕರ್ನಾಟಕದಾದ್ಯಂತ ರಾಜ್​ ಫ್ಯಾಮಿಲಿ (Raj Family) ಬಹುದೊಡ್ಡ ಅಭಿಮಾನಿ ಬಳಗ ಹೊಂದಿದೆ. ಅಣ್ಣಾವ್ರ ಇದ್ದಾಗಲು ರಾಜಕೀಯ ಪ್ರವೇಶಕ್ಕೆ ಒತ್ತಡ ಹೆಚ್ಚಿತ್ತು ಆದ್ರೂ ರಾಜ್​ ಕುಮಾರ್​ ಅವರು ರಾಜಕಾರಣದಿಂದ (Politics) ದೂರ ಉಳಿದಿದ್ರು.  ಅವರ ಮಕ್ಕಳಾದ ಶಿವರಾಜ್​ ಕುಮಾರ್​, ರಾಘವೇಂದ್ರ ರಾಜ್​ ಕುಮಾರ್​ ಹಾಗೂ ಸಹ ಅವರ ಹಾದಿಯಲ್ಲೇ ಸಾಗ್ತಿದ್ದಾರೆ. ಕೊನೆಯ ಮಗ ದಿವಂಗತ ಪುನೀತ್ ರಾಜ್​ ಕುಮಾರ್ (Puneeth Rajkumar) ಸಹ ರಾಜಕೀಯದಿಂದ ದೂರ ಉಳಿದಿದ್ರು​ . ಆದ್ರೆ ಇದೀಗ ಅಪ್ಪು ಕನಸನ್ನು ನನಸು ಮಾಡುವ ಹಾದಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar)​ ಅವರು ರಾಜಕೀಯ ಪ್ರವೇಶಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.


ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​


ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ನಿಧನದ ಬಳಿಕ ಪಿಆರ್​ಕೆ ಪ್ರೊಡೆಕ್ಷನ್​ನ ಸಂಪೂರ್ಣ ಹೊಣೆ ಹೊತ್ತಿರುವ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಅವರು ಚಿತ್ರರಂಗದಲ್ಲಿ ಅಪ್ಪು ಕಂಡ ಕನಸನ್ನು ನನಸು ಮಾಡಲು ಹೊರಟಿದ್ದಾರೆ. ಅಶ್ವಿನಿ ಅವರನ್ನು ರಾಜಕೀಯಕ್ಕೆ ಕರೆತರಲು ರಾಜಕೀಯ ನಾಯಕರು ಮುಂದಾಗಿದ್ದಾರಂತೆ. ಅಷ್ಟೇ ಅಲ್ಲದೇ ಅಶ್ವಿನಿ ಅವರ ಮೇಲೆ ರಾಜಕೀಯ ಪ್ರವೇಶಿಸುವಂತೆ ವಿವಿಧ ಪಕ್ಷಗಳು ಒತ್ತಡ ಹೇರುತ್ತಿವೆಯಂತೆ.
ದೊಡ್ಮನೆ ಸೊಸೆಯ ನಿರ್ಧಾರ ಏನು?


ವಿವಿಧ ಪಕ್ಷಗಳ ದೊಡ್ಡ ದೊಡ್ಡ ನಾಯಕರೇ ಅಶ್ವಿನಿ ಪುನೀತ್​ ರಾಜ್​ ಕುಮಾರ್ ಅವರ ಮನೆ ಬಾಗಿಲಿಗೆ ಹೋಗಿ ರಾಜಕೀಯಕ್ಕೆ ಪ್ರವೇಶಿಸುವಂತೆ ಒತ್ತಡ ಹಾಕಿದ್ದಾರೆ. ಆದ್ರೆ ದೊಡ್ಮನೆ ಸೊಸೆ ಮಾತ್ರ ದೊಡ್ಡ ನಿರ್ಧಾರವನ್ನೇ ಕೈಗೊಂಡಿದ್ದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.


ನಾನು ರಾಜಕೀಯಕ್ಕೆ ಬರೋದಿಲ್ಲ- ಅಶ್ವಿನಿ


ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್​ ಕುಮಾರ್ ಅವರು ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡಿದ್ದಾರಂತೆ. ಪತಿ ಪುನೀತ್ ಹಾದಿಯಲ್ಲೇ ಸಾಗಿ, ರಾಜಕೀಯ ಸಹವಾಸದಿಂದ ದೂರ ಇರಲು ಅಶ್ವಿನಿಯವ್ರು ನಿರ್ಧರಿಸಿದ್ದಾರಂತೆ.


ರಾಜಕೀಯಕ್ಕೆ ಬರಲು ನೋ ಎಂದಿದ್ರು ಅಪ್ಪು


ಈ ಹಿಂದೆ ಪುನೀತ್‌ ರಾಜ್​ ಕುಮಾರ್ ಅವರಿಗೂ ಸಹ ರಾಜಕೀಯಕ್ಕೆ ಬರಲು ಆಫರ್ ನೀಡಿದ್ದರು ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಸ್ವತಃ ಡಿಕೆ ಶಿವಕುಮಾರ್ ಕೂಡ ಪುನೀತ್‌ರನ್ನು ರಾಜಕೀಯಕ್ಕೆ ತರಲು ಎಷ್ಟೇ ಪ್ರಯತ್ನಪಟ್ಟರೂ ಆಗಲಿಲ್ಲ ಎಂದು ಪುನೀತ್ ನಿಧನದ ನಂತರ ಅವರೇ ಹೇಳಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಜಗ್ಗೇಶ್, ನಿರ್ಮಾಪಕ ಎಸ್ ವಿ ಬಾಬು ಅವರು ಪುನೀತ್‌ರನ್ನು ಭೇಟಿ ಮಾಡಿ ರಾಜಕೀಯಕ್ಕೆ ಬರಲು ಆಹ್ವಾನ ನೀಡಿದ್ದರಂತೆ.


ಯಾಕೆ ರಾಜಕೀಯಕ್ಕೆ ಬರಲಿಲ್ಲ ಡಾ.ರಾಜ್​ಕುಮಾರ್?
Published by:ಪಾವನ ಎಚ್ ಎಸ್
First published: