ಮಹಾಬಲಿಪುರಂಗೆ ಆಗಮಿಸಿದ ಮೋದಿ-ಕ್ಸಿ ಜಿನ್​ಪಿಂಗ್; ಎರಡು ದಿನಗಳ ಶೃಂಗಸಭೆ, ಭಾರತ-ಚೀನಾ ಸಂಬಂಧ ಸುಧಾರಿಸುವ ಸಾಧ್ಯತೆ?

ಈ ಭೇಟಿಯಲ್ಲಿ ಎರಡೂ ಪಕ್ಷದ ನಾಯಕರ ಉಬಯ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟು ಗಡಿ ವಿಚಾರ ಹಾಗೂ ಜಮ್ಮು ಕಾಶ್ಮೀರ ವಿಚಾರದ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಭೇಟಿ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.

ನರೇಂದ್ರ ಮೋದಿ ಮತ್ತು ಕ್ಸಿ ಜಿನ್​ಪಿಂಗ್.

ನರೇಂದ್ರ ಮೋದಿ ಮತ್ತು ಕ್ಸಿ ಜಿನ್​ಪಿಂಗ್.

  • Share this:
ಚೆನ್ನೈ (ಅಕ್ಟೋಬರ್ 11); ತಮಿಳುನಾಡಿನ ರಾಜಧಾನಿಯಿಂದ ಕೇವಲ 60 ಕಿಮೀ ದೂರ ಇರುವ ಮಹಾಬಲಿಪುರಂನಲ್ಲಿ ನಡೆಯಲಿರುವ ಎರಡು ದಿನಗಳ ಅನೌಪಚಾರಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಈಗಾಗಲೇ ಚೆನ್ನೈಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈಗೆ ಆಗಮಿಸಿದ ಉಬಯ ರಾಷ್ಟ್ರದ ನಾಯಕರಿಗೆ ಅಲ್ಲಿನ ಸರ್ಕಾರ ಅಭುತಪೂರ್ವ ಸ್ವಾಗತ ಕೋರಿದೆ. ಅಲ್ಲದೆ, ಎರಡು ದಿನಗಳ ಶೃಂಗಸಭೆ ನಿಮಿತ್ತ 5 ಸಾವಿರ ಪೊಲೀಸರ ಬಿಗಿ ಪೊಲೀಸ್​ ಬಂದೋಬಸ್ತ್​​ ನೀಡಲಾಗಿದೆ.

ಭಾರತ ಮತ್ತು ಚೀನಾ ನಡುವಿನ ವ್ಯಾಪರ ವಹಿವಾಟನ್ನು ಸುಧಾರಿಸುವ ಹಾಗೂ ಎರಡೂ ರಾಷ್ಟ್ರಗಳ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಚೀನಾದ ವುಹಾನ್ ಎಂಬಲ್ಲಿ ಎರಡೂ ರಾಷ್ಟ್ರದ ನಾಯಕರು ಮೊದಲ ಬಾರಿಗೆ ಅನೌಪಚಾರಿಕ ಶೃಂಗಸಭೆ ನಡೆಸಿದ್ದರು. ಈ ವೇಳೆ ಅನೇಕ ಪ್ರಮುಖ ವಿಚಾರಗಳ ಕುರಿತು ಚರ್ಚೆ ಮಾಡಿದ್ದರು.

ಇದೀಗ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಲಿರುವ ಎರಡು ದಿನಗಳ ಅನೌಪಚಾರಿಕ ಶೃಂಗಸಭೆಯಲ್ಲಿ ಈ ಮಾತುಕತೆ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಜಮ್ಮು ಕಾಶ್ಮೀರಕ್ಕೆ ಕಲಂ 370ರ ಅಡಿಯಲ್ಲಿ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಮೋದಿ ಹಾಗೂ ಕ್ಸಿ ಜಿನ್​ಪಿಂಗ್ ಮೊದಲ ಬಾರಿಗೆ ಭೇಟಿಯಾಗುತ್ತಿದ್ದು, ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಈ ಭೇಟಿಯಲ್ಲಿ ಎರಡೂ ಪಕ್ಷದ ನಾಯಕರ ಉಬಯ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟು ಗಡಿ ವಿಚಾರ ಹಾಗೂ ಜಮ್ಮು ಕಾಶ್ಮೀರ ವಿಚಾರದ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಭೇಟಿ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಚೆನ್ನೈನಲ್ಲಿ ಅ.11ರಂದು ಮೋದಿ, ಜಿನ್​ಪಿಂಗ್ ಶೃಂಗಸಭೆ; ಕಾಶ್ಮೀರ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ ನಡೆಸುವ ಸಾಧ್ಯತೆ?

First published: