HOME » NEWS » State » WHAT IS THE WRONG WITH PRAHLAD JOSHI STATMENT AGAINST NEHRU FAMILY BJP CLARIFIES IN TWEET MAK

ಪ್ರಹ್ಲಾದ್​ ಜೋಶಿ ನೆಹರು ಕುಡಿಗಳನ್ನು ನಕಲಿ ಗಾಂಧಿಗಳು ಎಂದಿದ್ದರಲ್ಲಿ ತಪ್ಪೇನಿದೆ?; ಟ್ವೀಟ್​ನಲ್ಲಿ ಸ್ಪಷ್ಟನೆ ನೀಡಿದ ಬಿಜೆಪಿ!

ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸಂಜಯ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು? ಎಂದು ಬಿಜೆಪಿ ಪ್ರಶ್ನಿಸಿದೆ.

news18-kannada
Updated:April 7, 2021, 5:52 PM IST
ಪ್ರಹ್ಲಾದ್​ ಜೋಶಿ ನೆಹರು ಕುಡಿಗಳನ್ನು ನಕಲಿ ಗಾಂಧಿಗಳು ಎಂದಿದ್ದರಲ್ಲಿ ತಪ್ಪೇನಿದೆ?; ಟ್ವೀಟ್​ನಲ್ಲಿ ಸ್ಪಷ್ಟನೆ ನೀಡಿದ ಬಿಜೆಪಿ!
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
  • Share this:
ಬೆಂಗಳೂರು (ಏಪ್ರಿಲ್ 07); ಕಾಂಗ್ರೆಸ್​ ಪಕ್ಷ ಮತ್ತು ಇಂದಿರಾ ಗಾಂಧಿ ಆದಿಯಾಗಿ ಎಲ್ಲಾ ನೆಹರು ಕುಡಿಗಳ ವಿರುದ್ಧ ಬಿಜೆಪಿ ನಾಯಕರು ನೇರವಾಗಿ ಮತ್ತು ಪರೋಕ್ಷವಾಗಿ ದಾಳಿ ಮಾಡುವುದು ಹೊರ ವಿಚಾರವೇನಲ್ಲ. ಇಂತಹದ್ದೇ ಒಂದು ಪ್ರಸಂಗಕ್ಕೆ ಇದೀಗ ಬಿಜೆಪಿ ಮತ್ತೊಮ್ಮೆ ನಾಂದಿ ಹಾಡಿದೆ. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, "ದೇಶದಲ್ಲಿ ಈಗಿರುವುದು ನಕಲಿ ಕಾಂಗ್ರೆಸ್​ ಪಕ್ಷ ಮತ್ತು ನಕಲಿ ಗಾಂಧಿಗಳು" ಎಂದು ಕಿಡಿಕಾರಿದ್ದರು. ಆದರೆ, ಇದೇ ವಿಚಾರವನ್ನು ರಾಜ್ಯ ಬಿಜೆಪಿ ಘಟಕ ಮತ್ತೆ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲೂ ಉಲ್ಲೇಖಿಸುವ ಮೂಲಕ ಕಾಂಗ್ರೆಸ್​ ಪಕ್ಷವನ್ನು ಹೀಯಾಳಿಸಿದೆ.

ಹೌದು, ಕೇಂದ್ರ ಸಚಿವ @JoshiPralhad ಅವರ ಹೇಳಿಕೆಯಲ್ಲಿ ನೂರಕ್ಕೆ ನೂರು ಸತ್ಯಾಂಶವಿದೆ.


√ ನೆಹರೂ ಕುಟುಂಬಕ್ಕೆ ʼಗಾಂಧಿʼ ಎಂಬ ಸರ್‌ನೇಮ್‌ ಅಂಟಿಕೊಂಡಿದ್ದು ಹೇಗೆ?

√ ನೆಹರೂವಿಗೆ ಜನಿಸಿದ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಬೇಕಿತ್ತು.

√ ಇಂದಿರಾ ಗಾಂಧಿ ಆಗಿದ್ದು ಹೇಗೆ?#FakeGandhis pic.twitter.com/pPjj1Ca5xP


— BJP Karnataka (@BJP4Karnataka) April 7, 2021

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, "ಹೌದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಯಲ್ಲಿ ನೂರಕ್ಕೆ ನೂರು ಸತ್ಯಾಂಶವಿದೆ. ನೆಹರೂ ಕುಟುಂಬಕ್ಕೆ ʼಗಾಂಧಿʼ ಎಂಬ ಸರ್‌ನೇಮ್‌ ಅಂಟಿಕೊಂಡಿದ್ದು ಹೇಗೆ? ನೆಹರೂವಿಗೆ ಜನಿಸಿದ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ?ಫಿರೋಜ್‌ ಗ್ಯಾಂಡಿ ಮತ್ತು ಇಂದಿರಾ ಪ್ರಿಯದರ್ಶಿನಿ ಅವರ ಪುತ್ರ ರಾಜೀವ್‌ ಅವರು ರಾಜೀವ್ ಫಿರೋಜ್‌ ಆಗಬೇಕಿತ್ತು. ‌ರಾಜೀವ್ ಗಾಂಧಿ ಆಗಿದ್ದು ಹೇಗೆ? ರಾಬರ್ಟ್‌ ವಾದ್ರಾರನ್ನು ಮದುವೆಯಾದ ಪ್ರಿಯಾಂಕ ಅವರು ಪ್ರಿಯಾಂಕ ವಾದ್ರಾ ಆಗಬೇಕಿತ್ತು. ಪ್ರಿಯಾಂಕ ಗಾಂಧಿ ಆಗಿದ್ದೇಗೆ? ಗಾಂಧಿ ನಾಮ ನಕಲಿಯೋ ಅಥವಾ ಕುಟುಂಬವೇ ನಕಲಿಯೋ?" ಎಂದು ಕಟುವಾಗಿ ಪ್ರಶ್ನಿಸಿದೆ.ಮತ್ತೊಂದು ಟ್ವೀಟ್​ನಲ್ಲಿ, "ನೆಹರೂ ಕುಟುಂಬಕ್ಕೆ ಗಾಂಧಿ ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದು ಇಂದಿಗೂ ಭಾರತೀಯರನ್ನು ಕಾಡುತ್ತಿದೆ. ಗಾಂಧಿ ಎಂಬ ಹೆಸರು ನೆಹರೂ ಕುಟುಂಬಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಪ್ರಿಯದರ್ಶಿನಿ ಇಂದಿರಾ ಅವರಿಗೆ ಗಾಂಧಿ ಹೆಸರು ಅಂಟಿಸಿಬಿಟ್ಟರು ಹೀಗಿರುವಾಗ, ನೆಹರೂ ಸಂತತಿಯನ್ನು ನಕಲಿ ಗಾಂಧಿ ಎನ್ನುವುದರಲ್ಲಿ ಏನು ತಪ್ಪಿದೆ ?ಇಂದಿರಾ ಪ್ರಿಯದರ್ಶಿನಿ ಅವರನ್ನು ಫಿರೋಜ್‌ ಗ್ಯಾಂಡಿ ಅವರಿಗೆ ಮದುವೆ ಮಾಡಿಕೊಡಲಾಯಿತು. ಒಂದೋ ಇಂದಿರಾ ನೆಹರೂ ಆಗಬೇಕಿತ್ತು, ಅಥವಾ ಇಂದಿರಾ ಫಿರೋಜ್‌ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಉತ್ತರಿಸುವಿರಾ?ತಾತ ಮುತ್ತಾತ ಯಾರಿಗೂ ಗಾಂಧಿ ಎಂಬ ಉಪನಾಮ ಇರಲಿಲ್ಲ, ಇವರಿಗೆ ಅಂಟಿಕೊಂಡಿದ್ದು ಹೇಗೆ? ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸಂಜಯ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು?" ಎಂದು ಪ್ರಶ್ನಿಸಿದೆ.
Published by: MAshok Kumar
First published: April 7, 2021, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories