Bidnal: ಈ ಹಳ್ಳಿಯಲ್ಲಿರುವ ಸ್ವತಂತ್ರ ವೃಕ್ಷದ ಮಹತ್ವವೇನು? ಸ್ವಾತಂತ್ರ್ಯೋತ್ಸವದಂದು ಇಲ್ಲಿ ಹಬ್ಬದ ಸಂಭ್ರಮವೇಕೆ?

ದೇಶದ ಸ್ವಾತಂತ್ರ್ಯದ ನೆನಪಿಗಾಗಿ ಹಳ್ಳಿಯ ಹಿರಿಯರು ಬನ್ನಿ ಸಸಿ ನೆಡಲು ಸಿದ್ಧತೆ ನಡೆಸುತ್ತಿದ್ದರೆ ಅವರನ್ನು ಸುತ್ತುವರೆದ ಮಕ್ಕಳು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೌತುಕದಿಂದ, ಖುಷಿಯಿಂದ ನಕ್ಕು ನಲಿಯುತ್ತಾ ಸ್ನೇಹಿತರ ಗುಂಪಿನಲ್ಲಿ ಆಡುತ್ತಿದ್ದರು.

ಬಿದ್ನಾಲ್ ಹಳ್ಳಿಯಲ್ಲಿರುವ ಸ್ವತಂತ್ರ ವೃಕ್ಷ

ಬಿದ್ನಾಲ್ ಹಳ್ಳಿಯಲ್ಲಿರುವ ಸ್ವತಂತ್ರ ವೃಕ್ಷ

  • Share this:

ಆಗಸ್ಟ್ 15, 1947 ರಂದು ಹುಬ್ಬಳ್ಳಿಯಿಂದ (Hubballi) 4.4 ಕಿ.ಮೀ ದೂರವಿರುವ ಬಿದ್ನಾಲ್ ಹಳ್ಳಿಯಲ್ಲಿ (Bidnal village) ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ದೇಶದ ಸ್ವಾತಂತ್ರ್ಯದ ನೆನಪಿಗಾಗಿ (In memory of freedom) ಹಳ್ಳಿಯ ಹಿರಿಯರು ಬನ್ನಿ ಸಸಿ ನೆಡಲು ಸಿದ್ಧತೆ ನಡೆಸುತ್ತಿದ್ದರೆ ಅವರನ್ನು ಸುತ್ತುವರೆದ ಮಕ್ಕಳು (Children) ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೌತುಕದಿಂದ, ಖುಷಿಯಿಂದ ನಕ್ಕು ನಲಿಯುತ್ತಾ ಸ್ನೇಹಿತರ (Friends) ಗುಂಪಿನಲ್ಲಿ ಆಡುತ್ತಿದ್ದರು. ಅಲ್ಲಿದ್ದ ಮಕ್ಕಳು ಒಂಭತ್ತರಿಂದ ಹನ್ನೊಂದರ ಹರೆಯದವರು. ಈಗ ತಮ್ಮ ಎಂಭತ್ತರ ದಶಕದಲ್ಲಿ ಆಗಿನ ಸ್ವಾತಂತ್ರ್ಯದ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.


ಈ ಎಂಟೂ ಜನರು ಇದೀಗ ದೇಶದ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಿದ್ಧತೆ ನಡೆಸಿದ್ದಾರೆ ಎಂದರೆ ತಪ್ಪಾಗಲಾರದು. ತಮ್ಮ ಹಿರಿಯರು ಮಾಡಿದಂತೆಯೇ ಹಳ್ಳಿಯ ಇತರ ಭಾಗಗಳಲ್ಲಿ ಬನ್ನಿ ಸಸಿಗಳನ್ನು ವರ್ಷಕ್ಕೆ ಒಂದರಂತೆ 1947 ರಿಂದ ನೆಡುತ್ತಾ ಬಂದಿದ್ದಾರೆ. ನೆಟ್ಟ ಸಸಿಗಳಿಗೆ ಸ್ವಾತಂತ್ರ್ಯದ ವೃಕ್ಷ ಎಂಬ ಬಿರುದನ್ನು ನೀಡಿ ಈ ದಿನದಂದು ಸಂಭ್ರಮದ ಆಚರಣೆಯನ್ನು ಮಾಡುತ್ತಾರೆ.


ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಹಿರಿಯರು
ಈ ಎಂಟು ಹಿರಿಯರಲ್ಲಿ ಒಬ್ಬರಾದ 84 ರ ಹರೆಯದ ಸಿದ್ದಪ್ಪ ಆ ಸಮಯದಲ್ಲಿ ಬಿದ್ನಾಲ್‌ನ ಸರಕಾರಿ ಕನ್ನಡ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂಬ ನೆನಪನ್ನು ಮೆಲುಕು ಹಾಕಿದರು. ಅವರ ಮುಖ್ಯೋಪಾಧ್ಯಾಯರು ಮತ್ತು ಗುರುಗಳು ಅದರಗುಂಚಿಯವರಾಗಿದ್ದು ವಿದ್ಯಾರ್ಥಿಗಳಿಗೆ ಲಡ್ಡು ಹಂಚುತ್ತಿದ್ದರು. ಇದಾದ ನಂತರ ಸಸಿ ನೆಡುವಲ್ಲಿಗೆ ಮಕ್ಕಳೆಲ್ಲರೂ ತೆರಳುತ್ತಿದ್ದರು.


ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ
ಸ್ವಾತಂತ್ರ್ಯದ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಹಳ್ಳಿಯ ಇತರರಂತೆ ಮೇಥಿ ಹಾಗೂ ಅವರ ಸ್ನೇಹಿತರು ಹಳ್ಳಿಯ ಇತರ ಹಿರಿಯರಾದ ಚನ್ನಮಲ್ಲಪ್ಪ ಅಸುಂದಿ ಮತ್ತು ಇತರರನ್ನು ಭೇಟಿಯಾದರು.


ಇದನ್ನೂ ಓದಿ:  Viral Video: ಹಣ್ಣು ಮಾರುವ ಮಹಿಳೆಗೆ ಶಾಲಾ ಮಕ್ಕಳು ಹೇಗೆ ಸಹಾಯ ಮಾಡ್ತಿದ್ದಾರೆ ಗೊತ್ತೇ? ಈ ವಿಡಿಯೋ ನೋಡಿ ಗೊತ್ತಾಗುತ್ತೆ

ಹಳ್ಳಿಯ ಇನ್ನೊಬ್ಬ ಹಿರಿಯರಾದ 85 ರ ಹರೆಯದ ಹುಸೈನ್‌ಸಾಬ್ ಆಲಿಸಾಬ್ ಹೇಳುವಂತೆ ಆ ದಿನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಊರಿನ ಹಿರಿಯರೆಲ್ಲರೂ ಸೇರಿ ಬನ್ನಿ ಸಸಿ ನೆಟ್ಟರು ನಿಜಕ್ಕೂ ಆ ದಿನ ವಿಶೇಷವಾದುದು. ಮೇಥಿಯಂತೆ ಮಲ್ಲೇಶಪ್ಪ ಹಾಗೂ ಅವರ ಸ್ನೇಹಿತರು ಲಡ್ಡು ಸೇವನೆಯ ನಂತರ ಸಸಿ ನೆಡುವ ಕಾರ್ಯಕ್ರಮ ನೋಡಲು ಓಡಿರುವುದನ್ನು ನೆನಪಿಸಿಕೊಂಡರು.


ಹನುಮಂತನ ಗುಡಿಯ ಹಿಂದೆ ಹಿರಿಯರು ಬನ್ನಿ ಸಸಿ ನೆಟ್ಟರು
ಸಸಿಯನ್ನು ಹನುಮಂತನ ಗುಡಿಯ ಹಿಂದೆ ನೆಡಲಾಯಿತು ಹಾಗೂ ಮರಕ್ಕೆ ಇಂದಿಗೂ ಪೂಜೆ ನಡೆಯುತ್ತಿದೆ. ಹಳ್ಳಿಯಲ್ಲಿ ಆಗ 20 ರಿಂದ 25 ಮನೆಗಳಿದ್ದದು ನೆನಪಿದೆ ಆದರೆ ಆ ದಿನ ಮೆರವಣಿಗೆ ಮಾಡಿರುವುದು ನನಗೆ ನೆನಪಿಲ್ಲ. ಆದರೆ ಲಡ್ಡು ಸೇವಿಸಿ ಮರ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದುದು ಚೆನ್ನಾಗಿ ನೆನಪಿದೆ ಎಂಬುದು ಅವರ ಸ್ಮರಣೆಯಾಗಿತ್ತು.


ಇದನ್ನೂ ಓದಿ: Viral Story: ಆತನದ್ದು ಆಂಧ್ರ ಪ್ರದೇಶ, ಆಕೆಯದ್ದು ಜರ್ಮನಿ! ಇಬ್ಬರ ಲವ್​ ಮ್ಯಾರೇಜ್​ ನಡೆದದ್ದು ಅಮೆರಿಕದಲ್ಲಿ

ಗಣೇಶ ಚತುರ್ಥಿ, ಮೊಹರಮ್ ಹೀಗೆ ಧರ್ಮ, ಜಾತಿ ಬೇಧವಿಲ್ಲದೆ ಬಿದ್ನಾಲ್ ಹಳ್ಳಿಯವರೆಲ್ಲರೂ ಒಂದಾಗಿ ಹಬ್ಬಗಳನ್ನು ಆಚರಿಸುತ್ತಾರೆ. ಪ್ರತೀ 33 ವರ್ಷಗಳಿಗೊಮ್ಮೆ ಹಬ್ಬಗಳು ಏಕಕಾಲದಲ್ಲಿ ಸಂಭವಿಸುತ್ತವೆ ಅದೇ ರೀತಿ ಹಳ್ಳಿಗರು ಎರಡೂ ಹಬ್ಬಗಳನ್ನು ಮೂರು ವರ್ಷಗಳಿಂದ ಜೊತೆಯಾಗಿ ಆಚರಿಸುತ್ತಿದ್ದಾರೆ.

Published by:Ashwini Prabhu
First published: