ಬೆಂಗಳೂರು, ಮೇ 13: ಶಿಕ್ಷಣ (Eduction) ಪ್ರತಿಯೊಬ್ಬರ ಜೀವನದಲ್ಲಿ (Life) ಅತ್ಯಂತ ಮಹತ್ವ ಪೂರ್ಣವಾಗಿರುತ್ತದೆ. ಇದೀಗ ಸದ್ಯ ರಾಜ್ಯದಲ್ಲಿ ಮಕ್ಕಳಿಗೆ ಬೇಸಿಗೆ ರಜೆಯ ಮಜದಲ್ಲಿದ್ದಾರೆ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಶಾಲೆಗಳು ಆರಂಭವಾಗುತ್ತದೆ. ಅಲ್ಲದೇ ಪ್ರತಿಬಾರಿಯಂತೆಯೇ ಈ ಬಾರಿಯೂ ಹೊಸದಾಗಿ ಮೊದಲ ವರ್ಷದ ಕಲಿಕೆಗೆ ಮಕ್ಕಳನ್ನು (Children) ಸೇರಿಸಿಸಲಾಗುತ್ತದೆ. ಆದರೆ ಪೋಷಕರಲ್ಲಿ ಪ್ರಮುಖವಾಗಿ ಯಾವ ವಯಸ್ಸಿನಲ್ಲಿ (Age) ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂಬ ಗೊಂದಲವಿರುತ್ತದೆ. ಇನ್ನೇನು ಶಾಲೆಗಳು ಪ್ರಾರಂಭವಾಗುವ ಮೊದಲು ಪೋಷಕರು ಮಕ್ಕಳನ್ನು ಸೇರಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿರುತ್ತಾರೆ. ಸರ್ಕಾರಿ ಶಾಲೆ ಸೇರಿದಂತೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಎಷ್ಟು ವಯಸ್ಸಾಗಿರಬೇಕು ಎನ್ನುವ ಗೊಂದಲಗಳಿರುತ್ತದೆ. ಈ ಗೊಂದಲಗಳಿಗೆ ಸರಿಯಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ.
ಯಾವ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗಳಗಿಗೆ ದಾಖಲಿಸಬೇಕು?:
- 3.5 ವರ್ಷ ರಿಂದ 4.5 ವರ್ಷ LKG
- 4.5 ವರ್ಷ ರಿಂದ 5.5 ವರ್ಷ UKG
-5.5 ವರ್ಷ ರಿಂದ 7 ವರ್ಷ ಒಂದನೇ ತರಗತಿ ರಾಜ್ಯ ಪಠ್ಯಕ್ರಮವನ್ನು ಬೋಧಿಸುವ ಶಾಲೆಗಳಲ್ಲಿ
- ಖಾಸಗಿ ಶಾಲೆಗಳು ಪ್ರೀ ನರ್ಸರಿ ಗೆ 2.5ರಿಂದ 3.5 ವಯಸ್ಸಿನ ಮಕ್ಕಳನ್ನು ದಾಖಲಿಸಿಕೊಳ್ಳುತ್ತಾರೆ.
ಮಕ್ಕಳ ವಯಸ್ಸಿನ ತೀರ್ಮಾನ ಹೇಗೆ?:
ಇನ್ನು, ಶಾಲೆಗಳಲ್ಲಿ ಮಕ್ಕಳ ವಯಸ್ಸನ್ನು ಒಂದು ನಿರ್ಧಿಷ್ಟ ಆಧಾರದ ಮೇಲೆ ತೀರ್ಮಾನಿಸಲಾಗುತ್ತದೆ. ಅದರಂತೆ ಮೊದಲಿಗೆ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕಾದಲ್ಲಿ ಮಾರ್ಚ್ 31 ಕ್ಕೆ ಮಗುವಿನ ವಯಸ್ಸು ಒಂದನೇ ತರಗತಿಗೆ 6 ವರ್ಷ ಪೂರ್ಣವಾಗಿರಬೇಕು ಎಂದು ಕೇಂದ್ರೀಯ ವಿದ್ಯಾಲಯ ತಿಳಿಸುತ್ತದೆ. ಈ ಕ್ರಮ ಹೀಗೆ ಮುಂದುವರೆದು, 4 ರಿಂದ 5 ವರ್ಷಕ್ಕೆ LKG, 5 ರಿಂದ 6 ವರ್ಷಕ್ಕೆ UKG ಹಾಗೂ 6 ರಿಂದ 7 ವರ್ಷಕ್ಕೆ ಒಂದನೇ ತರಗತಿ ಆಧಾರದ ಮೇಲೆ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಲಾಗುತ್ತದೆ. ಈ ಮಾದರಿಯನ್ನು ಎಲ್ಲಾ ಶಾಲಾ ವರ್ಗಗಳೂ ಅನುಸರಿಸುತ್ತದೆ.
ಇದನ್ನೂ ಓದಿ: SSLC Result: ಮುಂದಿನ ವಾರ ಹೊರಬೀಳಲಿದೆ SSLC ಫಲಿತಾಂಶ; ರಿಸಲ್ಟ್ ನೋಡಲು ಹೀಗೆ ಮಾಡಿ
ಏನಿದು 5+3+3+4 ಸೂತ್ರ:
ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಹೊಸ ಸೂತ್ರವನ್ನು ಮೊದಲಿನಿಂದಲೂ ಅಳವಡಿಸಿಕೊಂಡು ಬಂದಿದೆ. ಅದನ್ನು 5+3+3+4 ಸೂತ್ರvಎಂದು ಹೇಳಲಾಗುತ್ತದೆ. ಅದರಂತೆ ಶಾಲೆಗೆ ದಾಖಲಿಸುವ ಮಗುವಿನ ವಯಸ್ಸು 3 ರಿಂದ18ರ ವರೆಗೂ ಇರುವುರಿಂದ 5+3+3+4 ಎಂದು ನಿಗದಿ ಮಾರ್ಪಡಿಸಿದೆ. ಅದರಂತೆ 3ನೇ ವರ್ಷಕ್ಕೆ ಕಲಿಕೆ ಪ್ರಾರಂಭವಾಗಿ 6 ನೇ ವಯಸ್ಸಿಗೆ ಮಕ್ಕಳು ಒಂದನೇ ತರಗತಿಗೆ ಬರಲಿದ್ದಾರೆ.
ನರ್ಸರಿಯಿಂದ 2ನೇ ತರಗತಿಗೆ (5), ಮೂರರಿಂದ ಐದನೇ ತರಗತಿಗೆ(3) ಆರನೇ ತರಗತಿಯಿಂದ ಎಂಟನೇ ತರಗತಿವರೆಗೂ (3) ಮತ್ತು ಒಂಭತ್ತನೇ ತರಗತಿಯಿಂದ ಹನ್ನೆಡನೇ ತರಗತಿ (4) ಎಂದು ವಿಭಾಗಿಸುವ ಮೂಲಕ 5+3+3+4 ಸೂತ್ರವನ್ನು ಪರಿಚಯಿಸಿದೆ.
ಇದನ್ನೂ ಓದಿ: ಮೂರೇ ದಿನದಲ್ಲಿ ಸಿಗಲಿದೆ SSLC ಉತ್ತರ ಪತ್ರಿಕೆ: ನಕಲು ಪ್ರತಿ ಪಡೆಯೋದು ಹೇಗೆ?
ದೈಹಿಕ ಮತ್ತು ಮಾನಸಿಕ ಮೆದುಳಿನ ವ್ಯತ್ಯಾಸ:
ಇನ್ನು, ಈ ಕುರಿತು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಡಿ. ಶಶಿಕುಮಾರ್ ಹೇಳುವ ಪ್ರಕಾರ, "ಮಕ್ಕಳ ದೈಹಿಕ ಮತ್ತು ಮಾನಸಿಕ ವಯಸ್ಸು ವ್ಯತ್ಯಾಸವಿರುತ್ತದೆ. ಮಗುವಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ನೇರವಾಗಿ ಶಾಲೆಗೆ ದಾಖಲಾತಿ ಮಾಡಿದರೆ ಮಗುವಿನ ಕಲಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಅವರ ಮಾನಸಿಕ ಮೆದುಳಿನ ವಯಸ್ಸನ್ನು ಗುರುತಿಸಿ ದಾಖಲಿಸಿ. ಇನ್ನು, ಕೆಲವು ಶಾಗಿ ಶಾಲೆಗಳು ಮಕ್ಕಳನ್ನು ನೇರವಾಗಿ 1ನೇ ತರಗತಿಗೆ ಸೇರಿಸಿಕೊಳ್ಲುವುದಿಲ್ಲ. ಒಟ್ಟಿನಲ್ಲಿ ಶಿಕ್ಷಣ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದ್ದು, ನಿಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವಾಗ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ