• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election 2023: ಈ ಬಾರಿಯ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದ ಪ್ರಭಾವ ಎಷ್ಟು?

Karnataka Election 2023: ಈ ಬಾರಿಯ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದ ಪ್ರಭಾವ ಎಷ್ಟು?

ಕಿತ್ತೂರು ಕರ್ನಾಟಕ

ಕಿತ್ತೂರು ಕರ್ನಾಟಕ

ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕಾರಣ ಮಾಡಲಾಗಿದ್ದು ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹಾವೇರಿ ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರುವ ಜಿಲ್ಲೆಗಳಾಗಿವೆ.

 • Trending Desk
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ಈ ಹಿಂದೆ ಬಾಂಬೆ ಕರ್ನಾಟಕ (Bombay Karnataka/Mumbai Karnataka) ಎಂದು ಕರೆಯಲಾಗುತ್ತಿದ್ದ ಕಿತ್ತೂರು ಕರ್ನಾಟಕ (Kittur Karnataka) ಮತ್ತು ಮಧ್ಯ ಕರ್ನಾಟಕ ಪ್ರದೇಶಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ (Election) ಅಭೂತಪೂರ್ವ ಬೆಳವಣಿಗೆ ಕಂಡುಬಂದಿದೆ. 2018ರ ಚುನಾವಣೆಯ ಫಲಿತಾಂಶದತ್ತ ದಿಟ್ಟಿಸುವುದಾದರೆ ಕಿತ್ತೂರು ಕರ್ನಾಟಕದ ಭಾಗದಲ್ಲಿ ಬಿಜೆಪಿ (BJP) ಮತ್ತು ಕಾಂಗ್ರೆಸ್  (Congress) ತಮ್ಮತಮ್ಮ ಪ್ರಾಬಲ್ಯವನ್ನು ಹೆಚ್ಚಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈ ಭಾಗದಲ್ಲಿನ 56 ಕ್ಷೇತ್ರಗಳು ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.


ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕಾರಣ ಮಾಡಲಾಗಿದ್ದು ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹಾವೇರಿ ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರುವ ಜಿಲ್ಲೆಗಳಾಗಿವೆ.


ಬಂಡಾಯದ ಬಿಸಿ ಎದುರಿಸುತ್ತಿರುವ ಚುನಾವಣೆ


ಈ ಹಿಂದೆ ಸ್ನೇಹಿತರಾಗಿದ್ದವರು ಬೇರ್ಪಟ್ಟು ಸಾಂಪ್ರದಾಯಿಕ ಎದುರಾಳಿಗಳು ಒಂದಾಗಿರುವುದು ಅಂತೆಯೇ ಎಲ್ಲಾ ಪಕ್ಷಗಳು ಬಂಡಾಯದ ಬಿಸಿಯನ್ನು ಎದುರಿಸಿರುವುದು ಕೆಲವೊಂದು ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.


ಪ್ರಚಾರವು ಹೆಚ್ಚಾಗಿ ಜಾತಿ, ಮೀಸಲಾತಿ ಮತ್ತು ಗುರುತಿನ ರಾಜಕೀಯದ ಮೇಲೆ ಕೇಂದ್ರೀಕೃತವಾಗಿದ್ದು ಜನರ ಅಗತ್ಯ ಸಮಸ್ಯೆಗಳು ನೆನೆಗುದ್ದಿಗೆ ಬಿದ್ದಿವೆ. ಜನರ ಸಮಸ್ಯೆಗಳ ಬಗ್ಗೆ ಯಾವುದೇ ಪಕ್ಷಗಳು ಅವಲೋಕಿಸುತ್ತಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ.


ಉನ್ನತ ಮಟ್ಟದ ಪಕ್ಷಾಂತರಗಳು


ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ನಂತರ ಹಿರಿಯ ಲಿಂಗಾಯತ ಮುಖಂಡರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.


ಪ್ರಮುಖ ಲಿಂಗಾಯತ ಉಪಪಂಗಡವಾದ ಪಂಚಮಸಾಲಿಗಳಿಗೆ ಪ್ರತ್ಯೇಕ ಮತ್ತು ವರ್ಧಿತ ಮೀಸಲಾತಿಗೆ ಒತ್ತಾಯಿಸಿ ಆಂದೋಲನವು ಚುನಾವಣಾ ಪೂರ್ವದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರೂ, ಇತರ ಹಿಂದುಳಿದ ವರ್ಗಗಳ 2ಡಿ ವರ್ಗದ ಅಡಿಯಲ್ಲಿ ಎಲ್ಲಾ ಲಿಂಗಾಯತರಿಗೆ ವರ್ಧಿತ ಮೀಸಲಾತಿ ಕುರಿತು ಕೊನೆಯ ಕ್ಷಣದ ಘೋಷಣೆಯಾಗಿದೆ.


ಎಲ್ಲವೂ ಒಬಿಸಿ ಕೋಟಾ ಅಲ್ಲದೇ ಇದ್ದರೂ ಸಮುದಾಯದ ಒಂದು ವಿಭಾಗವನ್ನಾದರೂ ಸಮಾಧಾನಗೊಳಿಸಿರುವಂತೆ ಕಾಣಿಸುತ್ತಿದೆ.


ಕಿತ್ತೂರು ಕರ್ನಾಟಕ ಭಾಗದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಯಾರು ಯಾರು?


ಶಶಿಕಲಾ ಜೊಲ್ಲೆ, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಪಿ.ರಾಜೀವ್, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಸೇರಿದಂತೆ ಪ್ರಭಾವೀ ಶಾಸಕರು ಬೆಳಗಾವಿಯಿಂದ ಆಯ್ಕೆಯಾಗಿದ್ದಾರೆ.


ಇನ್ನು, ಬಾಗಲಕೋಟೆ ಜಿಲ್ಲೆಯಿಂದ ಸಿದ್ದರಾಮಯ್ಯ, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ವಿಜಯಪುರ ಜಿಲ್ಲೆಯಿಂದ ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ.ಪಾಟೀಲ್ ಮುಂತಾದ ಜನಪ್ರಿಯ ಶಾಸಕರು ಈ ಭಾಗದಿಂದ ಆಯ್ಕೆಯಾಗಿದ್ದಾರೆ.


ಜಗದೀಶ್ ಶೆಟ್ಟರ್, ಅರವಿಂದ ಬೆಲ್ಲದ್ ಧಾರವಾಡ ಜಿಲ್ಲೆಯಿಂದ ಆರ್.ವಿ.ದೇಶಪಾಂಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಬೈಲ್ ಶಿವರಾಂ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.


ಲಿಂಗಾಯತ ಉಪಜಾತಿಗಳಾದ ಬಣಜಿಗ, ಪಂಚಮಸಾಲಿ ಮತ್ತು ಗಾಣಿಗ ಗುಂಪುಗಳ ಪ್ರಭಾವವಿರುವ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈ ಎರಡು ವಿಷಯಗಳು ದೊಡ್ಡ ಚರ್ಚೆಯಾಗುವ ಸಾಧ್ಯತೆಯಿದೆ. ಬಿಜೆಪಿಯು ಬಂಡಾಯದ ಪರಿಣಾಮವನ್ನು ತಗ್ಗಿಸಲು ಪಕ್ಷ ಮೊದಲು ದೇಶ ಮೊದಲು ಎಂಬ ಸೋಗು ಹಾಕಿ ಲಾಬಿ ನಡೆಸಲಾಗುತ್ತಿದೆ.


ಲಕ್ಷ್ಮಣ್ ಸವದಿ ಹಾಗೂ ಶೆಟ್ಟರ್ ಪ್ರಭಾವ


ಬೆಳಗಾವಿಯಿಂದ ಬೀದರ್ ವರೆಗೆ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ 10 ರಿಂದ 12 ಕ್ಷೇತ್ರಗಳಲ್ಲಿ ಲಕ್ಷ್ಮಣ ಸವದಿ ಪ್ರಭಾವ ಬೀರಿದ್ದರೆ ಶೆಟ್ಟರ್ ಅವರ ಬಂಡಾಯವು ಸ್ವಲ್ಪಮಟ್ಟಿಗೆ ಪರಿಣಾಮ ಬೀರುವ ನಿರೀಕ್ಷೆಯಿದೆ.


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳೆದ ಬಾರಿ ಗೆದ್ದಿದ್ದ ಉತ್ತರ ಕರ್ನಾಟಕ ಕ್ಷೇತ್ರವಾದ ಬಾದಾಮಿಯಿಂದ ದಕ್ಷಿಣ ಕರ್ನಾಟಕದ ವರುಣಾಕ್ಕೆ ಬದಲಾಗುವ ನಿರ್ಧಾರವು ಕಾಂಗ್ರೆಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.


ಉನ್ನತ ಪ್ರಭಾವಿ ಅಭ್ಯರ್ಥಿಗಳು


ಕಿತ್ತೂರು ಕರ್ನಾಟಕ ಪ್ರದೇಶವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಉನ್ನತ ಪ್ರಭಾವಿ ಅಭ್ಯರ್ಥಿಗಳನ್ನು ಹೊಂದಿದೆ. ಸಚಿವರು ಹಾಗೂ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಗೋವಿಂದ್ ಕಾರಜೋಳ, ರಮೇಶ್ ಜಾರಕಿಹೊಳಿ, ಸಿ.ಸಿ. ಪಾಟೀಲ್, ಬಿ.ಸಿ. ಪಾಟೀಲ, ಎಂ.ಬಿ. ಪಾಟೀಲ್, ಮತ್ತು ಎಚ್.ಕೆ. ಕೋಮುವಾದಿ ಹೇಳಿಕೆಗಳಿಗೆ ಹೆಸರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಎಲ್ಲರೂ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
2018ರಲ್ಲಿ ಕಿತ್ತೂರು ಕರ್ನಾಟಕ ಭಾಗದ 50ರಲ್ಲಿ 30 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ವಾಸ್ತವವಾಗಿ, 2019 ರ ಉಪಚುನಾವಣೆಯಲ್ಲಿ ಎಲ್ಲಾ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಸಂಖ್ಯೆಯನ್ನು 35ಕ್ಕೆ ಹೆಚ್ಚಿಸಿಕೊಂಡಿದೆ.


ಅದಾಗ್ಯೂ ಬದಲಾದ ರಾಜಕೀಯ ಲೆಕ್ಕಾಚಾರಗಳು, ಬಂಡಾಯ ಹಾಗೂ ನಾಯಕರ ಪಕ್ಷ ಬದಲಾವಣೆ ಪ್ರತಿಪಕ್ಷಗಳಿಗಿಂತ ಆಡಳಿತ ಪಕ್ಷದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.


ಮುಖ್ಯಮಂತ್ರಿಗಳು ತಮ್ಮ ತವರು ನೆಲ ಶಿಗ್ಗಾಂವ್‌ನಲ್ಲಿ ಗೆಲ್ಲುತ್ತೇನೆಂಬ ಉಮೇದಿನಲ್ಲೇ ಮತಪ್ರಚಾರ ಮಾಡುತ್ತಿದ್ದರೂ ಇಡೀ ಪ್ರದೇಶದಲ್ಲಿ ಪ್ರಮುಖ ಲಿಂಗಾಯತ ನಾಯಕರಾಗಿ ಇನ್ನೂ ಯಾವುದೇ ಮಹತ್ವದ ಪ್ರಭಾವ ಬೀರಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.


ಈ ಪ್ರದೇಶದಲ್ಲಿ ಪ್ರಸ್ತುತ ಕೇವಲ ಒಂದು ಸ್ಥಾನವನ್ನು ಹೊಂದಿರುವ ಜೆಡಿಎಸ್ (ಎಸ್) ಮತ್ತೊಮ್ಮೆ ಕಳೆದು ಹೋದ ನೆಲೆಯನ್ನು ವಾಪಾಸ್ ಪಡೆದುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.


ಹೊಸ ಸೇರ್ಪಡೆಯಾದ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ದೆಹಲಿ ಮತ್ತು ಪಂಜಾಬ್ ಆಡಳಿತ ಮಾದರಿಗಳೊಂದಿಗೆ ಈ ಪ್ರದೇಶದ ಮತದಾರರನ್ನು ಆಕರ್ಷಿಸುವ ಪ್ರಯತ್ನವನ್ನು ಮಾಡುತ್ತಿದೆ.


ಆಲ್-ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಈ ಪ್ರದೇಶದಲ್ಲಿ ಹಲವಾರು ಅಭ್ಯರ್ಥಿಗಳನ್ನು ಹೊಂದಿದೆ, ಇದು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತೊಡಕಾಗಿ ಕಾಡಬಹುದು.


ಹಿರಿಯ ನಾಯಕರ ಸ್ಪರ್ಧೆ


ಮಧ್ಯ ಕರ್ನಾಟಕದ ಜಿಲ್ಲೆಗಳಾದ ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಹೊಂದಿದ್ದು, ಆಡಳಿತ ಪಕ್ಷಕ್ಕೆ 2018 ರ ಸಾಧನೆಯನ್ನು ಪುನರಾವರ್ತಿಸುವುದು ಸುಲಭವಲ್ಲ ಎಂಬುದಕ್ಕೆ ಸಾಕಷ್ಟು ಸೂಚನೆಗಳಿವೆ.


ಈ ಎರಡೂ ಜಿಲ್ಲೆಗಳಿಗೆ ಸಹಾಯ ಮಾಡುವ ಮೇಲ್ ಭದ್ರಾ ಯೋಜನೆಯ ಕೇಂದ್ರದ ಘೋಷಣೆಯ ಲಾಭವನ್ನು ಅದು ರಾಷ್ಟ್ರೀಯ ಯೋಜನೆಯಾಗಿ ಪಡೆಯಲು ಆಶಿಸುತ್ತಿದೆ.


ಈ ಎರಡು ಜಿಲ್ಲೆಗಳಲ್ಲಿ ಕೆಲವು ಹಿರಿಯ ನಾಯಕರು ಚುನಾವಣೆಗೆ ಸ್ಪರ್ಧಿಸಿದ್ದಾರೆ. 92 ವರ್ಷ ವಯಸ್ಸಿನ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಿದ್ರೆ, ಬಿಜೆಪಿಯ ಜಿ.ಎಚ್. 75 ವರ್ಷದ ತಿಪ್ಪಾ ರೆಡ್ಡಿ ಮತ್ತು ಎನ್.ತಿಪ್ಪೇಸ್ವಾಮಿ ಕ್ರಮವಾಗಿ ಚಿತ್ರದುರ್ಗ ಮತ್ತು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಮಿನಿ ಬಂಡಾಯದ ದಂಗೆಗಳು


ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತರ ಕೈಗೆ ಸಿಕ್ಕಿಹಾಕಿಕೊಂಡು ಆಡಳಿತ ಪಕ್ಷಕ್ಕೆ ಭಾರೀ ಮುಖಭಂಗ ಉಂಟು ಮಾಡಿದ್ದ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ನಿರಾಕರಿಸಿದ ಪರಿಣಾಮ ದಾವಣಗೆರೆಯ ಚನ್ನಗಿರಿಯಿಂದ ಅವರ ಪುತ್ರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.


ಮತ್ತೊಬ್ಬ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು, ಮಾಜಿ ಎಂಎಲ್ ಸಿ ರಘು ಆಚಾರ್ ಚಿತ್ರದುರ್ಗದಲ್ಲಿ ಕಾಂಗ್ರೆಸ್ ವಿರುದ್ಧ ಹಾಗೂ ಜಯಸಿಂಹ ಹೊಳಲ್ಕೆರೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದಾರೆ.


ಈ ದಂಗೆಗಳು ಪ್ರದೇಶದ ಸಣ್ಣ ಅಂಶಗಳು ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 2018ರ ಚುನಾವಣೆಯಲ್ಲಿ ಈ ಎರಡು ಜಿಲ್ಲೆಗಳ 14 ಸ್ಥಾನಗಳ ಪೈಕಿ ಬಿಜೆಪಿ 11 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದಿತ್ತು.


ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಮತ್ತು ಐದು ಜಿಲ್ಲೆಗಳಲ್ಲಿ ಕನಿಷ್ಠ 40 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಬೆಳಗಾವಿ ಮೇಲೆ ಕಾಂಗ್ರೆಸ್ ಕಣ್ಣು


ಒಂದು ಕಾಲದಲ್ಲಿ ಕಾಂಗ್ರೆಸ್ ನ ಪ್ರಬಲ ಕೋಟೆ ಎಂದೇ ಪರಿಗಣಿಸಲಾಗಿದ್ದ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ 70-80ರ ದಶಕದಲ್ಲಿ ಎಲ್ಲ 18 ಸ್ಥಾನಗಳನ್ನು ಗೆದ್ದುಕೊಂಡಿರುವ ಪಕ್ಷ ಈಗ ಕನಿಷ್ಠ 12 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈ ಪ್ರದೇಶದಲ್ಲಿ 40 ಗುರಿಗಳನ್ನು ತಲುಪಲು ಪಕ್ಷವು ಯೋಜನೆಯನ್ನು ರೂಪಿಸಿದೆ ಎಂಬುದು ತಿಳಿದು ಬಂದಿದೆ.


ಇದನ್ನೂ ಓದಿ: Narendra Modi: ನಂಜುಂಡೇಶ್ವರನಿಗೆ 'ನಮೋ' ಎಂದ ಪ್ರಧಾನಿ, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ

top videos


  ಕಾಂಗ್ರೆಸ್‌ನ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು ಜಾರಕಿಹೊಳಿ ಅವರ ತಂಡದ ಅಭ್ಯರ್ಥಿಗಳ ಪಟ್ಟಿಯ ಶಿಫಾರಸುಗಳನ್ನು ಅನುಮೋದಿಸಿದ್ದು, ಜಾರಕಿಹೊಳಿ ಅವರ ತಂಡದಿಂದ ಆಯ್ಕೆಯಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ತನ್ನ ಸಾಮರ್ಥ್ಯವನ್ನು ಈಗಿನ ಐದು ಸ್ಥಾನಗಳಿಂದ ಒಂಬತ್ತಕ್ಕೆ ಹೆಚ್ಚಿಸಲಿದೆ ಎಂದು ಹೇಳಿದೆ.

  First published: