B S Yedyurappa Resigns: ಎರಡೇ ಸಾಲಿನ ರಾಜೀನಾಮೆ ಪತ್ರದ ಮೂಲಕ ಸಾವಿರ ಮಾತು ಹೇಳಿದ್ರಾ ಬಿಎಸ್​ವೈ? ಪತ್ರದ ಒಳಾರ್ಥವೇನು ?

B S Yedyurappa Resigns: ತಮ್ಮ ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ಬಿ ಎಸ್ ಯಡ್ಯೂರಪ್ಪ ತಾನು ತನ್ನ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ, ದಯವಿಟ್ಟು ಒಪ್ಪಿಸಿಕೊಳ್ಳಿ ಎನ್ನುವ ಅರ್ಥ ಬರುವ ಎರಡೇ ಸಾಲು ಬರೆದಿದ್ದಾರೆ. ರಾಜೀನಾಮೆ ಪತ್ರದ ಜೊತೆಗೇ ಸಾಧನಾ ಸಮಾವೇಶಕ್ಕೆ ಆಗಮಿಸಿದ್ದ ಬಿಎಸ್​ವೈ ನಂತರ ನೇರವಾಗಿ ಬಾಂಕ್ವೆಟ್ ಹಾಲ್​ನಿಂದ ರಾಜಭವನಕ್ಕೇ ತೆರಳಿದ್ದರು.

ನಿರ್ಗಮಿತ ಮುಖ್ಯಮಂತ್ರಿ ಬಿಎಸ್​ವೈ

ನಿರ್ಗಮಿತ ಮುಖ್ಯಮಂತ್ರಿ ಬಿಎಸ್​ವೈ

  • Share this:
B S Yedyurappa Resignation: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪದವಿಗೆ ಬಿ ಎಸ್ ಯಡ್ಯೂರಪ್ಪ ರಾಜೀನಾಮೆಯನ್ನೇನೋ ಕೊಟ್ಟಾಗಿದೆ. ಆದ್ರೆ ಇಡೀ ರಾಜೀನಾಮೆ ಪ್ರಹಸನ ಸಾಕಷ್ಟು ಚರ್ಚೆ ಮತ್ತು ವಿಮರ್ಶೆಗಳಿಗೆ ಕಾರಣವಾಗಿದೆ. ಬಿ ಎಸ್ ಯಡ್ಯೂರಪ್ಪ ರಾಜೀನಾಮೆ ಪೂರ್ವನಿರ್ಧರಿತ. ಇದು ಧಿಡೀರನೆ ನಡೆದ ಬೆಳವಣಿಗೆಯಲ್ಲ. ಆದರೆ ಸಾಧನಾ ಸಮಾವೇಶದಲ್ಲಿ ಬಿಎಸ್​ವೈ ರಾಜೀನಾಮೆ ಘೋಷಿಸಿದ್ದು ಮಾತ್ರ ಅನಿರೀಕ್ಷಿತ. ಇದೆಲ್ಲಕ್ಕಿಂತ ಚರ್ಚೆಯಾಗುತ್ತಿರುವುದು ರಾಜೀನಾಮೆ ನೀಡಿದ ಬಗೆ. ಅಧಿಕೃತವಾಗಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಬಿ ಎಸ್ ಯಡ್ಯೂರಪ್ಪ. ಅದನ್ನು ರಾಜ್ಯಪಾಲ ಗೆಹ್ಲೋಟ್ ಒಪ್ಪಿಕೊಂಡಿದ್ದೂ ಆಗಿದೆ. ಈಗೇನಿದ್ದರೂ ಬಿಎಸ್​ವೈ ಕರ್ನಾಟಕ ರಾಜ್ಯದ ಹಂಗಾಮಿ ಸಿ ಎಂ. ಇದೆಲ್ಲದರ ನಡುವೆ ಅವರು ರಾಜ್ಯಪಾಲರಿಗೆ ಕೊಟ್ಟ ರಾಜೀನಾಮೆ ಪತ್ರದ ಹಿಂದೆ ಸಾಕಷ್ಟು ಗೂಡಾರ್ಥಗಳಿವೆಯಾ?

ಹೌದೆನ್ನುತ್ತವೆ ಆಪ್ತ ಮೂಲಗಳು. ನಿನ್ನೆ ಸಾಧನಾ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದಾಗ ಇರಬಹುದು ಅಥವಾ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ ನಂತರದ ಪ್ರತಿಕ್ರಿಯೆ ಇರಬಹುದು, ಬಿ ಎಸ್ ಯಡ್ಯೂರಪ್ಪ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ಇದೇ ಸ್ಪಷ್ಟತೆಯ ಸಂದೇಶವನ್ನು ಎರಡು ಸಾಲಿನ ಪತ್ರದಲ್ಲಿ ಹೇಳುವ ಪ್ರಯತ್ನವನ್ನೂ ಮಾಡಿದ್ದಾರೆ.

ಮೊದಲಿಗೆ ತನಗೆ 70 ವರ್ಷ ದಾಟಿದ್ದರೂ ಮುಖ್ಯಮಂತ್ರಿಯಾಗುವ ಅವಕಾಶ ಕೊಟ್ಟಿದ್ದಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೆ ಪಿ ನಡ್ಡಾರನ್ನು ಅಭಿನಂದಿಸಿದ್ದಾರೆ. ಈ ಮೂಲಕ ಈ ಚರ್ಚೆಯ ಹಿಂದೆ ಇರುವವರು ಇದೇ ನಾಯಕರು ಎನ್ನುವುದನ್ನು ಹೇಳಿದ್ದಾರೆ. ಈ ಹಿಂದೆ ಕೂಡಾ ಬಿ ಎಸ್ ಯಡ್ಯೂರಪ್ಪನಿಗೆ ರಾಜ್ಯಪಾಲ ಪಟ್ಟ ನೀಡಲು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿತ್ತು. ಆದರೆ ಅದನ್ನು ಬಿಎಸ್​ವೈ ತಿರಸ್ಕರಿಸಿದ್ದರು. ಈಗ ವಿದಾಯದ ಭಾಷಣದಲ್ಲಿ ತಾನು ರಾಜ್ಯ ರಾಜಕೀಯದಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಇದು ಯಡ್ಯೂರಪ್ಪ ಮುಖ್ಯಮಂತ್ರಿಯಾಗಿ ಮಾತ್ರ ರಾಜೀನಾಮೆ ಸಲ್ಲಿಸಿದ್ದಾರೆ ಹೊರತು ಸಕ್ರಿಯ ರಾಜಕೀಯದಿಂದ ಅಲ್ಲ ಎನ್ನುವ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: BS Yediyurappa Resigns: ಯಡಿಯೂರಪ್ಪನವರ ಕಣ್ಣೀರಿನ ಶಾಪ ಮುಂದೆ ರಾಜ್ಯ ಬಿಜೆಪಿಗೆ ಸಂಕಷ್ಟ ತರಲಿದೆಯಾ?

ಇಂದಿಗೂ ಯಡ್ಯೂರಪ್ಪ ಒಬ್ಬ ಮಾಸ್ ಲೀಡರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಪಕ್ಷ ಸಂಘಟನೆ ಮಾತ್ರವಲ್ಲ, ಬಿಎಸ್​ವೈ ಮುಂದಿನ ಮುಖ್ಯಮಂತ್ರಿ ಕ್ಯಾಂಡಿಡೇಟ್​ ಆಯ್ಕೆಯ ವಿಚಾರದಲ್ಲೂ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಂದಿಗೂ ಬಿಎಸ್​ವೈ ಎದುರಿಗೆ ನಿಂತು ಗೆಲ್ಲುವ ಬಿಜೆಪಿಯ ಲಿಂಗಾಯತ ನಾಯಕ ಖಂಡಿತಾ ಇಲ್ಲ. ಅಲ್ಲಿಗೆ ಮುಖ್ಯಮಂತ್ರಿ ಪದವಿ ಇಲ್ಲದಿದ್ದರೂ ಯಡ್ಯೂರಪ್ಪ ಕೈಯಲ್ಲಿ ಅಧಿಕಾರ ಇದ್ದೇ ಇರುತ್ತದೆ. ಹಾಗಾಗಿ ಬಿಎಸ್​ವೈ ಮಾಸ್ ಲೀಡರ್ ಆಗಿ ಮುಂದುವರೆಯುವುದು ಖಂಡಿತಾ.

ಇನ್ನು ತಮ್ಮ ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ಬಿ ಎಸ್ ಯಡ್ಯೂರಪ್ಪ ತಾನು ತನ್ನ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ, ದಯವಿಟ್ಟು ಒಪ್ಪಿಸಿಕೊಳ್ಳಿ ಎನ್ನುವ ಅರ್ಥ ಬರುವ ಎರಡೇ ಸಾಲು ಬರೆದಿದ್ದಾರೆ. ರಾಜೀನಾಮೆ ಪತ್ರದ ಜೊತೆಗೇ ಸಾಧನಾ ಸಮಾವೇಶಕ್ಕೆ ಆಗಮಿಸಿದ್ದ ಬಿಎಸ್​ವೈ ನಂತರ ನೇರವಾಗಿ ಬಾಂಕ್ವೆಟ್ ಹಾಲ್​ನಿಂದ ರಾಜಭವನಕ್ಕೇ ತೆರಳಿದ್ದರು. ಹೈಕಮಾಂಡ್ ಆದೇಶವನ್ನು ಒಪ್ಪಿಕೊಂಡರೂ ತನಗಿದು ಇಷ್ಟವಿಲ್ಲದ ತೀರ್ಮಾನ ಎಂದು ಎರಡು ಸಾಲಿನ ಪತ್ರದ ಮೂಲಕ ಬಿಎಸ್​ವೈ ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಸಿಎಂ ಪದವಿ ಹೋದರೂ ಹೈಮಾಂಡ್ ಮುಂದಿನ ದಿನಗಳಲ್ಲೂ ಬಿಎಸ್​ವೈ ಜೊತೆ ಚರ್ಚಿಸಿಯೇ ಮುಂದಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಯಾಕಂದ್ರೆ ರಾಜೀನಾಮೆ ಸಲ್ಲಿಸಿರುವುದು ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಹೊರತು ಮಾಸ್ ಲೀಡರ್ ಬಿ ಎಸ್​ ಯಡ್ಯೂರಪ್ಪ ಅಲ್ಲ ಎನ್ನುತ್ತಿವೆ ಆಪ್ತ ಮೂಲಗಳು.
Published by:Soumya KN
First published: