• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu: ಜಲಸ್ಫೋಟ, ಭೂಕುಸಿತಕ್ಕೆ ಕಾರಣವೇನು? ವಿಜ್ಞಾನಿಗಳಿಂದ ವೈಜ್ಞಾನಿಕ ಅಧ್ಯಯನ 

Kodagu: ಜಲಸ್ಫೋಟ, ಭೂಕುಸಿತಕ್ಕೆ ಕಾರಣವೇನು? ವಿಜ್ಞಾನಿಗಳಿಂದ ವೈಜ್ಞಾನಿಕ ಅಧ್ಯಯನ 

ಕೊಡಗಿನಲ್ಲಿ ಭೂಕುಸಿತ

ಕೊಡಗಿನಲ್ಲಿ ಭೂಕುಸಿತ

ಪದೇ ಪದೇ ಜಲಸ್ಫೋಟ ಮತ್ತು ಭೂಕುಸಿತ ಆಗುತ್ತಿರುವುದರಿಂದ ಭೂಕುಸಿತ ಮತ್ತು ಜಲಸ್ಫೋಟಕ್ಕೆ ಸಂಬಂದಿಸಿದಂತೆ ವಿಶೇಷ ತಜ್ಞರಿಂದ ಅಧ್ಯಯನ ಮಾಡಿಸಲಾಗುವುದು. ನಂತರ ಅದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

  • News18 Kannada
  • 4-MIN READ
  • Last Updated :
  • Madikeri
  • Share this:

ಕೊಡಗು (ಜು 24): ಕೊಡಗು (Kodagu) ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಮೆಹುಲ್ಲು ಕಜೆ ಎಂಬಲ್ಲಿ ಭೀಕರ ಜಲಸ್ಫೋಟವಾಗಿರುವುದಕ್ಕೆ ಸಂಬಂಧಿಸಿದಂತೆ ನುರಿತ ತಜ್ಞರಿಂದ ಅಧ್ಯಯನ (Skilled Experts) ಮಾಡಿಸಲಾಗುವುದು ಎಂದು ಕೊಡಗು ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ (B.C Nagesh) ಅವರು ತಿಳಿಸಿದ್ದಾರೆ. ವಿವಿಧೆಡೆ ಮಳೆಯಿಂದ ಆಗಿರುವ ಹಾನಿ ಪ್ರದೇಶ ಮತ್ತು ಭೂಕುಸಿತವಾಗಿರುವ (Landslide) ಪ್ರದೇಶಗಳಿಗೆ ಭಾನುವಾರ  ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಸೀಮೆಹುಲ್ಲುಕಜೆಯಲ್ಲಿ ಆಗಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು ಸ್ಥಳೀಯ ಜನರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದರು. 2018 ರಲ್ಲೂ ಇದೇ ರೀತಿ ಜಲಸ್ಫೋಟದಿಂದ ಭೂಕುಸಿತವಾಗಿತ್ತು. ಈಗ ಮತ್ತೆ ರಾಮಕೊಲ್ಲಿ ಮತ್ತು ಸೀಮೆಹುಲ್ಲು ಕಜೆಯಲ್ಲಿ ಭೂಕುಸಿತವಾಗಿದೆ.


ಭೂಕುಸಿತಕ್ಕೆ ವಿಜ್ಞಾನಿಗಳಿಂದ ವೈಜ್ಞಾನಿಕ ಅಧ್ಯಯನ 


ತುಂಬಾ ಎತ್ತರದಿಂದ ಬೆಟ್ಟ ಕುಸಿದಿರುವುದರಿಂದ ಅದರ ರಭಸಕ್ಕೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಮತ್ತು ಅಷ್ಟು ರಭಸದಿಂದ ಬಿದ್ದಿದ್ದರಿಂದ ಅದು ಮೇಲೆ ಚಿಮ್ಮಿ ಮಣ್ಣು ಬಂದು ರಸ್ತೆಗೆ ಬಿದ್ದಿದೆ. ಆದರೆ ಇದರಿಂದ ಯಾವುದೇ ಆತಂಕಪಡಬೇಕಾದ ಸ್ಥಿತಿ ಇಲ್ಲ ಎಂದು ಜನರು ತಿಳಿಸಿದ್ದಾರೆ ಎಂದರು. ಪದೇ ಪದೇ ಜಲಸ್ಫೋಟ ಮತ್ತು ಭೂಕುಸಿತ ಆಗುತ್ತಿರುವುದರಿಂದ ಭೂಕುಸಿತ ಮತ್ತು ಜಲಸ್ಫೋಟಕ್ಕೆ ಸಂಬಂದಿಸಿದಂತೆ ವಿಶೇಷ ತಜ್ಞರಿಂದ ಅಧ್ಯಯನ ಮಾಡಿಸಲಾಗುವುದು. ನಂತರ ಅದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಕೊಳ್ಳಲಾಗುವುದು ಎಂದು ಹೇಳಿದ್ದಾರೆ.


ಇದನ್ನೂ ಓದಿ: Twitter Campaign: ಸುಸಜ್ಜಿತ ಆಸ್ಪತ್ರೆಗಾಗಿ ಟ್ವಿಟರ್​ನಲ್ಲಿ ಅಭಿಯಾನ; ಉತ್ತರ ಕನ್ನಡ ಜನರಿಗೆ ಅನೇಕರ ಬೆಂಬಲ




ಭೂಕುಸಿತ ಆಗಿರುವುದಕ್ಕೆ ವೈಜ್ಞಾನಿಕ ಕಾರಣ ಏನು?


ಅಧ್ಯಯನ ಮಾಡಿಸಲು ಸರ್ಕಾರ ಸ್ವತಃ ತುಂಬಾ ಕಾಳಜಿ ವಹಿಸಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಈ ಕುರಿತು ಅಧ್ಯಯನ ಮಾಡಿಸಲಾಗುವುದು ಎಂದಿದ್ದಾರೆ. ಇನ್ನು ಭೂಕುಸಿತ ಆಗಿರುವುದಕ್ಕೆ ವೈಜ್ಞಾನಿಕ ಕಾರಣ ಏನು ಎಂಬುದರ ಅಧ್ಯಯನ ಆಗಬೇಕು ಎಂದು ಗೀತಾ ಮಿಶ್ರಾ ಎಂಬ ಸಾಮಾಜಿಕ ಕಾರ್ಯಕರ್ತೆ ಅವರು ಕೋರ್ಟ್ ಮೆಟ್ಟಿಲೇರಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ. ಸಿ. ನಾಗೇಶ್ ಭೂಮಿ ಕಂಪಿಸಿದ ಸಂದರ್ಭದಲ್ಲಿಯೇ ವೈಜ್ಞಾನಿಕ ಅಧ್ಯಯನ ಮಾಡಿಸಲಾಗಿದೆ. ಅವರ ಪ್ರಕಾರ ಅದು ಭೂಕಂಪನವೇ ಅಲ್ಲ ಎಂದಿದ್ದಾರೆ.


ಭೂಕಂಪನಕ್ಕೂ ಮತ್ತು ಭೂಕುಸಿತಕ್ಕೂ ಯಾವುದೇ ಸಂಬಂಧ ಇಲ್ಲ


ಹೀಗಾಗಿ ಭೂಕಂಪನಕ್ಕೂ ಮತ್ತು ಭೂಕುಸಿತಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಮತ್ತೊಮ್ಮೆ ವೈಜ್ಞಾನಿಕ ಅಧ್ಯಯನ ಆಗಲಿದೆ ಎಂದರು. ಭೀಕರ ಭೂಕುಸಿತವಾಗಿರುವ ಸ್ಥಳದಲ್ಲಿಯೇ ಎರಡು ಕುಟುಂಬಗಳು ವಾಸವಾಗಿದ್ದು, ಅವುಗಳನ್ನು ಅಲ್ಲಿಂದ ಸ್ಥಳಾಂತರ ಆಗುವಂತೆ ಸಚಿವ ಬಿ.ಸಿ. ನಾಗೇಶ್ ಮನವೊಲಿಸುವ ಯತ್ನ ಮಾಡಿದರು. ಆದರೆ ಆ ಕುಟುಂಬಗಳು ಸಚಿವರು ಎಷ್ಟೇ ಹೇಳಿದರು ಒಪ್ಪಲಿಲ್ಲ. ಹೀಗಾಗಿ ಅವರನ್ನು ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ.


ಇದನ್ನೂ ಓದಿ: Chikkamagaluru: ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಹೊಡೆದಾಟ


ಸಚಿವ ನಾಗೇಶ್ ಭೇಟಿ ನೀಡಿ ಪರಿಶೀಲನೆ


ಮಳೆಗಾಲ ಮುಗಿದ ಬಳಿಕ ಪುನಃ ಅವರು ಇಲ್ಲಿಯೇ ಬಂದು ಇರಲಿ ಎಂದು ಶಾಸಕರಿಗೆ ಜವಾಬ್ದಾರಿ ವಹಿಸಿದರು. ಬಳಿಕ ಬೆಟ್ಟದಿಂದ ಕುಸಿದ ಮಣ್ಣು ತಳಭಾಗದಲ್ಲಿರುವ ಜೋಡುಪಾಲ ಗ್ರಾಮಕ್ಕೆ ಹೋಗುವುದರಿಂದ ಅಲ್ಲಿಗೂ ಸಚಿವ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಸಚಿವ ನಾಗೇಶ್ ಅವರು ಭೂಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ರಸ್ತೆ ಸಮಸ್ಯೆಯಿಂದಾಗಿ ಅವರಿದ್ದ ಕಾರು ಮಧ್ಯದಲ್ಲಿಯೇ ನಿಂತಿತು. ಹೀಗಾಗಿ ಸಚಿವ ಬಿ.ಸಿ. ನಾಗೇಶ್, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಒಂದು ಕಿಲೋಮೀಟರ್ ಕಾಡಿನ ರಸ್ತೆಯಲ್ಲಿಯೇ ನಡೆದು ಭೂಕುಸಿತವಾಗಿರುವ ಸ್ಥಳಕ್ಕೆ ತಲುಪಬೇಕಾಯಿತು.

Published by:ಪಾವನ ಎಚ್ ಎಸ್
First published: