ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೋರ್ವ ಶಂಕಿತ ಉಗ್ರ (Suspected Terrorist) ಸೆರೆ ಸಿಕ್ಕಿದ್ದಾನೆ. ಥಣಿಸಂದ್ರದ ಮಂಜುನಾಥ್ ನಗರದಲ್ಲಿ ಐಎಸ್ಡಿ (Internal Security Department -ISD) ಮತ್ತು ಕೇಂದ್ರ ತನಿಖಾ ಸಂಸ್ಥೆಗಳು (ISD And NIA) ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಆರಿಫ್ನನ್ನು ಬಂಧಿಸಿದ್ದಾರೆ. ಸದ್ಯ ಶಂಕಿತ ಭಯೋತ್ಪಾದಕ ಆರಿಫ್ ಬಂಧಿಸಿ (Arrest) ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು ಅನೇಕ ಸಂಗತಿಗಳು ಹೊರ ಬರುವ ಸಾಧ್ಯತೆ ಇದೆ. ಬಂಧಿತ ಶಂಕಿತ ಉಗ್ರ ಆರಿಫ್ ಕಳೆದ 2 ವರ್ಷಗಳಿಂದ ಅಲ್ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ವರ್ಕ್ ಫರ್ಮ್ ಹೋಮ್ (Work From Home) ಮೂಲಕ ಮನೆಯಲ್ಲೇ ಕೆಲಸ ಮಾಡ್ತಿದ್ದ ಆರಿಫ್ಗೆ ಉಗ್ರ ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಕನಸಿತ್ತು. ಅದರಂತೆ ಸಾಮಾಜಿಕ ಜಾಲತಾಣಗಳು (Social Media), ವೆಬ್ ಸೈಟ್ ಮೂಲಕ ಉಗ್ರ ಸಂಘಟನೆಗಳನ್ನು ಸೇರಲು ತಯಾರಿ ನಡೆಸಿದ್ದ ಎಂದು ಹೇಳಲಾಗುತ್ತಿದೆ.
ಟೆಲಿಗ್ರಾಮ್ ಹಾಗೂ ಡಾರ್ಕ್ ನೆಟ್ ಮೂಲಕ ಉಗ್ರ ಸಂಘಟನೆ ಆಲ್ ಖೈದಾ ಗ್ರೂಪ್ಗಳಲ್ಲಿ ಸಕ್ರಿಯನಾಗಿದ್ದ ಎನ್ನಲಾಗುತ್ತಿದೆ. ಈತ ಮರ್ಚ್ ನಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ಯತ್ನಿಸಿದ್ನಂತೆ. ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಈಗ ಮಾರ್ಚ್ನಲ್ಲಿ ಮತ್ತೆ ಇರಾಕ್ ಮೂಲಕ ಸಿರಿಯಾ ಹಾಗು ಅಫ್ಘಾನ್ಗೆ ತೆರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ರೆಡಿ ಮಾಡಿಕೊಳ್ಳುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಉತ್ತರ ಪ್ರದೇಶದಿಂದ ಕುಟುಂಬ ಕರೆಸಿದ್ದ
ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಆರಿಫ್, ಒಂದೂವರೆ ವರ್ಷದ ಹಿಂದೆ ಥಣಿಸಂದ್ರದಲ್ಲಿ ಬಾಡಿಗೆ ಮನೆ ಮಾಡಿದ್ದ. ಮನೆ ಮಾಡೋಕು ಮೊದಲು ಪಿಜಿಯಲ್ಲಿದ್ದ ಆರಿಫ್, ನಂತ್ರ ಉತ್ತರ ಪ್ರದೇಶದಿಂದ ಕುಟುಂಬವನ್ನು ಕರೆಸಿದ್ದನು.
ಶಂಕಿತ ಉಗ್ರ ಆರಿಫ್ ನಮಾಜ್ಗೆ ಹೋದ್ರೂ ಯಾರ ಜೊತೆಯೂ ಮಾತಾಡ್ತಿರಲಿಲ್ಲ. ಒಬ್ಬನೇ ಓಡಾಡ್ತಿದ್ದ. ಆತನಿಗೆ ಎರಡು ಮಕ್ಕಳು ಇದ್ದಾರೆ. ಆತ ಈ ಥರದ ವ್ಯಕ್ತಿ ಎಂದು ಗೊತ್ತಿಲ್ಲ ಎಂದ ಸ್ಥಳೀಯರಾದ ಜಾವೀದ್ ಹೇಳಿದ್ದಾರೆ.
‘ಭಾರತದಲ್ಲಿ ಮುಸ್ಲಿಮರ ಪಾಲೂ ಇದೆ’
ದೇಶದಲ್ಲಿ ಇಸ್ಲಾಂ ಧರ್ಮದ ಮೇಲೆ ಅಪಪ್ರಚಾರ ಹೆಚ್ಚಿದೆ. ಇಸ್ಲಾಮೋಫೋಬಿಯಾ ಬಿತ್ತುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ದೇಶ ಬೇರೆಯವರಿಗೆ ಎಷ್ಟು ಸೇರಿದೆವೋ ಅಷ್ಟೇ ನಮ್ಮದು ಎಂದು ಜಮೈತ್ ಉಲೇಮಾ ಎ ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿದ್ದಾರೆ.
ಮೀನುಗಾರರ ಮೇಲೆ ಕಲ್ಲೆಸೆತ
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮೀನುಗಾರಿಕಾ ಬೋಟ್‌ಗಳ ಮೇಲೆ ತಮಿಳುನಾಡು ಮೀನುಗಾರರು (Mangaluru Fishermen) ಕಲ್ಲು ತೂರಾಟ (Stone Pelting) ನಡೆಸಿದ ಘಟನೆ ನಡೆದಿದೆ.
ಇದನ್ನೂ ಓದಿ: KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!
ಮಂಗಳೂರಿನ ಮೀನುಗಾರರು ಸುಮಾರು ಏಳೆಂಟು ಬೋಟ್‌ಗಳಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಬೋಟ್‌ಗಳು ತಮಿಳುನಾಡಿನ ಕನ್ಯಾಕುಮಾರಿ ಬಳಿ ಸಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ