HOME » NEWS » State » WHAT IS SIGANDUR CHOWDESHWARI TEMPLE CONTROVERSY HERE IS AN ANSWER RMD

ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮುಗಿಯದ ಆಂತರಿಕ ಕಲಹ; ಅಷ್ಟಕ್ಕೂ ಏನಿದು ಪ್ರಕರಣ?

ದೇಗುಲದ ಧರ್ಮದರ್ಶಿ ರಾಮಪ್ಪ ಮತ್ತು ಅರ್ಚಕ ಶೇಷಗಿರಿ ಭಟ್ಟ್ ನಡುವೆ ಆಂತರಿಕ ಕಲಹ ನಡೆದೇ ಇತ್ತು. ದಕ್ಷಿಣೆ ದುಡ್ಡು ಸೇರಿದಂತೆ, ಹಣಕಾಸಿನ ವ್ಯವಹಾರಗಳನ್ನು ತಮಗೆ ಬಿಟ್ಟುಕೊಡಿ ಎಂದು ಅರ್ಚಕ ಶೇಷಗಿರಿ ಭಟ್ಟ್ ಒತ್ತಡ ಹೇರುತ್ತಿದ್ದಾರೆ ಎಂಬುದು ರಾಮಪ್ಪ ಆರೋಪ. ಆದರೆ, ಶೇಷಗಿರಿ ಭಟ್​ ಆ ರೀತಿ ಕೇಳುವವರಲ್ಲ ಎಂಬುದು ಸ್ಥಳೀಯರ ವಾದ.

news18-kannada
Updated:October 19, 2020, 9:58 AM IST
ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮುಗಿಯದ ಆಂತರಿಕ ಕಲಹ; ಅಷ್ಟಕ್ಕೂ ಏನಿದು ಪ್ರಕರಣ?
ಸಿಗಂದೂರು ದೇವಾಲಯ
  • Share this:
ಸಿಗಂದೂರು: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ  ದೇವಾಲಯದ ಆಂತರಿಕ ಕಲಹ ಬೀದಿಗೆ ಬಂದಿದೆ. ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಹಾಗೂ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್​ ನಡುವೆ ಒಳಗೊಳಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಈಗ ಎಲ್ಲರೂ ನೋಡುವಂತಾಗಿದೆ. ಕಳೆದ ಶುಕ್ರವಾರ ವಿಡಿಯೋ ಒಂದು ವೈರಲ್​ ಆಗಿದ್ದು, ಇದರಲ್ಲಿ ಶೇಷಗಿರಿ ಭಟ್​ ಕಡೆಯವರು ಧರ್ಮದರ್ಶಿ ರಾಮಪ್ಪನವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ? ಯಾರು ಏನನ್ನುತ್ತಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ದೇಗುಲದ ಧರ್ಮದರ್ಶಿ ರಾಮಪ್ಪ ಮತ್ತು ಅರ್ಚಕ ಶೇಷಗಿರಿ ಭಟ್ಟ್ ನಡುವೆ ಆಂತರಿಕ ಕಲಹ ನಡೆದೇ ಇತ್ತು. ದಕ್ಷಿಣೆ ದುಡ್ಡು ಸೇರಿದಂತೆ, ಹಣಕಾಸಿನ ವ್ಯವಹಾರಗಳನ್ನು ತಮಗೆ ಬಿಟ್ಟುಕೊಡಿ ಎಂದು ಅರ್ಚಕ ಶೇಷಗಿರಿ ಭಟ್ ಒತ್ತಡ ಹೇರುತ್ತಿದ್ದಾರೆ ಎಂಬುದು ರಾಮಪ್ಪ ಆರೋಪ. ಆದರೆ, ಶೇಷಗಿರಿ ಭಟ್​ ಆ ರೀತಿ ಕೇಳುವವರಲ್ಲ ಎಂಬುದು ಸ್ಥಳೀಯರ ವಾದ.

ಚೌಡೇಶ್ವರಿ ದೇವಿ ಸಣ್ಣ ಚಪ್ಪರದಲ್ಲಿದ್ದಾಗಲೂ ಶೇಷಗಿರಿ ಭಟ್ ಅದನ್ನು ಪೂಜಿಸುತ್ತಿದ್ದಾರೆ ಹಾಗೂ ಈಗ ಕೂಡ ಆ ದೇವಿ ಚಪ್ಪರದಲ್ಲಿಯೇ ಇದ್ದಿದ್ದರೂ ಅವರು ಅದೇ ಭಕ್ತಿ - ಶ್ರದ್ಧೆಗಳಿಂದ ಪೂಜಿಸುತ್ತಲೇ ಇರುತ್ತಿದ್ದರು‌. ಹಾಗಾಗಿ ಅವರು ದೇವಿಯ ಜೊತೆಗೆ ಇದ್ದವರು. ಕಾಣಿಕೆ ಡಬ್ಬಿ ಇಲ್ಲದೇ ಇದ್ದಾಗಲೂ ಅವರು ದೇವಿಗೆ ಪೂಜೆ ಮಾಡಿಕೊಂಡಿದ್ದರು. ಕಾಣಿಕೆ ಡಬ್ಬಿಯ ಜೊತೆ ಅವರು ಬಂದವರಲ್ಲ. ಅದು ನಮಗೂ ಗೊತ್ತು, ದೇವಿಗೂ ಗೊತ್ತು, ಎನ್ನುತ್ತಾರೆ ಕೆಲ ಸ್ಥಳೀಯರು.

ದೇವಸ್ಥಾನದ ವ್ಯವಹಾರಗಳು ಸರಿಯಾಗಿ ನಡೆಯಬೇಕು, ಪ್ರತಿಯೊಂದಕ್ಕೂ  ಲೆಕ್ಕವಿರಬೇಕೆಂದು ಶೇಷಗಿರಿ ಭಟ್ಟರು ಸೇವಾ ಕೌಂಟರ್ ಸ್ಥಾಪಿಸಿ, ಕಂಪ್ಯುಟರ್ ಗಳನ್ನು ತಂದಿಟ್ಟರೆ ಅದನ್ನು ಕೂಡ ಬಂದ್ ಮಾಡಿಸಲಾಗಿತ್ತಂತೆ. ದೇವಸ್ಥಾನದ ಒಳಿತಿಗೆ ಹೊಸ ಯೋಜನೆಗಳನ್ನು ತಂದಾಗಲೆಲ್ಲ, ಅವರಿಗೆ ಜೀವ ಬೆದರಿಕೆ ಬರುತ್ತಿತ್ತು. ಮನೆಯ ಮೇಲೆ ಕಲ್ಲು ಬೀಳುತ್ತಿತ್ತು. ಮಕ್ಕಳನ್ನು ಸಾಯಿಸಿಬಿಡುತ್ತೇವೆ ಎಂದು ಹೆಜ್ಜೆ ಹೆಜ್ಜೆಗೂ ಜೀವ ಬೆದರಿಕೆ ಬರುತ್ತಿತ್ತು ಎಂಬುದು ಸ್ಥಳೀಯರ ದೂರು.



ಶೇಷಗಿರಿ ಭಟ್​ ಅವರು ಮೊದಲಿನಿಂದಲೂ ಪೂಜೆ ಮಾಡುತ್ತಾ ಬಂದವರು. ಈಗ ಅವರನ್ನು ದೇವಿಯಿಂದ ದೂರ ಮಾಡಲು ಸಂಚು ನಡೆಯುತ್ತಿದೆ ಎನ್ನುವ ಆರೋಪವೂ ಇದೆ. ಅಲ್ಲದೆ, ಪ್ರತಿ ವರ್ಷ ನವರಾತ್ರಿಯಂದು ಶೇಷಗಿರಿ ಭಟ್​ ಅವರು ದೇವಸ್ಥಾನದಲ್ಲಿ ಚಂಡಿಯಾಗ ಮಾಡುತ್ತಿದ್ದರು. ಆದರೆ, ಈ ಬಾರಿ ಆಡಳಿತ ಮಂಡಳಿಯವರು ಇದಕ್ಕೂ ತಡೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ, ಚೌಡೇಶ್ವರಿ ದೇವಿಯ ಎದುರು ಕುಟುಂಬದ ಸದಸ್ಯರೊಂದಿಗೆ ಶೇಷಗಿರಿ ಭಟ್ ಮೌನ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು, ಮಾರಾಮಾರಿ ಆಗಿದೆ ಎನ್ನಲಾಗಿದೆ.

ರಾಮಪ್ಪನವರ ಆರೋಪ ಏನು?:ಶೇಷಗಿರಿ ಭಟ್​ ಅವರು ಹಣಕಾಸಿನ ವ್ಯವಹಾರವನ್ನು ತಮಗೇ ವಹಿಸಿಕೊಡಿ ಎಂದು ಒತ್ತಡ ಹೇರುತ್ತಿದ್ದಾರೆ ಎನ್ನುತ್ತಾರೆ ರಾಮಪ್ಪ. ಅಲ್ಲದೆ, ಇತ್ತೀಚೆಗೆ ಅವರ ಮೇಲೆ ನಡೆದಿರುವ ಹಲ್ಲೆ ಹಿಂದೆ ಶೇಷಗಿರಿ ಭಟ್​ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.



ಸದ್ಯ ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.
Published by: Rajesh Duggumane
First published: October 19, 2020, 9:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories