• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಟಿಪ್ಪು, ಬಾಬರ್, ಘಜ್ನಿ ಬಗ್ಗೆ ಟೀಕೆ ಮಾಡಿದ್ರೆ ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ತಾರೆ; ಸಿ ಟಿ ರವಿ

Karnataka Politics: ಟಿಪ್ಪು, ಬಾಬರ್, ಘಜ್ನಿ ಬಗ್ಗೆ ಟೀಕೆ ಮಾಡಿದ್ರೆ ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ತಾರೆ; ಸಿ ಟಿ ರವಿ

ಸಿ.ಟಿ.ರವಿ

ಸಿ.ಟಿ.ರವಿ

ರಣನೀತಿಯನ್ನು ಮಾಧ್ಯಮದಲ್ಲಿ ಚರ್ಚೆ ಮಾಡೋಕೆ ಸಾಧ್ಯವಿಲ್ಲ. ಫಲಿತಾಂಶ ಬಂದ ನಂತರ ಯಾರು ಅಡ್ಡ ಮತ ಹಾಕಿದ್ದಾರೆ. ಉದ್ದ ಮತ ಹಾಕಿದ್ದಾರೆ ಗೊತ್ತಾಗುತ್ತದೆ. ನಮಗೂ 32 ಮತಗಳಿವೆ.

  • Share this:

ಚಿಕ್ಕಮಗಳೂರು : ಟಿಪ್ಪು ಸುಲ್ತಾನ್, ಬಾಬರ್, ಘಜ್ನಿ, ಗೋರಿ ಮೊಘಲ್‍ ರನ್ನು ಟೀಕೆ ಮಾಡಿದ್ರೆ ಸಿದ್ದರಾಮಯ್ಯ (Siddaramaiah) ಅವರು ಏಕೆ ಎದೆ ಬಡಿದುಕೊಳ್ಳುತ್ತಾರೆ? ಇವರಿಗ್ಯಾಕೆ ಉರಿ ಹತ್ತಿದಂತೆ ಆಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ (CT Ravi) ತಿರುಗೇಟು ನೀಡಿದರು. RSS ಬಗ್ಗೆ ಮಾತನಾಡಿದರೇ ಬಿಜೆಪಿಯವರು ಏಕೆ ಎದೆಬಡಿಕೊಳ್ಳುತ್ತಾರೆಂಬ ಸಿದ್ಧರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, RSSಗೂ ಮತ್ತು ನಮಗೂ ವೈಚಾರಿಕ ಸಂಬಂಧವಿದೆ. RSSನಿಂದ ಪ್ರೇರಣೆಯಾಗಿದ್ದೇವೆ ಎಂದರು. ಕಾಂಗ್ರೆಸ್‍ ನವರಿಗೆ (Congress) ಟಿಪ್ಪು, ಬಾಬರ್, ಔರಂಗಜೇಬ್, ಗಜನಿ ಜೊತೆ ಯಾವ ಸಂಬಂಧವಿದೆ ಎಂದು ಹೇಳಲಿ. ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಎಂದರೇ, ಇವರ್ಯಾಕೆ ಮುಖ ಒರೆಸಿಕೊಳ್ಳುತ್ತಾರೆ. ಇವರಿಗೂ ಟಿಪ್ಪು ಔರಂಗಜೇಬ್‍ನಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.


ರಾಜ್ಯಸಭೆಗೆ ಮೂರನೇ ಅಭ್ಯರ್ಥಿ ಆಯ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಹೆಚ್ಚುವರಿ 32 ಮತಗಳಿವೆ ಚುನಾವಣೆ ನಂಬರ್ ಗೇಮ್. ಬರಬಹುದು, ಬರದೇ ಇರಬಹುದು ನಾವು ನಮ್ಮನ್ನು ಪರೀಕ್ಷೆ ಮಾಡಿಕೊಳ್ಳೋಕೆ ವಿರೋಧಿಗಳು ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರಾ ಎನ್ನುವುದು ತಿಳಿದುಕೊಳ್ಳಲು ಇದೊಂದು ಪರೀಕ್ಷೆಯಾಗಿದೆ ಎಂದರು.


ನಮಗೂ 32 ಮತಗಳಿವೆ


ರಣನೀತಿಯನ್ನು ಮಾಧ್ಯಮದಲ್ಲಿ ಚರ್ಚೆ ಮಾಡೋಕೆ ಸಾಧ್ಯವಿಲ್ಲ. ಫಲಿತಾಂಶ ಬಂದ ನಂತರ ಯಾರು ಅಡ್ಡ ಮತ ಹಾಕಿದ್ದಾರೆ. ಉದ್ದ ಮತ ಹಾಕಿದ್ದಾರೆ ಗೊತ್ತಾಗುತ್ತದೆ. ನಮಗೂ 32 ಮತಗಳಿವೆ. ಜೆಡಿಎಸ್‍ ಗೂ ಅಷ್ಟೇ ಮತಗಳಿವೆ. ಕಾಂಗ್ರೆಸ್ ಹೆಚ್ಚುವರಿ ಮತ ಏನು ಮಾಡುತ್ತಾರೆ ಗೊತ್ತಿಲ್ಲ. ಚುನಾವಣೆ ಅಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ ಎಂದರು.


ಗೊಂದಲ ಸೃಷ್ಟಿಸುವ ಕೆಲಸ: ಕೋಟಾ ಆಕ್ರೋಶ


ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಪ್ರತಿಪಕ್ಷಗಳು ಮತ್ತು ಇತರರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.


ಇದನ್ನೂ ಓದಿ:  School Text Book: ರಾಜ್ಯದಲ್ಲಿ ‘ಪಠ್ಯ ಕೈ ಬಿಡಿ’ ಅಭಿಯಾನ; ಮೂವರು ಲೇಖಕರಿಂದ ಸಚಿವರಿಗೆ ಪತ್ರ


ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾ ಯಣಗುರುಗಳ ಮತ್ತು ಭಗತ್‍ಸಿಂಗ್ ಪಠ್ಯದಲ್ಲಿ ಸೇರ್ಪಡೆ ಸಂಬಂಧ ಸ್ಪಷ್ಠೀಕರಣ ನೀಡಲಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಶಿಕ್ಷಣ ಸಚಿವ ಬಿ.ನಾಗೇಶ್ ಅವರು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.


ವಿಷಯಾಧಾರದ ಮೇಲೆ ಮಾತನಾಡಬೇಕು


ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಏನೇನು ಅಪಾದನೆ ಬಂದಿದೆ ಅದೆಲ್ಲದಕ್ಕೂ ಉತ್ತರ ನೀಡಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಸರ್ಕಾರ ಎಲ್ಲವನ್ನೂ ಬಗೆಹರಿಸಲಿದೆ ಎಂದು ತಿಳಿಸಿದ ಅವರು, ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರ ಸಂಬಂಧ ವ್ಯಕ್ತಿ ಆಧಾರ ಮೇಲೆ ನೋಡದೆ ವಿಷಯ ಆಧಾರದ ಮೇಲೆ ಮಾತನಾಡಬೇಕು ಎಂದು ತಿಳಿಸಿದರು.


ರೋಹಿತ್ ಚಕ್ರತೀರ್ಥ ಸೇರಿದಂತೆ ಅನೇಕರು ಸಮಿತಿಯಲ್ಲಿದ್ದಾರೆ. ಹಿಂದಿನ ಸರ್ಕಾರ ಅವರಿಗೆ ಬೇಕಾದವರನ್ನು ಸೇರಿಸಿ ಸಮಿತಿ ರಚಿಸಿತ್ತು. ಪಠ್ಯ ಪರಿಷ್ಕರಣೆ ಯಾರು ಮಾಡಿದ್ದಾರೆ ಎನ್ನುವುದಕ್ಕಿಂತ ವಿಷಯಾಧಾರಿತವಾಗಿ ಮಾತನಾಡಬೇಕು ಎಂದರು.


ದೇವಾಲಯದ ಕುರುಹುಗಳು ಕಾಣಿಸುತ್ತಿವೆ


ಮಸೀದಿಗಳಲ್ಲಿ ಹಿಂದೂ ದೇವಾಲಯ ಕುರುಹು ಸಂಬಂಧ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಮತೀಯ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿಗಳನ್ನು ಕಟ್ಟಲಾಗಿದೆ. ನಂತರ ಕಾಲಘಟ್ಟದಲ್ಲಿ ದೇವಾಲಯ ಕುರುಹುಗಳು ಕಾಣಿಸುತ್ತಿವೆ ಎನ್ನುವ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ಬಿಟ್ಟುಕೊಡಬೇಕು ಎನ್ನುವುದು ಹಿಂದೂಗಳ ಭಾವನೆ ಸತ್ಯಶೋಧನೆ ಸಂಬಂಧ ಸರ್ಕಾರ ಮತ್ತು ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.


ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ 34 ಸಾವಿರ ದೇವಸ್ಥಾನಗಳು ಇದ್ದು, ನಿತ್ಯಪೂಜೆ ದೇವಸ್ಥಾನ ಅಭಿವೃದ್ಧಿ ಸರ್ಕಾರ ಅನುದಾನ ನೀಡುತ್ತಿದೆ. ಕೆಲವು ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿದ್ದು ಹಂತ ಹಂತವಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.


ಇದನ್ನೂ ಓದಿ:  Karnataka Politics: ಸೋನಿಯಾ ಗಾಂಧಿ ಬೆಂಬಲ ಕೇಳಿದ HDD; ಕೋಮುವಾದಿ ಪಕ್ಷ ದೂರ ಇಡಲು ಕಾಂಗ್ರೆಸ್ ನಮ್ಮನ್ನು ಬೆಂಬಲಿಸಲಿ- ರೇವಣ್ಣ


ಸಿದ್ದರಾಮಯ್ಯ ಲಘುವಾಗಿ ಮಾತನಾಡಬಾರದು


ಆರ್‍ಎಸ್‍ಎಸ್ ಬಗ್ಗೆ ಮಾತನಾಡಿದರೇ ಬಿಜೆಪಿಯವರು ಎದೆ ಬಿಡಿದುಕೊಳ್ಳುತ್ತಾರೆಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್‍ಎಸ್‍ಎಸ್ ಬಗ್ಗೆ ಸಿದ್ಧರಾಮಯ್ಯ ಅವರು ಲಘುವಾಗಿ ಮಾತನಾಡಬಾರದು ಅವರ ಪಕ್ಷದ ಹಿರಿಯರೇ ಆರ್‍ಎಸ್‍ಎಸ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಆರ್‍ಎಸ್‍ಎಸ್ ರಾಷ್ಟ್ರಪ್ರೇಮದ ಬಗ್ಗೆ ಸಿದ್ಧರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

top videos
    First published: