• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ‘ನಿನ್ನ ಪ್ರೀತಿಸುತ್ತಿದ್ದೇನೆ‘ ಎಂದ ಆಂಟಿಯನ್ನು ಹುಡುಕಿಕೊಂಡು ಹೋದ ಯುವಕನಿಗೆ ಕಾದಿತ್ತು ಶಾಕ್​​

‘ನಿನ್ನ ಪ್ರೀತಿಸುತ್ತಿದ್ದೇನೆ‘ ಎಂದ ಆಂಟಿಯನ್ನು ಹುಡುಕಿಕೊಂಡು ಹೋದ ಯುವಕನಿಗೆ ಕಾದಿತ್ತು ಶಾಕ್​​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲೋ ನಾನು ಅರುಣಾ ಅಂತಾ. ನಾನು ನಿನ್ನ ಅಭಿಮಾನಿ, ನೀನಂದ್ರೆ ತುಂಬಾ ಇಷ್ಟ. ನಿನ್ನನು ಒಮ್ಮೆ ನೋಡಬೇಕು ಎಂದು ದುಂಬಾಲು ಬೀಳುತ್ತಾಳೆ.

  • Share this:

ಆನೇಕಲ್(ಜು.18): ಅವನಿಗೆ ಕಳೆದ ಒಂದು ವಾರದಿಂದ ಪದೇಪದೇ ಪೋನ್ ಮೂಲಕ ಅಪರಿಚಿತಳೊಬ್ಬಳು ಪ್ರೀತಿ ನಿವೇದನೆ ಮಾಡಿಕೊಳ್ಳುತ್ತಿದ್ದಳು. ಗೊತ್ತು ಗುರಿ ಇಲ್ಲದ ಯಾವುದೋ ಹುಡುಗಿ ಹೀಗೆ ಪದೇ ಪದೇ ಪೋನ್ ಮಾಡ್ತಿದ್ದಾಳೆ. ಸುಮ್ನೆ ಯಾಕೆ ಅಂತಾ ಆ ಹುಡುಗನು ಸಹ ಸರಿ ಆಯ್ತು ಅಂತಾ ಕಾಗೆ ಹಾರಿಸ್ತಿದ್ದ. ಆದ್ರೆ ಇದೆ ತಿಂಗಳ ಒಂಬತ್ತನೇ ತಾರೀಖು ಎಂದಿನಂತೆ ಅಕೆ ನಿನ್ನನು ತುಂಬಾ ಪ್ರೀತಿಸುತ್ತೆನೆ. ನಿನ್ನನ್ನು ಒಮ್ಮೆ ನೋಡಬೇಕು ಎಂದು ಒತ್ತಾಯಿಸುತ್ತಾಳೆ. ಆಗಿದ್ದಾಗಲಿ ಎಂದು ನೀಲಗಿರಿ ತೋಪಿಗೆ ಹೋದ ಹುಡುಗನಿಗೆ ಕಾದಿತ್ತು ಶಾಕ್ .


ಹೌದು, ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ವಾಸಿಯಾದ ಮೋಹನ್(20)( ಹೆಸರು ಬದಲಿಸಲಾಗಿದೆ) ಸ್ಥಿತಿವಂತರ ಕುಟುಂಬದ ಹುಡುಗ. ತಿರುಗಾಡಲು ಕಾರು, ಬೈಕ್, ಹಣ ಎಲ್ಲವೂ ಇರುವಂತಹ ಹುಡುಗ. ಇಂತಹ ಹುಡುಗನಿಗೆ ಅದೊಂದು ದಿನ ಪೋನ್ ಕಾಲ್ ಬರ್ತದೆ. ಪೋನ್ ರಿಸೀವ್ ಮಾಡಿದಾಗ ಹೆಣ್ಣಿನ ಧ್ವನಿ ಕೇಳುತ್ತದೆ.


ಹಲೋ ನಾನು ಅರುಣಾ ಅಂತಾ. ನಾನು ನಿನ್ನ ಅಭಿಮಾನಿ, ನೀನಂದ್ರೆ ತುಂಬಾ ಇಷ್ಟ. ನಿನ್ನನು ಒಮ್ಮೆ ನೋಡಬೇಕು ಎಂದು ದುಂಬಾಲು ಬೀಳುತ್ತಾಳೆ. ಪ್ರಾರಂಭದಲ್ಲಿ ಹುಡುಗನು ಸಹ ಆಕೆಯ ಪೋನ್ ಕಾಲ್ ಅವಾಯ್ಡ್ ಮಾಡ್ತಾನೆ. ಆದ್ರೆ ಆಕೆಯ ಕಾಟ ಹೆಚ್ಚಾದಾಗ ನೋಡೆ ಬಿಡೋಣ ಅಂತಾ ಇದೇ ತಿಂಗಳ 9ನೇ ತಾರೀಖು ತನ್ನ ಕಾರಿನಲ್ಲಿ ಆಕೆ ಹೇಳಿದ ನಾರಾಯಣಪುರ ಕೆರೆ ಬಳಿ ಹೋಗುತ್ತಾನೆ. ಅಷ್ಟೊತ್ತಿಗೆ ಮತ್ತೆ ಕರೆ ಮಾಡಿದ ಆಕೆ ನಮ್ಮ ಚಿಕ್ಕಪ್ಪ ನನ್ನನ್ನು ನೋಡಿಬಿಟ್ಟ. ಹಾಗಾಗಿ ನಾನು ನೀಲಗಿರಿ ತೋಪಿನಲ್ಲಿ ಇದ್ದೇನೆ ಒಳಗೆ ಬಾ ಎನ್ನುತ್ತಾಳೆ. ಆಕೆ ಹೇಳಿದ್ದೆ ತಡ ಸೀದಾ ನೀಲಗಿರಿ ತೋಪಿನೊಳಕ್ಕೆ ಹೋಗುತ್ತಾನೆ.


ಅಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ನುಲಿಯುತ್ತ ನಿಂತಿದ್ದ ಅನಾಮಿಕಳ ಬಳಿ ಹೋದ ಹುಡುಗ ಯಾರು ನೀನು ಎಂದು ಪ್ರಶ್ನಿಸುತ್ತಾನೆ. ಜೊತೆಗೆ ನಿನ್ನ ಮುಖ ನೋಡಬೇಕು ಮಾಸ್ಕ್ ತೆಗೆಯುವಂತೆ ಹೇಳುತ್ತಾನೆ. ಆಕೆ ಮಾತ್ರ ಮಾಸ್ಕ್ ತೆಗೆಯಲು ಸತಾಯಿಸುತ್ತಾಳೆ. ಕೊನೆಗೆ ತನ್ನ ಪ್ರೀತಿಸುವ ಹುಡುಗಿಯನ್ನು ನೋಡಲೇಬೇಕು ಎಂದು ಬಂದಿದ್ದ ಯುವಕ ಒತ್ತಾಯವಾಗಿ ಆಕೆ ಧರಿಸಿದ್ದ ಮಾಸ್ಕ್ ತೆಗೆಯಲು ಯತ್ನಿಸುತ್ತಾನೆ. ಅಷ್ಟೊತ್ತಿಗೆ ಐವರು ಯುವಕರ ಅಲ್ಲಿಗೆ ಹಾಜರ್. ಏನೋ ಯುವತಿಯನ್ನು ರೇಪ್ ಮಾಡ್ತಿಯಾ ಎಂದು ಹುಡುಗನಿಗೆ ಹಿಗ್ಗಾಮುಗ್ಗಾ ಥಳಿಸಿ ಅವನ ಬಳಿಯಿದ್ದ ಕಾರು ಕೀ, ಎರಡು ಮೊಬೈಲ್ ಮತ್ತು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.


ಪ್ರೀತಿಯ ಹೆಸರಿನಲ್ಲಿ ಮೋಸ ಹೋದ ಯುವಕ ಹೇಗೋ ಸಾವರಿಸಿಕೊಂಡು ಬಂದು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ಅಪರಿಚಿತಳ ಪೋನ್ ನಂಬರ್ ಮೇಲೆ ತನಿಖೆಗೆ ಮುಂದಾಗುತ್ತಾರೆ. ಆಗ ಪ್ರಕರಣಕ್ಕೆ ಸ್ಪೋಟಕ ತಿರುವು ದೊರೆಯುತ್ತದೆ. ಹುಡುಗನಿಗೆ ಪೋನ್ ಮಾಡುತ್ತಿದ್ದದ್ದು, ಹುಡುಗಿಯಲ್ಲ 35 ವರ್ಷದ ಆಂಟಿ. ಆಂಟಿಯನ್ನು ಬಲೆಗೆ ಕೆಡವಿದ ಪೊಲೀಸರಿಗೆ ಇದರ ಹಿಂದೆ ದೊಡ್ಡ ಗ್ಯಾಂಗ್ ಇರುವುದು ಕನ್ಪರ್ಮ್ ಆಗಿದೆ.


ಕೊಲೆ ಮತ್ತು ರಾಬರಿ ಪ್ರಕರಣದಲ್ಲಿ ಜೈಲು ಸೇರಿರುವ ತನ್ನ ಸ್ನೇಹಿತರನ್ನು ಬಿಡಿಸಿಕೊಳ್ಳಲು 35ರ ಅಂಟಿ ಅಣ್ಣಮ್ಮ ಮತ್ತವರ ಗ್ಯಾಂಗ್. ಆನೇಕಲ್ ಪಟ್ಟಣದ ಹಾಲ್ದೇನಹಳ್ಳಿ ವಾಸಿಗಳಾ್ದ ಮುನೇಂದ್ರ, ನಾಗೇಶ್ ನವೀನ್, ಶಶಾಂಕ್ ಮತ್ತು ಮಹೇಂದ್ರ ಮಾಡಿದ ಮಾಸ್ಟರ್ ಪ್ಲಾನ್ ಇದು. ಮೊದಲೇ ಕೈ ಮತ್ತು ಕುತ್ತಿಗೆಗೆ ಗೋಲ್ಡ್ ಚೈನ್ ರಿಂಗ್ ಹಾಕ್ಕೊಂಡು ಕಾರಿನಲ್ಲಿ ಓಡಾಡುತ್ತಿದ್ದ ಮೋಹನ್​​ಗೆ ಸ್ಕೇಚ್ ಹಾಕಿದ ಆಂಟಿ ಅಂಡ್ ಟೀಮ್ ಎಕ್ಸಿಕ್ಯೂಟ್ ಮಾಡುವುದರಲ್ಲಿ ಸಫಲರಾಗುತ್ತಾರೆ. ಆದ್ರೆ ಪೊಲೀಸರು ಮಾತ್ರ ಇವರನ್ನು ಘಟನೆ ನಡೆದ ಕೆಲವೇ ದಿನಗಳಲ್ಲಿ ಅರೆಸ್ಟ್ ಮಾಡಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.


ಇದನ್ನೂ ಓದಿ: BBMP Commissioner: ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ ಮೇಲಿವೆ ನೂರೆಂಟು ಜವಾಬ್ದಾರಿಗಳು


ಒಟ್ನಲ್ಲಿ ಪ್ರೀತಿಯ ನೆಪದಲ್ಲಿ ಹುಡುಗನೊಬ್ಬನನ್ನು ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿರುವ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದು, ಮತ್ತಷ್ಟು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Published by:Ganesh Nachikethu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು