ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ (Karnataka Assembly Election) ಪ್ರಕಟವಾಗಿದ್ದು, ಕಾಂಗ್ರೆಸ್ (Congress) ಬಹುಮತ ಪಡೆದುಕೊಂಡಿದೆ. ಇತ್ತ ಬಿಜೆಪಿಯ ಬಹುತೇಕ ಸಚಿವರು (Ministers) ಸೋಲು ಕಂಡಿದ್ದಾರೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ರಣತಂತ್ರಕ್ಕೆ ಕಮಲ ಮುದುಡಿಕೊಂಡಿದೆ. ಇತ್ತ ಸ್ವತಂತ್ರವಾಗಿ ಅಥವಾ ಮೈತ್ರಿಯಾಗಿ ಸರ್ಕಾರ ರಚನೆ ಮಾಡುವ ಕನಸು ಕಂಡಿದ್ದ ಜೆಡಿಎಸ್ಗೆ (JDS) ಆಘಾತ ಉಂಟಾಗಿದೆ. ಮತ ಎಣಿಕೆ ಆರಂಭದಿಂದಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡ ಬಂದ ಕಾಂಗ್ರೆಸ್ ಮ್ಯಾಜಿಕ್ ನಂಬರ್ ತನ್ನದಾಗಿಸಿಕೊಂಡಿದೆ. ಹಲವು ರಣತಂತ್ರ ರಚಿಸಿದ್ದ ಬಿಜೆಪಿ ಸೋಲಿಗೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.
ಬಿಜೆಪಿ ಸೋಲಿಗೆ ಕಾರಣಗಳು
1.ಅತಿಯಾದ ಆತ್ಮವಿಶ್ವಾಸ
2.ಹೈಕಮಾಂಡ್ ಮೇಲೆ ಅವಲಂಬನೆ
3.ಕೈ ಹಿಡಿಯದ ವರಿಷ್ಠರ ತಂತ್ರ
4.ಟಿಕೆಟ್ ಹಂಚಿಕೆಯಲ್ಲಿ ಗೊಂದಲ
5.ದೊಡ್ಡ ಜಿಲ್ಲೆಗಳಲ್ಲಿ ಭಿನ್ನಮತ
6.ಬಿಎಸ್‌ವೈ ಮನ್ನಣೆಯಲ್ಲಿ ವಿಳಂಬ
8.ಶೆಟ್ಟರ್, ಸವದಿ ಸೈಡ್ ಎಫೆಕ್ಟ್
9.ಸ್ಥಳೀಯ ವಿಚಾರಗಳ ಅವಗಣನೆ
10.ಲಿಂಗಾಯತ V/S ಬ್ರಾಹ್ಮಣ ಪ್ರಚಾರ
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಕುರ್ಚಿ ಯಾರಿಗೆ? ಖರ್ಗೆ ನಿವಾಸದಲ್ಲಿ ಡಿಕೆಶಿ ಬ್ರದರ್ಸ್ ಮೀಟಿಂಗ್
ಕಾಂಗ್ರೆಸ್ ಗೆಲುವಿಗೆ ಕಾರಣಗಳೇನು?
1.ಸಿದ್ದರಾಮಯ್ಯ ವರ್ಚಸ್ಸು
2.ಡಿಕೆ ಶಿವಕುಮಾರ್ ಸಂಘಟನೆ
3.‘ಗ್ಯಾರಂಟಿ’ ಕಾರ್ಡ್
4.ರಾಹುಲ್ ಭಾರತ್ ಜೋಡೋ
5.ಆಡಳಿತ ವಿರೋಧಿ ಅಲೆ ಸದ್ಬಳಕೆ
ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಿದ ಕಾಂಗ್ರೆಸ್!
7 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಕಳೆದ ಬಾರಿ 7ಕ್ಕೆ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಬೀಗಿತ್ತು. ಆದರೆ ಕೆಆರ್ ಪೇಟೆ ಶಾಸಕ ಬಿಜೆಪಿ ಸೇರಿದ್ದರಿಂದ ಒಂದು ಕ್ಷೇತ್ರ ಕಳೆದುಕೊಂಡಿತ್ತು.
ಇದನ್ನೂ ಓದಿ: Richest Village In India: ಇದು ದೇಶದ ಅತ್ಯಂತ ಶ್ರೀಮಂತ ಹಳ್ಳಿ, ಇಲ್ಲಿನ ಜನರ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!
ಈ ಬಾರಿ ಕಾಂಗ್ರೆಸ್ ಮಂಡ್ಯ ಜಿಲ್ಲೆಯಲ್ಲಿ ಅಭೂತಪರ್ವ ಯಶಸ್ಸು ಸಾಧಿಸಿದೆ. ಕಾಂಗ್ರೆಸ್ ಸ್ಪರ್ಧಿಸಿದ್ದ 6 ಕ್ಷೇತ್ರಗಳಲ್ಲಿ 5ರಲ್ಲಿ ಜಯ ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ