ಈ ಬಾರಿಯ ಮಳೆಯಿಂದಾಗಿ (Rainy Season) ಅದೆಷ್ಟೋ ಊರಿಗೆ ಊರೇ ನಾಶವಾಗಿರುವುದು ಗೊತ್ತೇ ಇದೆ. ಅದರಿಂದ ಜನರು ಸಂಕಷ್ಟಕ್ಕೀಡಾಗಿ ವಲಸೆಯನ್ನು ಹೋಗಿದ್ದಾರೆ. ಮನೆಗಳ ಜೊತೆಗೆ ತಾವು ಬೆಳೆದ ಬೆಳೆಗಳೂ ಕೂಡ ಹಾನಿಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ತರಕರಿಗಳಿಗೆ ಬೆಲೆ ಏರಿಕೆ ಮಾಡಲಾಯಿತಿ. ಜನರು ಆಕ್ರೋಶವನ್ನು ವ್ಯಕ್ತಪಡಿಸಿದರೂ ಸರ್ಕಾರವು ಸೂಕ್ತ ಕಾರಣಗಳನ್ನು ನೀಡಿತ್ತು.ಮುಂಬರುವ ಹಬ್ಬ ಮತ್ತು ಮದುವೆ ಸೀಸನ್ ವೇಳೆಗೆ ಮಾತ್ರ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಯಾವಾಗಲೂ ಬೀನ್ಸ್ ಸಗಟು ನೆಲೆ 70 ರೂಪಾಯಿ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ (Market) ಪ್ರತಿ ಕಿಲೋಗ್ರಾಂಗೆ ಸುಮಾರು 85 ರೋಪಾಯಿ ರೊಂದಿಗೆ ಚಾರ್ಟ್ನಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ಕೆಲವು ದಿನಗಳಲ್ಲಿ ದೊಣ್ಣೆ ಮೆಣಸಿನ ಕಾಯಿ (Capsicum) ಬೆಲೆಗಳು ಸಾಕಷ್ಟು ಏರಿಳಿತಗಳನ್ನು ಕಂಡಿವೆ ಮತ್ತು ಚಿಲ್ಲರೆ ಮಾರ್ಟ್ಗಳಲ್ಲಿ ಸರಾಸರಿ 80 ರಿಂದ 90 ರೂಪಾಯಿ ನಡುವೆ ಏರಿಕೆಯಾಗಿತ್ತು.
ಇದನ್ನೂ ಓದಿ: ಜಸ್ಟ್ 850 ರೂಪಾಯಿಯಿಂದ ಈ ಬ್ಯುಸಿನೆಸ್ ಆರಂಭಿಸಿ, ಕೈ ತುಂಬಾ ಕಾಸು ಮಾಡಿಕೊಳ್ಳಿ!
ಹೀಗೆ ಪ್ರತಿಯೊಂದು ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಆದರೆ ಈರುಳ್ಳಿಯ ಬೆಲೆ ಮಾತ್ರ ಕುಸಿಯುತ್ತಲೇ ಇದೆ ಎಂಬುದು ರೈತರ ಹೋರಾಟ ಎಲ್ಲೆಡೆ ಮುಗಿಲೇರಿದೆ. ಈರುಳ್ಳಿ ಬೆಳೆಯುವ ರೈತರು ನಮ್ಮ ದೇಶದಲ್ಲಿ ಹಲವರಿದ್ದಾರೆ. ಹಾಗಾಗಿ ಹಲವೆಡೆ ಈರುಳ್ಳಿ ಬೆಳೆದ ಭೂಮಿಯೇ ನಾಶವಾಗಿದೆ.
ಎಲ್ಲೆಲ್ಲಿ ಈರುಳ್ಳಿ ನಾಶವಾಗಿದೆ?
ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಕೊಳೆ ರೋಗಕ್ಕೆ ತುತ್ತಾಗಿ ಈರುಳ್ಳಿ ಬೆಳೆ ಸರ್ವನಾಶವಾಗಿದೆ. ಮಾರುಕಟ್ಟೆಯಲ್ಲೂ ಇದರ ಬೆಲೆಯನ್ನು ಏರಿಕೆ ಮಾಡದೇ ಅನ್ನದಾತರು ನಷ್ಟದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಹಲವು ಕಡೆ ಈರುಳ್ಳಿಯನ್ನು ತಮ್ಮ ಭೂಮಿಯಲ್ಲಿಯೇ ಬೆಳೆ ನಾಶ ಮಾಡುತ್ತಿದ್ದಾರೆ.
ಎಲ್ಲೆಲ್ಲಿ ಬೆಳೆ ನಾಶ ?
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮದುರ್ಗ ಎಂಬ ಗ್ರಾಮದಲ್ಲಿ ಚಿನ್ನಯ್ಯ ಎಂಬ ರೈತ ತಮ್ಮ ಬೆಳೆಗಳನ್ನು ನಾಶ ಪಡಿಸಿದ್ದಾರೆ. ಏಕೆಂದರೆ, ರೈತ ಚಿನ್ನಯ್ಯರವರು 4 ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆದಿದ್ದರು. ಇದೀಗ ಬೆಲೆ ಏರಿಕೆ ಮಾಡದೆ ಇರುವ ಕಾರಣದಿಂದ ಚಿನ್ನಯ್ಯರವರು ತಮ್ಮ ಟ್ರಾಕ್ಟರ್ ಬೇಸಾಯ ಹೊಡೆದು ಸಂಪೂರ್ಣ ಬೆಳೆ ನಾಶ ಪಡಿಸಿದ್ದಾರೆ. ಲಕ್ಷಾಂತರ ಬಂಡವಾಳ ಹಾಕಿ ಈರುಳ್ಳಿ ಬೆಳೆದಿದ್ದ ಈ ರೈತನಿಗೆ ಮಳೆಯಿಂದ ಹಲವಾರು ನಷ್ಟಗಳನ್ನು ಕಂಡು, ಇದರಿಂದ ಬೇಸತ್ತು ಚಿನ್ನಯ್ಯರವರು ಸಂಪೂರ್ಣ ಬೆಳೆ ನಾಶ ಪಡಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಈರುಳ್ಳಿ ನಾಶ ಮಾಡಿದ ರೈತ ಮಹಿಳೆ
ಚಿತ್ರದುರ್ಗದಲ್ಲಿ ಲಕ್ಷ್ಮಮ್ಮ ಎಂಬ ರೈತ ಮಹಿಳೆಯೊಬ್ಬಳು 4 ಎಕರೆ 34 ಗುಂಟೆಯಲ್ಲಿ ಈರುಳ್ಳಿ ಬೆಳೆದಿದ್ದರು. ಲಕ್ಷಾಂತರ ಬಂಡವಾಳ ಹಾಕಿ ಬಾರಿ ನಷ್ಟಕ್ಕೆ ಸಿಲುಕಿರುವ ಇವರು, ಹಣ ಮತ್ತು ಈರುಳ್ಳಿಯನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ತನಗೆ ತಾನೆ ಶಿಕ್ಷೆಯನ್ನು ಕೊಟ್ಟುಕೊಂಡಿದ್ದಾಳೆ. ಕೊಳೆ ರೋಗ & ಈರುಳ್ಳಿ ದರ ಕುಸಿದ ಕಾರಣದಿಂದಾಗಿ ಟ್ರಾಕ್ಟರ್ ಮೂಲಕ ಬೆಳೆದ ಬೆಳಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾಳೆ. ಲಕ್ಷ್ಮಮ್ಮ ಬಿಸಾಡಿದ ಈರುಳ್ಳಿಯನ್ನು ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಆಯ್ದುಕೊಂಡರು. ಬೆಳೆ ಬೆಳೆದು ಲಾಭ ಗಳಿಸುವ ನಿರೀಕ್ಷೆಯಲ್ಲಿ ರೈತರಿಗೆ ಬರೆ ಎಳೆದ ಮಳೆಯು ಸಂಪೂರ್ಣ ನಾಶವಾಗಿದ ಹಿನ್ನಲೆಯಲ್ಲಿ ಈ ರೀತಿಯಾಗಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಚಿತ್ರದುರ್ಗದ ಲಕ್ಷ್ಮಮ್ಮ ಈ ಮೂಲಕ ತಮ್ಮಅಳಲನ್ನು ಹೊರಹಾಕಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ 1ತಿಂಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಬೆಳೆ ಈರುಳ್ಳಿ ಬೆಳೆ ಬಹುತೇಕ ಹಾನಿಯಾಗಿದೆ. ಸಂಕಷ್ಟಕ್ಕೆ ಸಿಲುಕಿದ ಸಜ್ಜನಕೆರೆ ಗ್ರಾಮದ ರೈತರಿಗೆ ಪ್ರತಿನಿತ್ಯವೂ ಆತಂಕ ಹೆಚ್ಚಾಗಲು ಆರಂಭವಾಗಿದೆ. ಏಕೆಂದರೆ, ಎರಡೂವರೆ ಎಕರೆ ಈರುಳ್ಳಿ ಬಿತ್ತನೆ ಮಾಡಿದ್ದ ರೈತರಿಗೆ ದಿನದಿಂದ ದಿನಕ್ಕೆ ಕಂಗಾಲು ಹೆಚ್ಚಾಗಲು ಆರಂಭಿಸಲಾಗಿದೆ.
ಗ್ರಾಮದಲ್ಲಿ ಸಾಲಬಾಧೆಯಿಂದ ಹೈರಾಣಾಗಿರುವ ಅಲ್ಲಿಯ ರೈತ ಲೋಕೇಶಪ್ಪನವರು ವಿಷದ ಬಾಟಲಿ ಹಿಡಿದು ಇದೊಂದೆ ಪರಿಹಾರ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ರೈತ ವಿಷದ ಬಾಟಲಿ ಹಿಡಿದು ಸಂಕಟ ತೋಡಿಕೊಂಡ ವಿಡಿಯೋ ವೈರಲ್ ಕೂಡ ಆಗಿತ್ತು.
ಇದನ್ನೂ ಓದಿ: ಮಂಗಳೂರಿನ PFI, SDPI ಕಚೇರಿ ಮೇಲೆ ಎನ್ಐಎ ದಾಳಿ; ಅರೆ ಮೀಸಲು ಪಡೆಯಿಂದ ಭದ್ರತೆ
ಗದಗ ಬ್ರೇಕಿಂಗ್
ಮಳೆ ಹಾನಿ ಪ್ರದೇಶಕ್ಕೆ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿದ್ದರು. ಭೇಟಿ ವೇಳೆ ಸಚಿವರ ಎದುರು ಕಣ್ಣೀರಿಟ್ಟು ಓರ್ವ ರೈತ ಮಹಿಳೆಯೊಬ್ಬಳು ತಮ್ಮ ಗೋಳಗಳನ್ನು ತೋಡಿಕೊಂಡಳು. ಈ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದುಬಂದಿದೆ. ಇಲ್ಲಿಯ ಸವಳು ಹಳ್ಳದ ಆರ್ಭಟಕ್ಕೆ ಜಮೀನು ಕೊಚ್ಚಿ ಹೋಗಿವೆ. ಇದರಿಂದ ಸುಮಾರು 10 ಎಕರೆ ಜಮೀನು ಸಂಪೂರ್ಣ ಕೊಚ್ಚಿ ಹೋಗಿದೆ ಎಂದು ರೈತರು ದೃಢಪಡಿಸಿದ್ದಾರೆ.
ಮೆಣಸಿನಕಾಯಿ, ಈರುಳ್ಳಿ, ಶೇಂಗಾ ಸಂಪೂರ್ಣ ಇಲ್ಲಿ ಹಾಳಾಗಿದೆ. ಬಡ್ಡಿ ಸಾಲ ಮಾಡಿ ಕೃಷಿ ಮಾಡಿದ್ದೇ ಈ ಎಲ್ಲವೂ ಹೋಯ್ತು ಅಂತ ರೈತರು ತಮ್ಮ ಅಳಲು ಮುಗಿಲೇರಿದೆ.
'ಹೆಸರು ಬೆಳೆ ಕೂಡ ಹಾನಿಯಾಗಿ ಸತ್ತು ಹೋಗಿದ್ದೇನೆ, ಈಗ ಬೆಳೆ ಜೊತೆ ಜಮೀನು ಹಾಳಾಗಿದೆ, ಕೃಷಿ ಮಾಡೋದಾದ್ರೂ ಹೇಗೆ' ಎಂದು ಗ್ರಾಮದ ರೈತ ಅಂತ ಕಣ್ಣೀರನ್ನು ಹಾಕಿದ್ದಾನೆ.
'ಸರ್ ನಮಗೆ ಜಮೀನು ಸರಿ ಮಾಡಿ ಕೊಡಬೇಕು' ಅಂತ ಸುಮಿತ್ರಾ ಕಟ್ಟಿಮನಿ ಎಂಬ ರೈತ ಮಹಿಳೆ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ.
ಈರಳ್ಳಿ ಬೆಳೆಗಾರರು ಹೆಚ್ಚಾಗಿ ರಾಜ್ಯದಲ್ಲಿ ತಮ್ಮ ನೋವನ್ನು ವ್ಯಕ್ತ ಪಡಿಸಿದ್ದಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ಬೆಲೆಯು ಏರಿಸುತ್ತಿಲ್ಲ. ಹೀಗಾಗಿ ಚಿತ್ರದುರ್ಗದ ಬುರುಡುಕುಂಟೆ ಗ್ರಾಮಸ್ಥರು ತಾವು ಬೆಳೆದ ಈರುಳ್ಳಿಯನ್ನು ವೇದಾವತಿ ನದಿಗೆ ಸುರಿದಿದ್ದಾರೆ. ಉಳಿದ ತರಕಾರಿಗಳ ಬೆಲೆಯು ಮಾತ್ರ ಗಗನಕ್ಕೇರಿದೆ. ಆದರೆ ಈರುಳ್ಳಿಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಗೋಳಾಟದಿಂದ ಈ ರೀತಿಯಾಗಿ ಮಾಡಿದ್ದಾರೆ.
ಈ ಗ್ರಾಮದ ರೈತರು ಎರಡು ವಿಷಯಗಳಿಗೆ ಕಂಗಾಲಾಗಿದ್ದಾರೆ. ಒಂದನೆಯದು ಅತಿಯಾದ ಮಳೆಯಿಂದ ಈರುಳ್ಳಿ ಸಂಪೂರ್ಣ ಹಾಳು. ಇನ್ನೊಂದು ಬೆಳೆದು ನಿಂತ ಈರುಳ್ಳಿಗೆ ಬೆಲೆ ಇಲ್ಲದಾಗಿದೆ. ಇದರಿಂದ ಕಂಗಾಲಾದ ಜನರು ಅದನ್ನೇ ನದಿಗೆ ಸುರಿದಿದ್ದಾರೆ.
ಈ ಹಿಂದೆ ಕೊರೋನ ಸಮಯದಲ್ಲಿ ಬೆಲೆ ಏರಿಕೆ ಆಗದ ಕಾರಣದಿಂದ ರೈತರು ಕಲ್ಲಂಗಡಿ, ಟೊಮೇಟೋ ತರಕಾರಿಗಳನ್ನು ಚಲ್ಲಿದ್ದರು. ಸರ್ಕಾರ ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಬೆಲೆ ಏರಿಕೆ ಮಾಡಬಹುದು ಎಂದು ಇದೀಗ ಗ್ರಾಹಕರು ಅನುಮಾನದಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ