• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Next CM: ಸಿಎಂ ಸ್ಥಾನದ ರೇಸ್​ನಲ್ಲಿರೋ ಡಿಕೆಶಿ-ಸಿದ್ದರಾಮಯ್ಯ ಪ್ಲಸ್, ಮೈನಸ್ ಏನು?

Karnataka Next CM: ಸಿಎಂ ಸ್ಥಾನದ ರೇಸ್​ನಲ್ಲಿರೋ ಡಿಕೆಶಿ-ಸಿದ್ದರಾಮಯ್ಯ ಪ್ಲಸ್, ಮೈನಸ್ ಏನು?

ಸಿದ್ದರಾಮಯ್ಯ / ಡಿಕೆ ಶಿವಕುಮಾರ್

ಸಿದ್ದರಾಮಯ್ಯ / ಡಿಕೆ ಶಿವಕುಮಾರ್

Congress CM Candidates: ಸಿಎಂ ರೇಸ್​ನಲ್ಲಿರುವ ಈ ಇಬ್ಬರು ನಾಯಕರ ಪ್ಲಸ್ ಮತ್ತು ಮೈನಸ್ ಗಳೇನು ಎಂಬುದರ ಮಾಹಿತಿ ಇಲ್ಲಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  (KPCC DK Shivakumar) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ನಾಯಕತ್ವದಲ್ಲಿ ಚುನಾವಣೆಗೆ ಹೋಗಿದ್ದ ಕಾಂಗ್ರೆಸ್​ಗೆ (Congress) ಪ್ರಚಂಡ ಬಹುಮತ ಸಿಕ್ಕಿದೆ. ಬಿಜೆಪಿ ಮತ್ತು ಜೆಡಿಎಸ್ (BJP And JDS) ರಣತಂತ್ರಗಳನ್ನು ವಿಫಲಗೊಳಿಸಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಮುಂದಾಗಿದೆ. ಈ ಹಿನ್ನೆಲೆ ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ (CLP Meeting) ಕರೆದಿದೆ. ಚುನಾವಣೆಯಲ್ಲಿ ಗೆಲುವು ದಾಖಲಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಈ ಸಭೆಯಲ್ಲಿ ಯಾರು ಸಿಎಂ ಆಗ್ತಾರೆ ಅನ್ನೋ ಚರ್ಚೆಗೆ ತೆರೆ ಬೀಳುವ ಸಾಧ್ಯತೆಗಳಿಗೆ.


ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಇಬ್ಬರಲ್ಲಿ ಯಾರಿಗೆ ಸಿಎಂ ಸ್ಥಾನ ಸಿಗುತ್ತೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಹಾಗಾದ್ರೆ ಸಿಎಂ ರೇಸ್​ನಲ್ಲಿರುವ ಈ ಇಬ್ಬರು ನಾಯಕರ ಪ್ಲಸ್ ಮತ್ತು ಮೈನಸ್ ಗಳೇನು ಎಂಬುದರ ಮಾಹಿತಿ ಇಲ್ಲಿದೆ.


ಸಿದ್ದರಾಮಯ್ಯ ಅವರ ಪ್ಲಸ್ ಅಂಶಗಳು


*ಐದು ವರ್ಷ ಅಧಿಕಾರ ನಡೆಸಿದ್ದು, ಹಲವು ಜನಪರ ಯೋಜನೆಗಳನ್ನು ನೀಡಿರುವ ನಾಯಕ. ಸಿದ್ದರಾಮಯ್ಯ ಅವರ ಯೋಜನೆಗಳು ಇಂದಿಗೂ ಜನಪ್ರಿಯವಾಗಿವೆ.


*ಕುರುಬ ಸಮುದಾಯದ ನಾಯಕರಾಗಿರುವ ಸಿದ್ದರಾಮಯ್ಯ ರಾಜ್ಯದ ಮಾಸ್​ ಲೀಡರ್​ಗಳಲ್ಲಿ ಒಬ್ಬರು ಆಗಿದ್ದಾರೆ. ಇದರ ಜೊತೆಗೆ ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.


ಡಿಕೆ ಶಿವಕುಮಾರ್ / ಸಿದ್ದರಾಮಯ್ಯ


*ಸಿದ್ದರಾಮಯ್ಯ ಓರ್ವ ಉತ್ತಮ ಆಡಳಿತಗಾರು ಹಾಗೂ ಹಣಕಾಸು ತಜ್ಞ ಎಂಬ ಅಭಿಪ್ರಾಯ ರಾಜ್ಯದಲ ಜನರಲ್ಲಿದೆ. ಸಿಎಂ ಆದ್ರೆ ಐದು ವರ್ಷ ಸರ್ಕಾರ ಸುಸೂತ್ರವಾಗಿ ನಡೆಯಲಿದ ಎಂಬವುದು ಹಲವು ನಾಯಕರ ಅಭಿಪ್ರಾಯವಾಗಿದೆ.


*ಸಿದ್ದರಾಮಯ್ಯ ಅವರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವ ಗುಣ ಸಿದ್ದರಾಮಯ್ಯ ಅವರಲ್ಲಿದೆ ಅನ್ನೋದು ಅವರ ಆಪ್ತರ ಮಾತಾಗಿದೆ. ವೈಯಕ್ತಿವಾಗಿ ಯಾವುದೇ ಭ್ರಷ್ಟಾಚಾರದ ಆರೋಪಗಳು ಸಿದ್ದರಾಮಯ್ಯ ಅವರ ಮೇಲಿಲ್ಲ.


*ಹೈಕಮಾಂಡ್​ ಮಟ್ಟದಲ್ಲಿಯೂ ಸಿದ್ದರಾಮಯ್ಯ ಒಳ್ಳೆಯ ಹೆಸರು ಹೊಂದಿರುವ ನಾಯಕ. ರಾಹುಲ್ ಗಾಂಧಿ ಸಹ ಸಿದ್ದರಾಮಯ್ಯ ಅವರ ಗೌರವ ಹೊಂದಿದ್ದಾರೆ.


After exit poll survey siddaramaiah and dk shivakumar contacts possible winners mrq
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ


ಸಿದ್ದರಾಮಯ್ಯ ಅವರ ಮೈನಸ್​ ಅಂಶಗಳು


*ಈಗಾಗಲೇ ಒಂದು ಬಾರಿ ಸಿಎಂ ಆಗಿದ್ದು, ಹೊಸಬರಿಗೆ ಅವಕಾಶ ಸಿಗಲಿ ಅನ್ನೋ ಮಾತು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿದೆ.


*ಸಿದ್ದರಾಮಯ್ಯ ವಯಸ್ಸಾಗಿದ್ದು, ಕಳೆದ ಕೆಲವು ದಿನಗಳಿಂದ ಸಣ್ಣ ಆರೋಗ್ಯ ಸಮಸ್ಯೆಗಳು ಕಾಡುತ್ತಿರೋದು.


*ಹೈಕಮಾಂಡ್ ಮಟ್ಟದಲ್ಲಿ ಡಿಕೆ ಶಿವಕುಮಾರ್ ಅತ್ಯಂತ ಪ್ರಭಾವಿಯಾಗಿರೋದು.


*ಸಿದ್ದರಾಮಯ್ಯ  ಮೂಲ ಕಾಂಗ್ರೆಸ್ಸಿಗರು ಅಲ್ಲ ಎಂಬ ಮಾತಿದೆ.


ಡಿಕೆ ಶಿವಕುಮಾರ್ ಪ್ಲಸ್ ಪಾಯಿಂಟ್​ಗಳು


*ಡಿಕೆ ಶಿವಕುಮಾರ್ ಟ್ರಬಲ್ ಶೂಟರ್ ನಾಯಕರಾಗಿದ್ದು, ಯುವ ಸಮುದಾಯದ ನೆಚ್ಚಿನ ಲೀಡರ್ ಆಗಿದ್ದಾರೆ.


*ಡಿಕೆ ಶಿವಕುಮಾರ್ ಆಕ್ರಮಣಕಾರಿ ರಾಜಕೀಯ ತಂತ್ರಗಾರಿಕೆಗೆ ಸಿದ್ಧ.


*ಹಳೆ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದು, ಮೇಕೆದಾಟು ಸೇರಿದಂತೆ ಹಲವು ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿರೋದು.


*ಅಧ್ಯಕ್ಷ ಸ್ಥಾನಕ್ಕೆ ಏರಿದ ದಿನದಿಂದ ಪಕ್ಷ ಮತ್ತು ಹೈಕಮಾಂಡ್​ಗೆ ಬದ್ಧವಾಗಿರೋದು.


*ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದು, 35 ವರ್ಷದ ಬಳಿಕ ಅಭೂತಪೂರ್ವ ಗೆಲುವಿಗೆ ಕಾರಣ.




ಡಿಕೆ ಶಿವಕುಮಾರ್ ಮೈನಸ್​ ಪಾಯಿಂಟ್​ಗಳು


*ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರದ ಆರೋಪಗಳಿವೆ.


*ಡಿಕೆ ಶಿವಕುಮಾರ್ ವಿರುದ್ಧ ಐಟಿ ಮತ್ತು ಇಡಿಯಲ್ಲಿ ಪ್ರಕರಣಗಳಿವೆ.


ಇದನ್ನೂ ಓದಿ:  Bengaluru To Chennai: ಬೆಂಗಳೂರು ಚೆನ್ನೈ ಪ್ರಯಾಣಿಕರಿಗೆ ಸಂತಸದ ಸುದ್ದಿ


*ಹಳೆ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ರೂ, ಉತ್ತರ ಕರ್ನಾಟಕ ಭಾಗದಲ್ಲಿ ಫೇಮ್ ಹೊಂದಿಲ್ಲ.

top videos


    *ಸಿದ್ದರಾಮಯ್ಯ ರೀತಿಯಲ್ಲಿ ಮಾಸ್ ಲೀಡರ್ ಎಂಬ ಹೆಗ್ಗಳಿಕೆ ಇಲ್ಲ

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು