BSY: ಬಿ ಎಸ್ ಯಡ್ಯೂರಪ್ಪ ಮುಂದಿನ ನಡೆ ಏನು? ಬಿಜೆಪಿ ಲೆಕ್ಕಾಚಾರ, ಬಿಎಸ್​ವೈ ಜವಾಬ್ದಾರಿ ಎಲ್ಲವೂ 2023 ಚುನಾವಣೆಯ ಸುತ್ತಲೇ

ಬಿ ಎಸ್ ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ. ಬಿಎಸ್ವೈ ಬಿಟ್ಟು ಸರ್ಕಾರ ಹಾಗೂ ಪಕ್ಷ ಮುನ್ನೆಡಸಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಬಿಗ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಬಿಎಸ್ವೈ ಇಟ್ಟುಕೊಂಡೆ ಪಕ್ಷ ಕಟ್ಟಬೇಕು, ಸರ್ಕಾರ ಮುನ್ನೆಡಸಬೇಕು. 2023 ಕ್ಕೆ ಮತ್ತೆ ಅಧಿಕಾರಕ್ಕೆ ಬರಬೇಕು.

ಹಂಗಾಮಿ ಸಿಎಂ ಬಿ.ಎಸ್.​ಯಡಿಯೂರಪ್ಪ.

ಹಂಗಾಮಿ ಸಿಎಂ ಬಿ.ಎಸ್.​ಯಡಿಯೂರಪ್ಪ.

  • Share this:
B S Yedyurappa: ಬಿಎಸ್ವೈ ಮುಂದೇನು? ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ತಾನು ಪಕ್ಷದ ಪರ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಬಿಎಸ್​ವೈ ವಿದಾಯ ಭಾಷಣದಲ್ಲಿ ಹೇಳಿರೋದು ಹಾಗಿದ್ರೆ ಅವರ ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಏಳುವಂತೆ ಮಾಡಿದೆ. ಬಿ ಎಸ್ ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ. ಬಿಎಸ್ವೈ ಬಿಟ್ಟು ಸರ್ಕಾರ ಹಾಗೂ ಪಕ್ಷ ಮುನ್ನೆಡಸಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಬಿಗ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಬಿಎಸ್ವೈ ಇಟ್ಟುಕೊಂಡೆ ಪಕ್ಷ ಕಟ್ಟಬೇಕು, ಸರ್ಕಾರ ಮುನ್ನೆಡಸಬೇಕು. 2023 ಕ್ಕೆ ಮತ್ತೆ ಅಧಿಕಾರಕ್ಕೆ ಬರಬೇಕು. ಇದೇ ಕಾರಣಕ್ಕೆ ಬಿಸ್ವೈಗೆ ಕೈ ತುಂಬಾ ಕೆಲಸ ಹಚ್ಚಲು ಮುಂದಾಗಿದೆ ಕೇಂದ್ರ ಬಿಜೆಪಿ. ಸಮನ್ವಯ ಸಮಿತಿ ರಚನೆ ಚಿಂತನೆ ನಡೆದಿದೆ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಸಮಾಧಾನಕ್ಕಾಗೇ ಸಮನ್ವಯ ಸಮಿತಿ ಇತ್ತು, ಇಲ್ಲೂ ಕೂಡ ಸಮನ್ವಯ ಸಮಿತಿ ರಚಿಸೋ ಸಾಧ್ಯತೆ ಇದೆ. ಬಿಎಸ್ವೈ ಸಮನ್ವಯ ಸಮಿತಿ ಮುಖ್ಯಸ್ಥರನ್ನಾಗಿಸಿ ರಾಜ್ಯ ಬಿಜೆಪಿ ಉಸ್ತುವಾರಿ, ರಾಜ್ಯ ಬಿಜೆಪಿ ಅಧ್ಯಕ್ಷ , ಹಿರಿಯ ನಾಯಕರು, ಸಿಎಂ, ಡಿಸಿಎಂಗಳನ್ನ ಸದಸ್ಯರನ್ನಾಗಿಸೋದು…ಸರ್ಕಾರಕ್ಕೆ ಸಲಹೆ ಕೊಡುವುದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಆಡಳಿತಾತ್ಮಕ ಮಾರ್ಗದರ್ಶನ , ಸರ್ಕಾರ ಹಾಗೂ ಪಕ್ಷ ದ ಸಮನ್ವಯತೆ, ಸಂಕಷ್ಟದ ಸಂದರ್ಭ ನಿಭಾಯಿಸೋದು, ಸಮನ್ವಯದ ಕೆಲಸ..ಆ ಮೂಲಕ ಸಿಎಂ ಬಿಎಸ್ವೈಗೆ ಸರ್ಕಾರದ ಹೆಗಲಾಗಿ ಕೆಲಸ ಮಾಡೋ ಜವಾಬ್ದಾರಿ ನೀಡೋ ಸಾಧ್ಯತೆ ಹೆಚ್ಚಿದೆ.

ಅಲ್ಲದೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬಿಎಸ್ವೈ ನೇಮಕ ಸಾಧ್ಯತೆ ಕೂಡಾ ದಟ್ಟವಾಗಿದೆ. ಬಿ ವೈ ವಿಜಯೇಂದ್ರ ಭವಿಷ್ಯ ಮತ್ತು ಬಿಎಸ್ವೈ ಟೀಮ್ ಕುರಿತಾಗಿಯೂ ಸಾಕಷ್ಟು ಚರ್ಚೆಗಳಾಗಿವೆ. ನಿನ್ನೆ  ರಾತ್ರಿ ಹಂಗಾಮಿ ಸಿಎಂ ಬಿಎಸ್ವೈ ಕಾವೇರಿ ನಿವಾಸದಲ್ಲಿ ಸಭೆ ನಡೆದಿದೆ. ಇದೊಂದು ಕೌಟುಂಬಿಕ ಸಭೆಯಾಗಿದ್ದು ಬಿ ವೈ ವಿಜಯೇಂದ್ರ ಭವಿಷ್ಯದ ಬಗ್ಗೆ ಸಭೆ ನಡೆಸಲಾಗಿದೆ. ವರಿಷ್ಟರ ಬಳಿ ವಿಜಯೇಂದ್ರ ಗೆ ಜವಾಬ್ದಾರಿ, ಸರ್ಕಾರದಲ್ಲಿ ಸ್ಥಾನಮಾನದ ಬಗ್ಗೆ ಒತ್ತಡ ಹೇರಿ ವರಿಷ್ಟರ ಬಳಿ ಬೇಡಿಕೆ ಇಡುವಂತೆ ಬಿಎಸ್ವೈಗೆ ಒತ್ತಾಯ ಮಾಡಲಾಗಿದೆ. ವಿಜಯೇಂದ್ರರನ್ನು ಡಿಸಿಎಂ ಮಾಡೋದು ಬೇಡ, ಮಂತ್ರಿ ಮಾಡಿ ಒಳ್ಳೆ ಖಾತೆ ಕೊಡುವಂತೆ ಮನವಿ ಮಾಡಿ… ರಾಜ್ಯಕ್ಕೆ ಬರೋ ವೀಕ್ಷಕರಿಗೆ ಮನವಿ ಮಾಡುವಂತೆ ಫ್ಯಾಮಿಲಿ ಮೀಟಿಂಗ್ ನಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: B S Yedyurappa Resigns: ಎರಡೇ ಸಾಲಿನ ರಾಜೀನಾಮೆ ಪತ್ರದ ಮೂಲಕ ಸಾವಿರ ಮಾತು ಹೇಳಿದ್ರಾ ಬಿಎಸ್​ವೈ? ಪತ್ರದ ಒಳಾರ್ಥವೇನು ?

ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಬಿಎಸ್ವೈ ಅಭಿಪ್ರಾಯ ಅಭಿಪ್ರಾಯ ಪರಿಗಣಿಸಲಿರೋ ವರಿಷ್ಟರು: ಈ ಸಂದರ್ಭದಲ್ಲಿ ಬಿಎಸ್ವೈ ನಿಷ್ಟರಿಗೆ ಎಷ್ಟು ಸಾಧ್ಯವೋ ಅಷ್ಟು ಶಾಸಕರನ್ನ ಮಂತ್ರಿ ಮಾಡಿಸೋದು, ಬಿಎಸ್ವೈ ಕಡೆಯವರೊಬ್ಬರನ್ನಾದರೂ ಡಿಸಿಎಂ ಮಾಡಿಸೋದು. ಬಿಎಸ್ವೈ ಅವದಿಯಲ್ಲಿ ಆಗಿರೋ ಕೆಲ ನಿಷ್ಟಾವಂತ ಬೆಂಬಲಿಗ ನಿಗಮ, ಮಂಡಳಿ ಅಧ್ಯಕ್ಷರನ್ನು ಬದಲಾಯಿಸದಂತೆ ನೋಡಿಕೊಳ್ಳುವುದು, ಸರ್ಕಾರದಲ್ಲಿ ಬಿಎಸ್ವೈ ಹಿಡಿತದ ಬಗ್ಗೆ ಫ್ಯಾಮಿಲಿ ಮೀಟಿಂಗ್ ನಲ್ಲಿ ಪ್ಲಾನ್ ಮಾಡಲಾಗಿದೆ. ಎಲೆಕ್ಷನ್ ಕ್ಯಾಬಿನೆಟ್ ಪಕ್ಷ ಮತ್ತು ಸರ್ಕಾರದ ಇಮೇಜ್ ಬಿಲ್ಡ್ ಮಾಡಬೇಕು. 2023 ರಲ್ಲಿ ಬಿಜೆಪಿ  ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ಲೆಕ್ಕಚಾರವಾಗಿದೆ.

ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಎಲೆಕ್ಷನ್ ಕ್ಯಾಬಿನೆಟ್ ರಚನೆ ಮಾಡಲಿದೆ. ಜಿಲ್ಲಾವಾರು, ಪ್ರಾದೇಶಿಕವಾರು, ಜಾತಿವಾರು,ಶುದ್ಧ ಹಾಗೂ ಯುವ ಮುಖಗಳಿಗೆ ಮಣೆ ಹಾಕಿ ಹೊಸ ಕ್ಯಾಬಿನೆಟ್ ಡಿಫರೆಂಟ್ ಆಗಿರಬೇಕು, ರಾಜ್ಯದ ಜನರ ಮನಗೆಲ್ಲಬೇಕು ಎನ್ನುವುದು ಹೈಕಮಾಂಡ್ ಪ್ಲಾನ್ ಆಗಿದೆ. ಸಚಿವರಾದವರು ಸುಮ್ಮನೆ ಕೂರುವಂತಿಲ್ಲ. ಅವರಿಗೆ ಜವಾಬ್ದಾರಿಯನ್ನೂ ಹೈಕಮಾಂಡ್ ನೀಡಲಿದೆ. ಡಿಸಿಎಂ ಆದವರಿಗೆ ೧೦ ಕ್ಷೇತ್ರಗಳ ಜವಾಬ್ದಾರಿ, ಸಚಿವರಾದವರಿಗೆ ೫ ರಿಂದ ೬ ಕ್ಷೇತ್ರಗಳ ಜವಾಬ್ದಾರಿ. ಸಚಿವಗಿರಿ ಜೊತೆಗೆ ಜವಾಬ್ದಾರಿ ಕೊಟ್ಟ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು, ನಾಯಕರನ್ನು ಬೆಳೆಸಬೇಕು. ಕಾರ್ಯಕರ್ತರ ಅಹವಾಲು ಆಲಿಸಬೇಕು, ಅಭಿವೃದ್ಧಿ ಕೆಲಸಗಳನ್ನ ಮಾಡಬೇಕು, ಸ್ಥಳೀಯ ಸಮಸ್ಯೆಗಳ ಬಗೆಹರಿಸಲು ಒತ್ತು ಕೊಡಬೇಕು, ಕ್ಷೇತ್ರಗಳಲ್ಲಿ ನಿರಂತರ ಪ್ರವಾಸ , ಕಾರ್ಯಕ್ರಮ ಮಾಡಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನ ಮನೆ ಮನೆಗೆ ಮುಟ್ಟಿಸಬೇಕು, ಆ ಮೂಲಕ 2023 ರ ವಿಧಾನಸಭೆ ಚುನಾವಣೆಗೆ ಗೆಲ್ಲುವಂತೆ ಮಾಡಬೇಕು ಎನ್ನುವುದು ಹೈಕಮಾಂಡ್ ಎಲೆಕ್ಷನ್ ಕ್ಯಾಬಿನೆಟ್ ಲೆಕ್ಕಚಾರವಾಗಿದೆ. ಜೊತೆಗೆ ಪ್ರತಿ ಸಮುದಾಯ ಪ್ರತಿನಿಧಿಸೋ ತಲಾ ಒಬ್ಬರನ್ನ ಸಚಿವರನ್ನಾಗಿಸೋ ಪ್ಲಾನ್ ಮಾಡಲಾಗಿದೆ.
Published by:Soumya KN
First published: