• Home
  • »
  • News
  • »
  • state
  • »
  • ಶಾಸಕ ಸ್ಥಾನದಿಂದ ನನ್ನನ್ನು ಪದಚ್ಯುತಗೊಳಿಸಲು ಯಾವ ಸಂವಿಧಾನವಿದೆ; ಕಾಂಗ್ರೆಸ್​ ವಿರುದ್ಧ ಯತ್ನಾಳ್​ ಗುಡುಗು

ಶಾಸಕ ಸ್ಥಾನದಿಂದ ನನ್ನನ್ನು ಪದಚ್ಯುತಗೊಳಿಸಲು ಯಾವ ಸಂವಿಧಾನವಿದೆ; ಕಾಂಗ್ರೆಸ್​ ವಿರುದ್ಧ ಯತ್ನಾಳ್​ ಗುಡುಗು

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ದೊರೆಸ್ವಾಮಿ ಅವರ ಕುರಿತು ನನ್ನ ಹೇಳಿಕೆಗೆ ನಾನು ಯಾವುದೇ ಪರಿಸ್ಥಿತಿಯಲ್ಲಿ ಕ್ಷಮೆ ಕೇಳೋದಿಲ್ಲ. ಸ್ವಾತಂತ್ಯ ಹೋರಾಟಗಾರರಿಗೆ ಗೌರವ ಕೊಡ್ತಿನಿ. ಆದರೆ, ಸೋ ಕಾಲ್ಡ್‌ ನಕಲಿ ಹೋರಾಟಗಾರರಿಗೆ ಈಗಲು ಬೆಲೆ ಕೊಡುವುದಿಲ್ಲ. ತನಿಖೆ ಮಾಡಲಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸಲಿ ಎಂದು ಶಾಸಕ ಯತ್ನಾಳ್ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಮಾರ್ಚ್​ 02); ನನ್ನನ್ನು ಶಾಸಕ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಮಾಡಲು ಯಾವುದೇ ಉದ್ಯೋಗ ಇಲ್ಲದ ಕಾರಣ ಕೈ ಪಕ್ಷದ ನಾಯಕರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.


ಈ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಕಿಡಿಕಾರಿದ್ದ ಬಿಜೆಪಿ ಶಾಸಕ ಯತ್ನಾಳ್ ಅವರೋರ್ವ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್” ಎಂದು ಕಿಡಿಕಾರಿದ್ದರು. ಈ ವಿಚಾರ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಯತ್ನಾಳ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ, ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಕಾಂಗ್ರೆಸ್​ ನಾಯಕರು ಬಿಜೆಪಿಯನ್ನು ಒತ್ತಾಯಿಸುತ್ತಿದೆ.


ಕಾಂಗ್ರೆಸ್​ ನಾಯಕರ ಟೀಕೆಯ ಕುರಿತು ಇಂದು ಕಿಡಿಕಾರಿರುವ ಶಾಸಕ ಯತ್ನಾಳ್, "ನನ್ನನ್ನು ಪದಚ್ಯುತಗೊಳಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಹಾಗೆ ಮಾಡುವುದಾದರೆ ಮೊದಲು ಕಾಂಗ್ರೆಸ್​ನವರು ರಾಹುಲ್ ಗಾಂಧಿ, ಮಣಿಶಂಕರ್ ಅಯ್ಯರ್‌ರನ್ನ ಪದಚ್ಯುತಿಗೊಳಿಸಲಿ. ದೇಶವಿರೋದಿ ಚಟುವಟಿಕೆ ಜೊತೆ ತುಕಡೆಗ್ಯಾಂಗ್‌ ಜೊತೆ ರಾಹುಲ್ ಫೋಟೋ ತೆಗೆಸಿಕೊಳ್ಳುತ್ತಾರೆ ಅಂತವರನ್ನು ಮೊದಲ ಪದಚ್ಯುತಗೊಳಿಸಲಿ" ಎಂದಿದ್ದಾರೆ.


"ಇನ್ನೂ ದೊರೆಸ್ವಾಮಿ ಅವರ ಕುರಿತು ನನ್ನ ಹೇಳಿಕೆಗೆ ನಾನು ಯಾವುದೇ ಪರಿಸ್ಥಿತಿಯಲ್ಲಿ ಕ್ಷಮೆ ಕೇಳೋದಿಲ್ಲ. ಸ್ವಾತಂತ್ಯ ಹೋರಾಟಗಾರರಿಗೆ ಗೌರವ ಕೊಡ್ತಿನಿ. ಆದರೆ, ಸೋ ಕಾಲ್ಡ್‌ ನಕಲಿ ಹೋರಾಟಗಾರರಿಗೆ ಈಗಲು ಬೆಲೆ ಕೊಡುವುದಿಲ್ಲ. ತನಿಖೆ ಮಾಡಲಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸಲಿ. ಯಾವಾಗ ಬ್ರಿಟಿಷ್ ಅಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ, ಯಾವಾಗ ಜೈಲಿಗೋಗಿದ್ದಾರೆ ಎಲ್ಲವೂ ತನಿಖೆಯಿಂದ ತಿಳಿಯಲಿ" ಎಂದು ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ ಹೊರಹಾಕಿರುವ ಅವರು, "ನಕ್ಸಲ್ ವಾದ ಸಿದ್ದರಾಮಯ್ಯನವರಿಗೆ ಕಾಣುವುದಿಲ್ಲ. ನಾವು ಹಿಂದುತ್ವದ ಬಗ್ಗೆ ಮಾತನಾಡಿದರೆ ಅಪರಾದಿಗಳು ಅಂತಾರೆ. ಇದನ್ನೆಲ್ಲ ಸಿದ್ದರಾಮಯ್ಯನವರು ಬಿಡಬೇಕು. ಈಗ ವಿಪಕ್ಷದಲ್ಲಿ ಇದ್ದಾರೆ, ಮುಂದೆ ದೇಶದಲ್ಲಿ ಝೀರೋ ಆಗೋ ಪರಿಸ್ಥಿತಿ ಉದ್ಭವವಾಗಲಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ : ಶಾಸಕ ಯತ್ನಾಳ್​ಗೆ ಮಾಡೋಕೆ ಬೇರೆ ಏನೂ ಕೆಲಸ ಇಲ್ಲ ಅದ್ಕೆ ದೊರೆಸ್ವಾಮಿ ಬೆನ್ನುಬಿದ್ದಿದ್ದಾರೆ; ಈಶ್ವರ ಖಂಡ್ರೆ ಲೇವಡಿ

Published by:MAshok Kumar
First published: