ಪ್ರತಿಷ್ಠಿತ ಸಿದ್ದ ಆಹಾರ ಕಂಪೆನಿಯ ಸಿಬ್ಬಂದಿಗೆ ಕೊರೋನಾ ಸೋಂಕು: ಘಟಕ ಸೀಲ್‌ಡೌನ್

ಎಂಟಿಆರ್‌ ಕಂಪೆನಿಯ 30 ಜನರಿಗೆ ಕೊರೋನಾ ಸೋಂಕು ತಗುಲಿಗೆ ಹೀಗಾಗಿ ಸೋಂಕಿತರ ಸಂಪರ್ಕದಲ್ಲಿದ್ದ ಕಂಪೆನಿಯ ಇನ್ನೂ 40 ಉದ್ಯೋಗಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಎಂಟಿಆರ್‌ ಕಂಪೆನಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.

news18-kannada
Updated:July 15, 2020, 6:44 PM IST
ಪ್ರತಿಷ್ಠಿತ ಸಿದ್ದ ಆಹಾರ ಕಂಪೆನಿಯ ಸಿಬ್ಬಂದಿಗೆ ಕೊರೋನಾ ಸೋಂಕು: ಘಟಕ ಸೀಲ್‌ಡೌನ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜುಲೈ 15); ರಾಜ್ಯದ ಪ್ರತಿಷ್ಠಿತ ಸಿದ್ದ ಆಹಾರ ಮತ್ತು ಮಸಾಲ ಪದಾರ್ಥಗಳ ತಯಾರಿಕ ಕಂಪನಿಯಾದ ಎಂಟಿಆರ್‌ನಲ್ಲಿ ಸುಮಾರು 30 ಜನ ಸಿಬ್ಬಂದಿಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಇದೀಗ ಇಡೀ ಕಂಪೆನಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ನಗರದ ಬೊಮ್ಮಸಂದ್ರದಲ್ಲಿರುವ ಎಂಟಿಆರ್‌ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯಾರಲ್ಲೂ ಇಷ್ಟು ದಿನ ಕೊರೋನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ಒಂದು ವಾರದ ಹಿಂದೆ ಮೊದಲು ಕಂಪೆನಿಯ ಕಿಚನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಓರ್ವ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಇದೀಗ ಇಲ್ಲಿ ಕೆಲಸ ಮಾಡುವ ಸುಮಾರು 30 ಜನರಿಗೆ ಹಂತ ಹಂತವಾಗಿ ಮಾರಣಾಂತಿಕ ಸೋಂಕು ಆವರಿಸಿದೆ.

ಇದಲ್ಲದೆ, ಸೋಂಕಿತರ ಸಂಪರ್ಕದಲ್ಲಿದ್ದ ಕಂಪೆನಿಯ ಇನ್ನೂ 40 ಉದ್ಯೋಗಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಎಂಟಿಆರ್‌ ಕಂಪೆನಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.

ಎಂಟಿಆರ್‌ ಕಂಪೆನಿಯ ಸಿದ್ದ ಆಹಾರ ಸಾಮಗ್ರಿಗಳು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಪ್ರಸಿದ್ಧ. ಹೀಗಾಗಿ ಈ ಕಂಪೆನಿಯ ಪದಾರ್ಥಗಳು ಎಲ್ಲೆಡೆ ರಫ್ತಾಗುತ್ತಿತ್ತು. ಆದರೆ, ಇದೀಗ ಸೀಲ್‌ಡೌನ್‌ನಿಂದಾಗಿ ಕಂಪೆನಿಯಲ್ಲಿ ಉತ್ಪಾದನಾ ಕಾರ್ಯ ಸ್ಥಗಿತವಾಗಿದೆ. ಇದರಿಂದ ಕಂಪೆನಿಗೆ ನೂರಾರು ಕೋಟಿ ಹಣ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ಇಂದು ರಾತ್ರಿಯಿಂದ ಉಡುಪಿ ಜಿಲ್ಲೆಯ ಗಡಿಗಳು 14ದಿನಗಳ ಕಾಲ ಸೀಲ್‌ಡೌನ್; ಏನಿರುತ್ತೆ, ಏನಿರಲ್ಲ?

ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಬೆಂಗಳೂರಿನಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಈವರೆಗೆ 44,077 ಕೊರೋನಾ ಪ್ರಕರಣಗಳು ಕಂಡು ಬಂದಿದ್ದು, 17,390 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಂಕಿಅಂಶ ಬಿಡುಗಡೆ ಮಾಡಿದೆ.
Published by: MAshok Kumar
First published: July 15, 2020, 12:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading