ಕಾಫಿನಾಡಿನಲ್ಲಿ ಭೂಮಿಯೊಳಗಿಂದ ಕೇಳಿ ಬಂತು ವಿಚಿತ್ರ ಶಬ್ಧ, ಏನದು?

news18
Updated:August 25, 2018, 12:51 PM IST
ಕಾಫಿನಾಡಿನಲ್ಲಿ ಭೂಮಿಯೊಳಗಿಂದ ಕೇಳಿ ಬಂತು ವಿಚಿತ್ರ ಶಬ್ಧ, ಏನದು?
news18
Updated: August 25, 2018, 12:51 PM IST
 ವೀರೇಶ್​ ಜಿ ಹೊಸೂರು,  ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು (ಆ.25): ಈಗಾಗಲೇ ಮಳೆಯಿಂದ ತತ್ತರಿಸಿರುವ ಕಾಫಿನಾಡಿನಲ್ಲಿ ಈಗ ಭೂ ಕಂಪನದ ಆತಂಕ ಜನರಲ್ಲಿ ಎದುರಾಗಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಕೂಗ್ರೆ, ಅ ಬ್ಬಿಗಲ್ಲು ಗ್ರಾಮದಲ್ಲಿ ಭೂಮಿಯೊಳಗಿನಿಂದ ಶಬ್ಧ ಕೇಳಿ ಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಹತ್ತು ದಿನಗಳಿಂದ ಇಲ್ಲಿ ಈ ರೀತಿಯ ವಾತಾವರಣ ನಿರ್ಮಾಣವಾಗಿದ್ದು, ಯಾಕೆ ಈ ರೀತಿ ಭೂಮಿಯೊಳಗಿನಿಂದ ಶಬ್ಧ ಕೇಳಿ ಬರುತ್ತಿದೆ ಎಂಬುದು ಜನರಲ್ಲಿ ಪ್ರಶ್ನೆ ಮೂಡಿಸಿದೆ.

ಆ.10ರಂದು ಮೊದಲ ಬಾರಿ ಕೊಗ್ರೆ ಗ್ರಾಮದಲ್ಲಿ ಭೂಮಿಯೊಳಗಿನಿಂದ ಭಾರೀ ಶಬ್ಧ ಕೇಳಿಬಂದಿತ್ತು. ಆಗ ಭೂಮಿ ಕೂಡ ಕಂಪಿಸಿ ಮನೆಯ ಪಾತ್ರೆಗಳು ಕೆಳಗೆ ಬಿದ್ದವು ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದರು.

ಅಂದಿನಿಂದ ನಿರಂತರವಾಗಿ ಇಲ್ಲಿ ಬಾರಿ ಶಬ್ದದೊಂದಿಗೆ ಭೂಮಿ  ಕಂಪಿಸಿದ ಅನುಭವವಾಗುತ್ತಿದೆ. ಮಧ್ಯ ರಾತ್ರಿ ಕೂಡ ಬಾರಿ ಶಬ್ದ ಕೇಳಿ ಬಂದಿದ್ದು, ಗ್ರಾಮಸ್ಥರಲ್ಲಿ  ಭಯ ಮೂಡಿಸಿದೆ.

ಈಗಾಗಲೇ ಮಳೆ, ಸತತ ಭೂ ಕುಸಿತದಿಂದ ಇಲ್ಲಿನ ಜನರು ನಲುಗಿದ್ದು, ಈಗ ಭೂ ಕಂಪನದ ಅನುಭವ ಜನರನ್ನು ಕಂಗೆಡಿಸುತ್ತಿದೆ. ಭಾರಿ ಶಬ್ದಕ್ಕೆ  ನಾಲ್ಕಕ್ಕೂ ಅಧಿಕ ಮನೆಗಳು ಬಿರುಕು ಕೂಡ ಕಾಣಿಸಿಕೊಂಡಿದೆ. ಯಾವಾಗ ಏನು ಸಂಭವಿಸಲಿದೆ ಎಂಬ ಜೀವ ಭಯದಲ್ಲಿ ದಿನದೂಡುವಂತೆ ಆಗಿದ್ದು, ಈ ವಿಚಿತ್ರ ಶಬ್ಧಕ್ಕೆ ಕಾರಣ ಏನು ಎಂಬುದನ್ನು ಭೂಗರ್ಭ ಶಾಸ್ತಜ್ಞರೇ ಹೇಳಬೇಕಾಗಿದೆ. .

 
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...