Weekend ಪ್ರವಾಸೋದ್ಯಮ: Bangalore ಸುತ್ತಮುತ್ತ ಈ ಸ್ಥಳಗಳ ಅಭಿವೃದ್ಧಿಗೆ ಮುಂದಾದ ಸರ್ಕಾರ!

ಪ್ರವಾಸೋದ್ಯಮ ಇಲಾಖೆಯು ಜನಪ್ರಿಯ ಮಂಚನಬೆಲೆ ಜಲಾಶಯವನ್ನು ಜಲ ಕ್ರೀಡೆ ಮತ್ತು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಂಕ್ರಾಮಿಕದ (Epidemic) ನಂತರ ಪ್ರತಿಯೊಂದು ಕ್ಷೇತ್ರಗಳೂ ಆರ್ಥಿಕವಾಗಿ ಜರ್ಝರಿತವಾಗಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಾಣುತ್ತಿದ್ದಂತೆಯೇ ಹಲವಾರು ಅಡ್ಡಿ ಆತಂಕಗಳು ನಿರ್ಮಾಣವಾಗುತ್ತಲೇ ಇದೆ. ವಾರಾಂತ್ಯ ಕರ್ಪ್ಯೂ, ಹೆಚ್ಚಿನ ಗುಂಪುಗಳಿಂದ ಪ್ರವೇಶ ನಿಷಿದ್ಧ, ಕೋವಿಡ್ ಹರಡುವ ಭಯ ಹೀಗೆ ಸಾಲು ಸಾಲು ಸಮಸ್ಯೆಗಳು ಈ ಕ್ಷೇತ್ರವನ್ನು ಕಾಡುತ್ತಲೇ ಇದೆ. ಇದಕ್ಕಾಗಿಯೇ ಪ್ರವಾಸೋದ್ಯಮ (Tourism Industry) ಕ್ಷೇತ್ರ ಒಂದಿಲ್ಲೊಂದು ಯೋಜನೆಗಳನ್ನು(Projects) ಆರಂಭಿಸುವ ಮೂಲಕ ಆರ್ಥಿಕ ನಷ್ಟವನ್ನು (Economic Losses) ಚೇತರಿಸಿಕೊಳ್ಳುವ ನಿಟ್ಟಿನಲ್ಲಿದೆ.

ವಾರಾಂತ್ಯ ಪ್ರವಾಸೋದ್ಯಮ ಯೋಜನೆ:

ಇದೀಗ ಕ್ಷೇತ್ರವು ‘ವಾರಾಂತ್ಯ ಪ್ರವಾಸೋದ್ಯಮ’ ಎಂಬ ಯೋಜನೆಯನ್ನು ಪ್ರಚಾರಪಡಿಸುತ್ತಿದ್ದು ಯುವಕರು ಹಾಗೂ ವೃತ್ತಿಪರರನ್ನು ಗುರಿಯಾಗಿರಿಸಿಕೊಂಡಿದೆ. ಬೆಂಗಳೂರಿಗರಿಗಾಗಿ ಕ್ಷೇತ್ರವು ಬೆಂಗಳೂರಿನ ಸುತ್ತಮುತ್ತಲಿನ ಕೆಲವೊಂದು ಸ್ಥಳಗಳನ್ನು ಆಯ್ದುಕೊಂಡಿದೆ. ಇದಲ್ಲದೆ, ಪ್ರವಾಸೋದ್ಯಮ ಕ್ಷೇತ್ರವು ಖಾಸಗಿ ಮ್ಯೂಸಿಯಮ್‌ಗಳು ಮತ್ತು ಬೆಂಗಳೂರಿನ ಅಕ್ಕಪಕ್ಕದಲ್ಲಿರುವ ಬೆಟ್ಟಗಳು, ಟ್ರಕ್ಕಿಂಗ್ ಸ್ಥಳಗಳ ಆಯೋಜಕರನ್ನು ಸಂಪರ್ಕಿಸುತ್ತಿದೆ.

ತಾಜಾ ಪರಿಸರದ ಹಿತವನ್ನು ಪ್ರವಾಸಿಗರನ್ನು ಒದಗಿಸುವುದರ ಜೊತೆಗೆ ಪ್ರಾಕೃತಿಕ ಸಾಹಸ ಯೋಜನೆಗಳನ್ನು ಆಯೋಜಿಸುತ್ತಿದೆ. ಸಾವನದುರ್ಗ, ವಿದುರಾಶ್ವಥ ಮತ್ತು ರಾಮನಗರದ ಸುತ್ತಮುತ್ತಲಿನ ಐತಿಹಾಸಿಕ ರಮಣೀಯ ಹಾಗೂ ಪಾರಂಪರಿಕ ಸ್ಥಳಗಳನ್ನು ವಾರಾಂತ್ಯಕ್ಕಾಗಿ ಅಣಿಗೊಳಿಸಲಾಗುತ್ತಿದ್ದು ಪ್ರವಾಸಿಗರನ್ನು ಈ ಸ್ಥಳಕ್ಕೆ ಹೆಚ್ಚು ಬರುವಂತೆ ಮಾಡಲು ಮೂಲಸೌಕರ್ಯಗಳ ಸಿದ್ಧತೆಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: Restaurant: ಕೊರೊನಾ ಅಟ್ಟಹಾಸ; ಮತ್ತೆ ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್ ಬಂದ್..!

ಕಳೆದ ಬಜೆಟ್‌ನಲ್ಲಿಯೇ ಪರಿಕಲ್ಪನೆಯ ಮಂಡನೆ:

ವಾರಾಂತ್ಯದ ಪ್ರವಾಸೋದ್ಯಮ ಪರಿಕಲ್ಪನೆಯನ್ನು ಕಳೆದ ಬಜೆಟ್‌ನಲ್ಲಿಯೇ ಮಂಡಿಸಲಾಗಿತ್ತು ಎಂಬುದಾಗಿ ಅಧಿಕಾರಿ ತಿಳಿಸಿದ್ದು, ಕೋವಿಡ್ ನಿರ್ಬಂಧಗಳಿಂದಾಗಿ ಅದನ್ನು ಮುನ್ನಲೆಗೆ ತರಲಾಗಲಿಲ್ಲ ಎಂದು ತಿಳಿಸಿದ್ದಾರೆ. ಒಂದಿಲ್ಲೊಂದು ಅಡ್ಡಿ ಆತಂಕಗಳಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು ಹಾಗೂ ಇದನ್ನು ಕೂಡಲೇ ಆರಂಭಿಸಲು ಸೂಕ್ತ ಸಮಯ ಒದಗಿ ಬಂದಿರಲಿಲ್ಲ ಎಂಬುದಾಗಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಆದರೆ ಎರಡನೇ ಅಲೆಯ ಅನ್‌ಲಾಕ್‌ನ ನಂತರ ಹೆಚ್ಚುಕಡಿಮೆ ನಗರದ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಈ ಆಶಯದೊಂದಿಗೆ ಪುನರ್ ಆರಂಭಿಸಲಾಯಿತು ಹಾಗೂ ಹೆಚ್ಚಿನ ಪ್ರವಾಸಿಗರು ಬರುವಂತೆ ಸುಸುಜ್ಜಿತವಾಗಿ ಆಯೋಜಿಸಲಾಯಿತು. ಈ ಎಲ್ಲಾ ಸ್ಥಳಗಳಲ್ಲಿ ಸುಸಜ್ಜಿತ ಮೂಲ ಸೌಕರ್ಯಗಳಿದ್ದು ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದಾಗಿ ಪ್ರವಾಸೋದ್ಯಮ ವಿಭಾಗದ ನಿರ್ದೇಶಕರಾದ ಸಿಂಧು ರೂಪೇಶ್ ತಿಳಿಸಿದ್ದಾರೆ.

ದುರ್ಗಾ ಟ್ರಯಲ್ ಯೋಜನೆ:

ಪ್ರಕೃತಿಯ ತಪ್ಪಲಿನಲ್ಲಿ ಮುಕ್ತ ಸ್ಥಳಗಳಲ್ಲಿ ಟ್ರಕ್ಕಿಂಗ್ ಹಾಗೂ ಕಾಲ್ನಡಿಗೆಯಂತಹ ಚಟುವಟಿಕೆಗಳನ್ನು ಆಯೋಜಿಸುವ ಯೋಜನೆ ವಿಭಾಗದ ಮುಂದಿದ್ದು ಅದಕ್ಕಾಗಿ ದುರ್ಗಾ ಟ್ರಯಲ್ ಅನ್ನು ಪರಿಚಯಿಸುವ ನಿಟ್ಟಿನಲ್ಲಿದೆ. ಸಾವನದುರ್ಗ, ಮಾಕಾಳಿದುರ್ಗ ಹಾಗೂ ಹುತ್ರಿದುರ್ಗ ಸೇರಿದಂತೆ ಪ್ರಮುಖ ದುರ್ಗ (ಕೋಟೆ) ವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿದ್ದೇವೆ.

ಇದೆಲ್ಲವೂ ಅರಣ್ಯಗಳಿಂದ ಸುತ್ತುವರಿದಿರುವುದರಿಂದ ಸೌಕರ್ಯಗಳ ವಿಷಯಕ್ಕೆ ಬಂದಾಗ ಸಾಕಷ್ಟು ಅಭಿವೃದ್ಧಿ ನಡೆಸಲಾಗುವುದಿಲ್ಲ. ಆದರೆ ಶೌಚಾಲಯಗಳ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸುತ್ತೇವೆ. ಇದಕ್ಕಾಗಿ ವಿಭಾಗ ಸಾಕಷ್ಟು ಧನ ವಿನಿಯೋಗ ಮಾಡಿದ್ದು ಕುಣಿಗಲ್ ಸಮೀಪದಲ್ಲಿರುವ ಹುತ್ರಿದುರ್ಗದಲ್ಲಿ ವಿಭಾಗವು ಈ ಕೆಲಸಗಳನ್ನು ನಡೆಸಿದೆ ಎಂದು ರೂಪೇಶ್ ವಿವರಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಈಗಾಗಲೇ ರಾಮನಗರ ಸುತ್ತಮುತ್ತ ರೇಷ್ಮೆ ಕೃಷಿ ಪ್ರವಾಸಕ್ಕೆ ಪ್ರಯಾಣಿಕರನ್ನು ಆಕರ್ಷಿಸುವ ಹಾಗೂ ಕರೆದೊಯ್ಯುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ.

ಇದನ್ನೂ ಓದಿ: Air Pollution: ಈ ಪಟ್ಟಣಕ್ಕೆ ಏನಾಗಿದೆ? ದಕ್ಷಿಣ ಭಾರತದ 10 ನಗರಗಳಲ್ಲಿ ಉಸಿರಾಟವೂ ಕಷ್ಟ!

ದಕ್ಷಿಣದ ಜಲಿಯನ್‌ ವಾಲಾಬಾಗ್:

ಪ್ರವಾಸೋದ್ಯಮ ಇಲಾಖೆಯು ಜನಪ್ರಿಯ ಮಂಚನಬೆಲೆ ಜಲಾಶಯವನ್ನು ಜಲ ಕ್ರೀಡೆ ಮತ್ತು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಚಿಕ್ಕಬಳ್ಳಾಪುರದ ವಿದುರಾಶ್ವಥವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರತವಾಗಿದೆ. ವಿದುರಾಶ್ವಥವನ್ನು ದಕ್ಷಿಣದ ಜಲಿಯನ್‌ ವಾಲಾಬಾಗ್ ಎಂದು ಕರೆಯಲಾಗುತ್ತದೆ. ಈ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲೊಂದು ಮ್ಯೂಸಿಯಂ ಇದ್ದು ಇಲ್ಲಿಂದ ಹೆಚ್ಚಿನ ಇನ್ನಷ್ಟು ವಿವರಗಳನ್ನು ಪಡೆದುಕೊಳ್ಳಬಹುದು ಎಂಬುದು ರೂಪೇಶ್ ಹೇಳಿಕೆಯಾಗಿದೆ.
Published by:vanithasanjevani vanithasanjevani
First published: