ಗೌರಿ ಹತ್ಯೆ ಖಂಡಿಸಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಮಾವೇಶ: ಇಂದು ರಾಜಭವನ ಚಲೋ

ಇಂದು ಬೆಂಗಳೂರಿನಲ್ಲಿ ‘ಗೌರಿ ದಿನ’ ಆಚರಿಸಲಾಗುತ್ತಿದೆ. ಅವರ ಸಮಾಧಿಯ ಬಳಿ ಶ್ರದ್ಧಾಂಜಲಿ ಅರ್ಪಿಸಿ ರಾಜ ಭವನ ಚಲೋ ಹಮ್ಮಿಕೊಂಡಿದ್ದೇವೆ- ಎಚ್​.ಎಸ್​ ದೊರೆಸ್ವಾಮಿ


Updated:September 5, 2018, 9:11 AM IST
ಗೌರಿ ಹತ್ಯೆ ಖಂಡಿಸಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಮಾವೇಶ: ಇಂದು ರಾಜಭವನ ಚಲೋ
ಗೌರಿ ಲಂಕೇಶ್ ಮತ್ತು ಎಂ.ಎ|. ಕಲ್ಬುರ್ಗಿ

Updated: September 5, 2018, 9:11 AM IST
ನ್ಯೂಸ್​-18 ಕನ್ನಡ 

ಬೆಂಗಳೂರು(ಸೆ. 5):  ಗೌರಿ ಲಂಕೇಶ್‌, ಕಲ್ಬುರ್ಗಿ ಅವರ ಹತ್ಯೆಯನ್ನು ವಿರೋಧಿಸಿ ಗೌರಿ ಲಂಕೇಶ್‌ ಬಳಗದಿಂದ ಕಳೆದ ಆ.30ರಿಂದ ಸೆ. 5ರವರೆಗೆ 'ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ' ನಡೆಸಲಾಗುತ್ತಿದೆ. ಇಂದಿಗೆ ಗೌರಿ ಸಾವನ್ನಪ್ಪಿ ಒಂದು ವರ್ಷವಾಗುತ್ತಿದೆ. ಹೀಗಾಗಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್​.ಎಸ್​​ ದೊರೆಸ್ವಾಮಿ ತಿಳಿಸಿದ್ಧಾರೆ.

ನ್ಯೂಸ್​-18 ಕನ್ನಡ ಜತೆಗೆ ಮಾತಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿರಿಸಲು ಧ್ವನಿಯಾಗಿದ್ದವರು ಗೌರಿ ಲಂಕೇಶ್‌. ನಾಳೆಗೆ ಆಕೆಯ ಹತ್ಯೆಯಾಗಿ ಒಂದು ವರ್ಷವಾಗುತ್ತದೆ. ಹಾಗೆಯೇ ಸಾಹಿತಿ ಕಲ್ಬುರ್ಗಿಯವರ ಹತ್ಯೆಯಾಗಿ ಆ. 30ಕ್ಕೆ 3 ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಆ.30ರಿಂದ ಸೆ. 5ರವರೆಗೆ ಗೌರಿ ಲಂಕೇಶ್​ ಟ್ರಸ್ಟ್​ನಿಂದ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ನಡೆಸುತ್ತಿದ್ದೇವೆ ಎಂದರು.

ಈಗಾಗಲೇ ಸೆ.30ರಂದು ಶುರುವಾದ ನಮ್ಮ ಕಾರ್ಯಕ್ರಮಗಳು ಧಾರವಾಡದಲ್ಲಿ ‘ಕಲ್ಬುರ್ಗಿ ದಿನದ’ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದ್ದೇವೆ. ಇಂದು ಬೆಂಗಳೂರಿನಲ್ಲಿ ‘ಗೌರಿ ದಿನ’ ಆಚರಿಸಲಾಗುತ್ತಿದೆ. ಅವರ ಸಮಾಧಿಯ ಬಳಿ ಶ್ರದ್ಧಾಂಜಲಿ ಅರ್ಪಿಸಿ ರಾಜ ಭವನ ಚಲೋ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಇಂದು ಬೆಳಿಗ್ಗೆ 10.30ಕ್ಕೆ ಗಾಂಧಿ ನಗರದ ಮೌರ್ಯ ಹೊಟೇಲ್‌ ಬಳಿಯ ಇಂದಿರಾ ಗಾಂಧಿ  ಪ್ರತಿಮೆಯಿಂದ ರಾಜ್‌ಭವನ ಚಲೋ ಪ್ರತಿರೋಧದ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ನಂತರ 2.30ಕ್ಕೆ ಸೆಂಟ್ರಲ್‌ ಕಾಲೇಜ್‌ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ಅಭಿವ್ಯಕ್ತಿ ಸ್ವಾತಂತ್ರ್ಯಾ ಸಮಾವೇಶ ಮತ್ತು ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸಮಾವೇಶದಲ್ಲಿ ದೇಶದ ಬೇರೆ ಭಾಗಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ. ಸ್ವಾಮಿ ಅಗ್ನಿವೇಶ್‌, ಗಿರೀಶ್‌ ಕಾರ್ನಾಡ್‌, ತೀಸ್ತಾ ಸೆಟಲ್ವಾಡ್‌, ಜಿಗ್ನೇಶ್‌ ಮೇವಾನಿ, ಉಮರ್‌ ಖಾಲಿದ್‌, ವರವರ ರಾವ್‌, ನರೇಂದ್ರ ನಾಯಕ್‌, ಕೆ.ಎಸ್‌. ಭಗವಾನ್‌, ಪ್ರಕಾಶ್‌ ರೈ, ಮುಕ್ತ ದಾಬೋಲ್ಕರ್‌, ಮೇಘನಾ ಪನ್ಸಾರೆ, ಉಮಾದೇವಿ ಕಲ್ಬುರ್ಗಿ, ಕವಿತಾ ಲಂಕೇಶ್‌, ಪ್ರೊ| ಹರಗೋಪಾಲ್‌ ಸೇರಿದಂತೆ ಪ್ರಗತಿಪರರು, ಲೇಖಕರು ಭಾಗಿಯಾಗಲಿದ್ದಾರೆ.

ಇಂದು ನಡೆಯುವ ಸಾಂಸ್ಕೃತಿಕ ಪ್ರತಿರೋಧದಲ್ಲಿ ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌, ಗೊಲ್ಲಹಳ್ಳಿ ಶಿವಪ್ರಸಾದ್‌, ಜೆನ್ನಿ, ಬಿ. ಜಯಶ್ರೀ ಎಂ.ಡಿ. ಪಲ್ಲವಿ, ಆರತಿ ರಾವ್‌, ಮುಂತಾದವರು ಭಾಗವಹಿಸಲಿದ್ದಾರೆ. ಈ ವೇಳೆ ಗೌರಿ ಹತ್ಯೆಗೆ ನ್ಯಾಯ ಸಿಗಲಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದರು.
Loading...

ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹದ ಭಾಗವಾಗಿ ವಾಹನ ಜಾಥಾ ನಡೆಸಲಾಗುತ್ತಿದೆ. ಪ್ರಮುಖ ನಗರಗಳಲ್ಲಿ ಕರಪತ್ರ ಹಂಚಲಾಗುತ್ತದೆ. ಆ.30ರಿಂದ ಈವರೆಗೂ ಜಿಲ್ಲಾ ಕೇಂದ್ರಗಳಲ್ಲಿ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಉಪವಾಸ ಸತ್ಯಾಗ್ರಹ, ಪಂಜಿನ ಮೆರವಣಿಗೆ, ಮಾನವ ಸರಪಳಿಗಳು ನಡೆಸಿದ್ದೇವೆ ಎಂದು ತಿಳಿಸಿದರು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ