• Home
  • »
  • News
  • »
  • state
  • »
  • Wife Murder: ಅಡುಗೆ ಮಾಡೋಕೆ ಬರಲ್ಲ ಎಂದು ನಿತ್ಯ ಗಲಾಟೆ; ಮದುವೆ ವಾರ್ಷಿಕೋತ್ಸವದ ದಿನ ಹೆಂಡತಿಯನ್ನೇ ಕೊಂದು ಗಂಡ ಎಸ್ಕೇಪ್

Wife Murder: ಅಡುಗೆ ಮಾಡೋಕೆ ಬರಲ್ಲ ಎಂದು ನಿತ್ಯ ಗಲಾಟೆ; ಮದುವೆ ವಾರ್ಷಿಕೋತ್ಸವದ ದಿನ ಹೆಂಡತಿಯನ್ನೇ ಕೊಂದು ಗಂಡ ಎಸ್ಕೇಪ್

ಭೀಮರಾಯ, ಪಾರ್ವತಿ

ಭೀಮರಾಯ, ಪಾರ್ವತಿ

ಭೀಮರಾಯ ಬೆಂಗಳೂರುನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ದಂಪತಿಗಳು ಆರಂಭದ ಕೆಲ ತಿಂಗಳ ಕಾಲ ಪರಸ್ಪರ ಪ್ರೀತಿಯಿಂದ ಇದ್ದರು. ಆದರೆ, ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಗಂಡ ಭೀಮರಾಯ ಹೆಂಡತಿ ಪಾರ್ವತಿ ಜೊತೆ ಜಗಳ ಮಾಡುತ್ತಿದ್ದನಂತೆ.

  • Share this:

ಯಾದಗಿರಿ(ಮೇ 15) :  ಆ ದಂಪತಿ (Couples) ಪರಸ್ಪರ ಪ್ರಿತಿಯಿಂದ ಇದ್ದರೆ ಮದುವೆ ವಾರ್ಷಿಕೋತ್ಸವ (Marriage Anniversary) ಆಚರಣೆ ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದರು. ಆದರೆ, ದಂಪತಿಗಳಲ್ಲಿ ಕಲಹ ಶುರುವಾಗಿದ್ದು, ಮದುವೆ ವಾರ್ಷಿಕೋತ್ಸವದ ಸಂಭ್ರಮದ ದಿನವೇ, ಗಂಡ, ಹೆಂಡತಿ (Husband and wife) ಜಗಳ (Hassle) ತಾರಕ್ಕೇರಿದ ಹಿನ್ನೆಲೆ ಪಾಪಿ ಪತಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗೋಪಾಳಪುರ (Gopalapura) ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಪತ್ನಿಗೆ ನೇಣು ಹಾಕಿ ಕೊಲೆ ಮಾಡಿ ಪತಿರಾಯ ಭೀಮರಾಯ ಎಸ್ಕೇಪ್ ಆಗಿದ್ದಾನೆ.


ಅಡುಗೆ ಹಾಗೂ ಮನೆ ಕೆಲಸದ ವಿಚಾರಕ್ಕೆ ಜಗಳ


ಅಡುಗೆ  ಹಾಗೂ ಮನೆ ಕೆಲಸ ಮಾಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೀತಿತ್ತು. ಸೌರಾಷ್ಟ್ರ ಹಳ್ಳಿಯ  ಪಾರ್ವತಿ ಹಾಗೂ ಗೋಪಾಳಪುರ ಗ್ರಾಮದ ಭೀಮರಾಯ ನಡುವೆ ಕಳೆದ ವರ್ಷ ಮೇ 13 ರಂದು ಗೋಪಾಳಪುರ ಗ್ರಾಮದಲ್ಲಿ ವಿವಾಹವಾಗಿತ್ತು. ಭೀಮರಾಯ ಬೆಂಗಳೂರುನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ದಂಪತಿಗಳು ಆರಂಭದ ಕೆಲ ತಿಂಗಳ ಕಾಲ ಪರಸ್ಪರ ಪ್ರೀತಿಯಿಂದ ಇದ್ದರು. ಆದರೆ, ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಗಂಡ ಭೀಮರಾಯ ಹೆಂಡತಿ ಪಾರ್ವತಿ ಜೊತೆ ಜಗಳ ಮಾಡುತ್ತಿದ್ದನಂತೆ.


ಮದುವೆ ವಾರ್ಷಿಕೋತ್ಸವದ ದಿನವೇ ಗಲಾಟೆ 


ಈ ವಿಚಾರವಾಗಿ ಇಬ್ಬರ ನಡುವೆ ನಿರಂತರವಾಗಿ ಜಗಳ ನಡೆಯುತಿತ್ತು. ಯಲ್ಹೇರಿ ಗ್ರಾಮದ ಜಾತ್ರೆ ಹಿನ್ನೆಲೆ ಬೆಂಗಳೂರುನಿಂದ ದಂಪತಿಗಳು ಗೋಪಾಳಪುರ ಗ್ರಾಮಕ್ಕೆ ಆಗಮಿಸಿ ಮನೆಯಲ್ಲಿ ವಾಸವಾಗಿದ್ದರು. ಮೇ 13 ರಂದು ಮದುವೆ ವಾರ್ಷಿಕೋತ್ಸವದ ದಿನ, ಇಬ್ಬರ ನಡುವೆ ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಜಗಳ ಶುರುವಾಗಿದೆ. ತಡರಾತ್ರಿ ಭೀಮರಾಯ ಪತ್ನಿ ಪಾರ್ವತಿಗೆ ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.


ಇದನ್ನೂ ಓದಿ: Tragedy Love Story: ಪ್ರೀತಿಸಿದ ಹುಡುಗ ಅಪಘಾತಕ್ಕೆ ಬಲಿಯಾದ, ನೊಂದ ಹುಡುಗಿ ಸೂಸೈಡ್ ಮಾಡಿಕೊಂಡಳು! ಒಂದು ಪ್ರೇಮಕಥೆ ಎರಡು ಸಾವಿನಲ್ಲಿ ಅಂತ್ಯ


ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ


ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತಿರಾಯ ಭೀಮರಾಯ ಪಾರ್ವತಿಗೆ ಕೊಲೆ ಮಾಡಿದ್ದಾನೆಂದು ಗುರುಮಠಕಲ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಗೋಪಾಳಪುರದ ಭೀಮರಾಯನ ಮನೆಯಲ್ಲಿ ಪತಿರಾಯ ಭೀಮರಾಯ, ಹೆಂಡತಿ ಜೊತೆ ಜಗಳವಾಡಿದ್ದಾನೆ‌. ಪದೇ ಪದೇ ದಂಪತಿಗಳ ನಡುವೆ ಅಡುಗೆ ಹಾಗೂ ಮನೆ ಕೆಲಸ ವಿಚಾರವಾಗಿ ಜಗಳ ನಡೆಯುತಿತ್ತು .


ಪಾರ್ವತಿ ಗಂಡನಿಗಾಗಿ ಪೊಲೀಸರ ಹುಡುಕಾಟ


ಹೆಂಡತಿ ಪಾರ್ವತಿ ಯನ್ನು ಗಂಡ ಕೊಲೆ ಮಾಡಿದ್ದಾನೆಂದು ದೂರು ನೀಡಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ಪೊಲೀಸರು ಮಾಡಲಿದ್ದಾರೆಂದರು. ಮದುವೆಯಾಗಿ ಹೆಂಡತಿ ಜೊತೆ ಖುಷಿಯಿಂದ ಜೀವನ ನಡೆಸಬೇಕಾದ ಪತಿರಾಯ ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟು, ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆ ಮಾಡಿ ತಲೆಮರೆಸಿಕೊಂಡಿರೋ ಆರೋಪಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.


ಇದನ್ನೂ ಓದಿ: Husband-Wife Clash: ಗಂಡನೊಂದಿಗೆ ಮುನಿಸಿಕೊಂಡು ಕೆರೆ ಮಧ್ಯೆ ಕುಳಿತ ಹೆಂಡತಿ! "ನಾ ಮನೆಗ್ ಹೋಗೋದಿಲ್ಲ" ಅಂತ ರಂಪಾಟ


ಮುಗಿಲು ಮುಟ್ಟಿದೆ ಪಾರ್ವತಿ ಕುಟುಂಬಸ್ಥರ ಆಕ್ರಂದನ


ಮೃತ ಪಾರ್ವತಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು  ನೀಡಲಾಗಿದೆ. ಮದುವೆಯಾಗಿ ವರ್ಷದೊಳಗೆ ಸಹೋದರಿ ಸಾವಿನ ಸುದ್ದಿ ಕೇಳಿ  ಕಣ್ಣೀರು ಹಾಕಿದರು. ಈ ಬಗ್ಗೆ ಪೊಲೀಸರು ಸೂಕ್ತ ತನೀಖೆ ಮಾಡಿ ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಪಾರ್ವತಿ ಸಂಬಂಧಿಕರು ಒತ್ತಾಯ ಮಾಡಿದ್ದು, ಗುರುಮಠಕಲ್ ಪೊಲೀಸರು ತನಿಖೆ ನಡೆಸಿ ಈ ಸಾವಿನ ಕಾರಣ ಪತ್ತೆ ಹಚ್ಚಬೇಕಾಗಿದೆ.

Published by:Pavana HS
First published: