ಇನ್ಮುಂದೆ ಕಾರು, ಬೈಕಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ; ಬಿಬಿಎಂಪಿ ಹೊಸ ನಿಯಮ

ಮಾಸ್ಕ್ ಧರಿಸುವ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿರುವ ಬಿಬಿಎಂಪಿ ಬೈಕ್, ಕಾರು ಮುಂತಾದ ವಾಹನಗಳಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿದೆ.

news18-kannada
Updated:October 28, 2020, 9:55 AM IST
ಇನ್ಮುಂದೆ ಕಾರು, ಬೈಕಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ; ಬಿಬಿಎಂಪಿ ಹೊಸ ನಿಯಮ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 28): ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯವೇನಲ್ಲ ಎಂಬ ನಿಯಮವಿತ್ತು. ಆದರೆ, ಮಾಸ್ಕ್ ಧರಿಸುವ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿರುವ ಬಿಬಿಎಂಪಿ ಬೈಕ್, ಕಾರು ಮುಂತಾದ ವಾಹನಗಳಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿದೆ. ಒಬ್ಬರೇ ಇದ್ದೇವೆ, ಯಾಕೆ ಮಾಸ್ಕ್ ಹಾಕಿಕೊಳ್ಳಬೇಕು ಎಂದು ವಾದಿಸುತ್ತಿದ್ದ ವಾಹನ ಸವಾರರಿಗೆ ಬಿಬಿಎಂಪಿ ಶಾಕ್ ನೀಡಿದೆ. ಬಿಬಿಎಂಪಿ ಮಾರ್ಷಲ್​ಗಳ ಜೊತೆ ವಾದಕ್ಕೆ ಇಳಿಯುತ್ತಿದ್ದ ಜನರಿಗೆ ಇನ್ನುಮುಂದೆ ಹೊಸ ನಿಯಮ ಜಾರಿಗೊಳಿಸಿದೆ. ನಿನ್ನೆಯಿಂದ ಹೊಸ ರೂಲ್ಸ್ ಜಾರಿ ಮಾಡಿದ ಬಿಬಿಎಂಪಿ ಒಬ್ಬರೇ ಇದ್ದರೂ ಅದು ಕಾರು ಆಗಲಿ ಬೈಕ್ ಆಗಲಿ ಮಾಸ್ಕ್ ಧರಿಸಲೇಬೇಕು ಎಂಬ ನಿಯಮ ಜಾರಿಗೊಳಿಸಿದೆ.

ಆದರೆ, 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ. ಒಂಟಿಯಾಗಿರುವ ಕಾರು, ಬೈಕ್ ಸವಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಹಾಕಲಿಲ್ಲ ಎಂದರೆ ದಂಡ ಗ್ಯಾರಂಟಿ. ಮಾಸ್ಕ್ ಹಾಕದಿದ್ದರೆ 250 ರೂ. ದಂಡ ಕಟ್ಟಲೇಬೇಕು. ಇಂದಿನಿಂದಲೇ ಬಿಬಿಎಂಪಿ ಈ ನಿಯಮವನ್ನು ಜಾರಿಗೊಳಿಸಿದೆ.

ಮಾಸ್ಕ್ ವಿನಾಯಿತಿ ಯಾರಿಗೆ?:
5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ. ಹೋಟೆಲ್ ನಲ್ಲಿ ತಿಂಡಿ, ಟೀ , ಕಾಫಿ ಕುಡಿಯುವಾಗ ಮಾಸ್ಕ್ ಬೇಕಿಲ್ಲ. ಈಜುಕೊಳದಲ್ಲಿ ಈಜುವಾಗ ಮಾಸ್ಕ್ ಬೇಕಿಲ್ಲ. ಶ್ರವಣ ದೋಷ ಸಾಧನ ಅಳವಡಿಕೆಗೆ ತೊಂದರೆ ಆದರೆ ಮಾಸ್ಕ್ ಬೇಕಿಲ್ಲ. ತೀವ್ರ ಉಸಿರಾಟದ ತೊಂದರೆ, ಹಲ್ಲಿನ ತೊಂದರೆ ಇದ್ದರೆ ಮಾಸ್ಕ್ ಬೇಕಿಲ್ಲ, ಆದರೆ ಇದಕ್ಕೆ ವೈದ್ಯರ ಸಲಹಾ ಚೀಟಿ ಜೊತೆಯಲ್ಲೇ ಇರಬೇಕು.

ಇದನ್ನೂ ಓದಿ: ಮಲೆನಾಡು, ಕೊಡಗು, ಹಾಸನದಲ್ಲಿ ಇಂದು ವರುಣನ ಆರ್ಭಟ; ಕರಾವಳಿಯಲ್ಲೂ ತುಂತುರು ಮಳೆ ಸಾಧ್ಯತೆ

ಕಾರಿನಲ್ಲಿ ಒಬ್ಬರೇ ಇದ್ದರೂ ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ ಗಳು ದಂಡ ವಸೂಲಿ ಹಿನ್ನಲೆಯಲ್ಲಿ ಬಹುತೇಕ ಜನರು ಮಾಸ್ಕ್ ಧರಿಸಿಯೇ ವಾಹನಗಳ ಚಾಲನೆ ಮಾಡಬೇಕು. ಕಾರಿನಲ್ಲಿ ಒಬ್ಬರೇ ಇದ್ದಾಗ ಬಹುತೇಕರು ಮಾಸ್ಕ್ ಧರಿಸಿ ಚಾಲನೆ ಮಾಡುತ್ತಿರಲಿಲ್ಲ. ಇದೀಗ ಹೊಸ ನಿಯಮ ಜಾರಿಗೊಳಿಸಲಾಗಿದೆ.
ಹೊಸ ನಿಯಮದ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕಾರು ಚಾಲಕ ಪ್ರತಿಕ್ರಿಯೆ ನೀಡಿದ್ದು, ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ಮಾಸ್ಕ್ ಧರಿಸಬೇಕು. ನಾನು ಯಾವಾಗಲೂ ಕಾರಿನಲ್ಲಿ ಒಬ್ಬನೇ ಇದ್ದರೂ‌ ಮಾಸ್ಕ್ ಧರಿಸುತ್ತೇನೆ. ಎಲ್ಲರೂ ಮಾಸ್ಕ್ ಧರಿಸಿ ಆರೋಗ್ಯದಿಂದ ಇರಿ. ಕಾರು ಚಾಲಕರಿಗೆ ಈಗಲೇ ಬಾಡಿಗೆ ಇಲ್ಲ, ಅಂಥದ್ದರಲ್ಲಿ ದಂಡ ಎಲ್ಲಿಂದ ಕಟ್ಟಬೇಕು ಎಂದು ಹೇಳಿದ್ದಾರೆ.
Published by: Sushma Chakre
First published: October 28, 2020, 9:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading