• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Parappana Agrahara: ಊಟದ ಪ್ಲೇಟ್​ಗಳಿಂದ ಮಾಡಿದ ಮಾರಕಾಸ್ತ್ರ ಪತ್ತೆ; ಜೈಲಿನಲ್ಲಿದುಕೊಂಡು ಮತದಾರರಿಗೆ ಬೆದರಿಕೆ

Parappana Agrahara: ಊಟದ ಪ್ಲೇಟ್​ಗಳಿಂದ ಮಾಡಿದ ಮಾರಕಾಸ್ತ್ರ ಪತ್ತೆ; ಜೈಲಿನಲ್ಲಿದುಕೊಂಡು ಮತದಾರರಿಗೆ ಬೆದರಿಕೆ

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

ಜಂಟಿ ಕಮಿಷನರ್ ಎಸ್​.ಡಿ.ಶರಣಪ್ಪ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿ ಕಾರಾಗೃಹದ ಮೇಲೆ ದಾಳಿ ನಡೆಸಲಾಗಿತ್ತು.

 • News18 Kannada
 • 5-MIN READ
 • Last Updated :
 • Bangalore, India
 • Share this:

ಬೆಂಗಳೂರು: ಜೈಲಿನಲ್ಲಿದ್ದುಕೊಂಡೇ ಮತದಾರರಿಗೆ (Voters) ಕೆಲವರು ಬೆದರಿಕೆ ಹಾಕುತ್ತಿರುವ ಮಾಹಿತಿಯನ್ನಾಧರಿಸಿ ಪರಪ್ಪನ ಅಗ್ರಹಾರ ಕಾರಗೃಹದ (Parappana Agrahara) ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರೇ (CCB Police) ಒಂದು ಕ್ಷಣ ಶಾಕ್ ಆಗಿದ್ದಾರೆ. ಪರಪ್ಪಮ ಅಗ್ರಹಾರದಲ್ಲಿ ಊಟದ ತಟ್ಟೆಗಳನ್ನು (Aluminium Plate) ಬಳಸಿ ಮಾಡಿರುವ ಮಾರಕಾಸ್ತ್ರಗಳನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಸಿಸಿಬಿ ಪೊಲೀಸರು ಈ ದಾಳಿಯನ್ನು ನಡೆಸಿದ್ದು, ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣೆ ಹಿನ್ನೆಲೆ ಸಿಸಿಬಿ ಪೊಲೀಸರು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು, ರೌಡಿಶೀಟರ್ ಹಾಗೂ ಜೈಲಿನಲ್ಲಿರುವ ಆರೋಪಿಗಳ ಮೇಲೆ ನಿಗಾ ಇರಿಸಿದ್ದರು.


ಈ ವೇಳೆ ಜೈಲಿನಲ್ಲಿದ್ದುಕೊಂಡೇ ಮತದಾರರಿಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು. ಜಂಟಿ ಕಮಿಷನರ್ ಎಸ್​.ಡಿ.ಶರಣಪ್ಪ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿ ಕಾರಾಗೃಹದ ಮೇಲೆ ದಾಳಿ ನಡೆಸಲಾಗಿತ್ತು. ಜೈಲಿನಲ್ಲಿರುವ ಪ್ರತಿಯೊಂದು ಕೊಠಡಿ, ಮೈದಾನ ಹಾಗೂ ಇನ್ನಿತರ ಪ್ರದೇಶಗಳ ಪರಿಶೀಲನೆ ನಡೆಸಲಾಗಿತ್ತು.


ಜೈಲಿನಲ್ಲಿ ಸಿಕ್ಕಿದ್ದೇನು?


ಊಟದ ತಟ್ಟೆಗಳನ್ನು ಜಜ್ಜಿ ಮಾಡಿದ್ದ ಒಂದು ಚಾಕು, ಸಾಮಾನ್ಯ ಚಾಕು 5, ಕತ್ತರಿ 5, ಎರಡು ಮೊಬೈಲ್, ಸಿಮ್​ಕಾರ್ಡ್ ಮತ್ತ ಚಾರ್ಜರ್​ ಜಪ್ತಿ ಮಾಡಲಾಗಿದೆ. ಮೊಬೈಲ್ ಇರಿಸಿಕೊಂಡಿದ್ದ ಕೈದಿಗಳ ಮೇಲೆ  ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಊಟದ ತಟ್ಟೆಯನ್ನು ಜಜ್ಜಿ ತಯಾರಿಸಿದ ಚಾಕು ಕೈದಿಗಳು ಓಡಾಡುವ ಜಾಗದಲ್ಲಿಯೇ ಇರಿಸಲಾಗಿತ್ತು. ಆದ್ರೆ ಚಾಕು ತಯಾರಿಸಿದ್ದು ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.


ಇದನ್ನೂ ಓದಿ:  Kumaradhara River: ರಜೆಗೆ ಚಿಕ್ಕಪ್ಪನ ಮನೆಗೆ ಬಂದಿದ್ದ ಮಕ್ಕಳು ನೀರುಪಾಲು


ಭದ್ರತಾ ವೈಫಲ್ಯ

top videos


  ಕಾರಾಗೃಹದಲ್ಲಿರುವ ಕೈದಿಗಳಿಗೆ ಮೊಬೈಲ್ ಸಿಕ್ಕಿದ್ದು ಭದ್ರತಾ ವೈಫಲ್ಯವನ್ನು ತೋರಿಸುತ್ತಿದೆ. ಸಿಸಿಬಿ ದಾಳಿ ನಡೆಸುವರೆಗೂ ಕಾರಾಗೃಹದ ಸಿಬ್ಬಂದಿಗೆ ನಿಷೇಧಿತ ವಸ್ತುಗಳನ್ನು ಕೈದಿಗಳು ತಮ್ಮ ಬಳಿಯಲ್ಲಿರಿಸಿಕೊಂಡಿರೋದು ಗೊತ್ತಿರಲಿಲ್ಲವಾ ಎಂಬ ಪ್ರಶ್ನೆ ಮೂಡಿದೆ.

  First published: