ಸುಮಲತಾ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ನಮಗೆ ಬಂದಿಲ್ಲ; ಎಲ್. ಆರ್. ಶಿವರಾಮೇಗೌಡ.

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂಬ ಸುಮಲತಾ ಆರೋಪ ವಿಚಾರ ಮಾತನಾಡಿದ ಅವರು, ಹೊಸ ಕಾರ್ಖಾನೆಗೆ ಕುಮಾರಸ್ವಾಮಿ ಸಂಕಲ್ಪದಂತೆ ಸಿಎಂ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಳ್ಳಬೇಕು.

G Hareeshkumar | news18-kannada
Updated:October 12, 2019, 10:57 AM IST
ಸುಮಲತಾ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ನಮಗೆ ಬಂದಿಲ್ಲ; ಎಲ್. ಆರ್. ಶಿವರಾಮೇಗೌಡ.
ಮಾಜಿ ಸಂಸದೆ ಶಿವರಾಮೇಗೌಡ ಹಾಗೂ ಸಂಸದೆ ಸುಮಲತಾ ಅಂಬರೀಶ್
  • Share this:
ಮಂಡ್ಯ (ಅ.12) : ಸುಮಲತಾ ಹೆಸರೇಳಿಕೊಂಡು ರಾಜಕೀಯ ಮಾಡುವ ದುಸ್ಥಿತಿ ನಮಗೆ ಬಂದಿಲ್ಲ. ಅವರು ರಾಜಕೀಯಕ್ಕೆ ಬರುವುದಕ್ಕೂ ಮುಂಚೆಯೇ ಚೆನ್ನಾಗಿ ರಾಜಕೀಯ ಮಾಡಿದ್ದೇವೆ  ಎಂದು ಮಾಜಿ ಸಂಸದ ಎಲ್​​ ಆರ್​ ಶಿವರಾಮೇಗೌಡ ಹೇಳಿದ್ದಾರೆ.

ರೈತರು ಸಮಸ್ಯೆ ಹೇಳಿಕೊಂಡಾಗ ಜನರ ಮುಂದೆ ಕೆಲ ವಿಚಾರಗಳನ್ನು ಇಟ್ಟಿದ್ದೇನೆ. ಸುಮಲತಾ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳಿಲ್ಲ. ನಾವು ಭಾಷಣ ಮಾಡಿ ಹೋಗುತ್ತೇವೆ ಎಂದಿದ್ದಾರೆ. ಹಾಗಾದರೆ, ಸುಮಲತಾ ಅವರು ಭಾಷಣ ಮಾಡದೆ ಗುದ್ದಲಿ ತೆಗೆದುಕೊಂಡು ಹಗೆಯುತ್ತಿದ್ದಾರಾ? ಎಂದು ತಿರುಗೇಟು ನೀಡಿದರು.

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂಬ ಸುಮಲತಾ ಆರೋಪ ವಿಚಾರ ಮಾತನಾಡಿದ ಅವರು, ಹೊಸ ಕಾರ್ಖಾನೆಗೆ ಕುಮಾರಸ್ವಾಮಿ ಸಂಕಲ್ಪದಂತೆ ಸಿಎಂ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮಿಂದ ತಪ್ಪಾಗಿದೆ ನೀವು ಅಧಿಕಾರದಲ್ಲಿದ್ದೀರಿ ಸಮಸ್ಯೆ ಬಗೆಹರಿಸಿ ಅದನ್ನು ಬಿಟ್ಟು ಕೆಸರೆರಚಾಡಿಕೊಂಡ್ರೆ ಪ್ರಯೋಜನವಿಲ್ಲ. ಸಂಸದರೂ ತಮ್ಮ ಕೆಲಸ ಮಾಡಬೇಕು, ಶಾಸಕರೂ ತಮ್ಮ ಕೆಲಸ ಮಾಡಬೇಕು. ಶಾಸಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ನಮ್ಮ ಶಾಸಕರು ಹಾಗೆ ಮಾಡುವುದಿಲ್ಲ ಎಂದು ಹೇಳಿದರು

ಇದನ್ನೂ ಓದಿ : ನಾವೇನೂ ಅಧಿಕಾರ ಕೊಡಿ ಅಂತಾ ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ ; ಮಾಜಿ ಪ್ರಧಾನಿ ದೇವೇಗೌಡ

ಕೆ.ಆರ್.ಪೇಟೆಗೆ ಹೋದರೇ ಬಿಜೆಪಿ ಜತೆ ನಾಗಮಂಗಲಕ್ಕೆ ಬಂದ್ರೆ ಕಾಂಗ್ರೆಸ್ ಜೊತೆ ಹೋಗುತ್ತಾರೆ. ತಮ್ಮದು ಯಾವ ಪಕ್ಷ ಎಂದು ಮೊದಲು ತೀರ್ಮಾನ ಮಾಡಲಿ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅವರು ಸ್ವಾಭಿಮಾನದ ಹೆಸರಿನಲ್ಲಿ ಹೋರಾಡಿದ್ರು. ಈಗ ಸುಮಲತಾ ಅವರು ಯಾರಿಗೆ ಎಷ್ಟೆಷ್ಟು ಪಾಲು ಕೊಡುತ್ತಾರೆ ನೋಡಬೇಕು ಎಂದರು

ಯಾರಾದರೂ ಮತ ಹಾಕಿದ್ರೆ ಅವರ ಮನೆಯಲ್ಲಿ ಹೋಗಿ ಊಟ ಮಾಡಲಿ. ನಾವು ಜೆಡಿಎಸ್ ಕಚೇರಿಗೆ ಸಂಸದೆ ಸುಮಲತಾ ಅವರನ್ನು  ಕರೆಯುವುದಿಲ್ಲ ಅವರನ್ನು ಕರೆದುಕೊಳ್ಳಲು ಕಾಂಗ್ರೆಸ್, ಬಿಜೆಪಿಯವರು ಕಾಯ್ದು ಕುಳಿತಿದ್ದಾರೆ ಎಂದು ತಿಳಿಸಿದರು.

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading