'ರಾಹುಲ್ ಗಾಂಧಿಯ ನ್ಯಾಯ್ ಯೋಜನೆಯನ್ನು ಕುಂದಗೋಳದಿಂದಲೇ ಪ್ರಾರಂಭಿಸುತ್ತೇವೆ'; ಸಚಿವ ಡಿಕೆಶಿ ಭರವಸೆ

ಇಂದು ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಕ್ಷೇತ್ರದವರನ್ನು ಹೊರತುಪಡಿಸಿ, ಹೊರಗಿನಿಂದ ಬಂದವರು ಕ್ಷೇತ್ರದಲ್ಲಿ ಇರುವಂತಿಲ್ಲ.

HR Ramesh | news18
Updated:May 17, 2019, 7:00 PM IST
'ರಾಹುಲ್ ಗಾಂಧಿಯ ನ್ಯಾಯ್ ಯೋಜನೆಯನ್ನು ಕುಂದಗೋಳದಿಂದಲೇ ಪ್ರಾರಂಭಿಸುತ್ತೇವೆ'; ಸಚಿವ ಡಿಕೆಶಿ ಭರವಸೆ
ಸಚಿವ ಡಿ.ಕೆ.ಶಿವಕುಮಾರ್​
HR Ramesh | news18
Updated: May 17, 2019, 7:00 PM IST
ಹುಬ್ಬಳ್ಳಿ: ಚುನಾವಣಾ ನಿಯಮದಂತೆ ಇಂದಿನಿಂದ ನಾವು ಕುಂದಗೋಳ ಕ್ಷೇತ್ರದಲ್ಲಿ ಇರುವುದಿಲ್ಲ. ಆದರೆ ನಾವ್ಯಾರೂ ಜಿಲ್ಲೆ ಬಿಟ್ಟು ಹೋಗಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಚುನಾವಣೆ ಮಾಡಲು ಸಾಮಾನ್ಯ ಕಾರ್ಯಕರ್ತರಾಗಿ ಬಂದಿದ್ದೇವೆ. ದಿವಂಗತ ಸಿ.ಎಸ್. ಶಿವಳ್ಳಿಯ ಪ್ರಾಮಾಣಿಕತೆ ಮತ್ತು ಸೇವೆಯನ್ನು ಎಲ್ಲಾ ಪಕ್ಷಗಳು ಹೊಗಳಿವೆ. ನಾವು ಬಿಜೆಪಿಯಂತೆ‌ ಕಟುಕರಲ್ಲ. ವಿದ್ಯಾವಂತೆ ಅಲ್ಲದಿದ್ದರು ಪ್ರಜ್ಞಾವಂತೆ ಆಗಿರುವ ಕುಸುಮಾ ಶಿವಳ್ಳಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಇಡೀ ಸರ್ಕಾರ ಖಾಲಿಯಾದ ಮಂತ್ರಿ ಸ್ಥಾನಕ್ಕೆ ಚುನಾವಣೆ ಮಾಡುತ್ತಿದೆ. ಕ್ಷೇತ್ರವನ್ನು ದತ್ತು ತೆಗೆದುಕೊಂಡು ಧಾರವಾಡ ಪೇಡಾದಂತೆ ಸಿಹಿ ಮಾಡಲು ತೀರ್ಮಾನಿಸಿದ್ದೇವೆ. ಕನಕಪುರದಂತೆ ಕುಂದಗೋಳವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಾಹುಲ್ ಗಾಂಧಿಯವರ ನ್ಯಾಯ್ ಯೋಜನೆಯನ್ನು ಕುಂದಗೋಳದಿಂದ ಪ್ರಾರಂಭಿಸುತ್ತೇವೆ. ಇಲ್ಲಿ ಪ್ರತ್ಯೇಕ ಕಚೇರಿ ತೆರೆದು ಪೈಲಟ್ ಪ್ರೊಜೆಕ್ಟ್ ಆರಂಭಿಸುತ್ತೇವೆ.

ಬಿಜೆಪಿಯವರು ಮತಯಾಚನೆ ಸಂದರ್ಭದಲ್ಲಿ ಮಹದಾಯಿ ಬಗ್ಗೆ ಮಾತನಾಡಿಲ್ಲ.
ಬಿಜೆಪಿ ನಾಯಕರಿಗೆ ಒಂದು‌ ನೋಟಿಫಿಕೇಷನ್ ಮಾಡಿಸಲು ಆಗಿಲ್ಲ. ಮತ ಕೇಳಲು ನಿಮಗೆ ನಾಚಿಕೆ ಆಗಲ್ವಾ. ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಕೊಟ್ಟ ತೀರ್ಪಿನ ನೋಟಿಫಿಕೇಶನ್ ಮಾಡಲು ಆಗಿಲ್ಲ. ನಿಮ್ಮ ಕಾಳಜಿ ಕೇವಲ ಕುರ್ಚಿಯ ಮೇಲಿದೆ, ಜನರ ಸೇವೆಯ ಮೇಲಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಇದನ್ನು ಓದಿ: ನನಗೆ ಸಿಎಂ ಆಗಿ ಎಂದು ಹೈಕಮಾಂಡ್ ಹೇಳಿಲ್ಲ, ಈಗ ಈ ಚರ್ಚೆ ಅನವಶ್ಯಕ; ಮಲ್ಲಿಕಾರ್ಜುನ ಖರ್ಗೆ​ಇಂದು ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಕ್ಷೇತ್ರದವರನ್ನು ಹೊರತುಪಡಿಸಿ, ಹೊರಗಿನಿಂದ ಬಂದವರು ಕ್ಷೇತ್ರದಲ್ಲಿ ಇರುವಂತಿಲ್ಲ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ