• Home
  • »
  • News
  • »
  • state
  • »
  • D K Shivakumar: ಪೇಸಿಎಂ ಪೋಸ್ಟರ್​ ಅಂಟಿಸ್ತೇವೆ, ಟೀ-ಶರ್ಟ್​ ಧರಿಸುತ್ತೇವೆ; ಯಾರಿಗೂ ಹೆದರೋದಿಲ್ಲ ಎಂದ್ರು ಡಿಕೆಶಿ

D K Shivakumar: ಪೇಸಿಎಂ ಪೋಸ್ಟರ್​ ಅಂಟಿಸ್ತೇವೆ, ಟೀ-ಶರ್ಟ್​ ಧರಿಸುತ್ತೇವೆ; ಯಾರಿಗೂ ಹೆದರೋದಿಲ್ಲ ಎಂದ್ರು ಡಿಕೆಶಿ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಮೈಸೂರಿನಲ್ಲಿ ಕಪ್ಪು ಬಾವುಟ ಹಂಚುವ ಪ್ರಯತ್ನ ನಡೆದಿದೆ. ಬಿಜೆಪಿಯವರು ಕಪ್ಪು ಬಾವುಟ ಹಂಚಿದ್ದಾರಂತೆ. ಪೊಲೀಸ್ ಆಯುಕ್ತರು ಇದನ್ನ ಗಮನಿಸಬೇಕು. ನೀವು ಕಪ್ಪು ಬಾವುಟ ಪ್ರದರ್ಶನ ಮಾಡಿ. ಮುಂದೆ ಇದರ ಪ್ರತಿಫಲ ಅನುಭವಿಸ್ತೀರಾ ಎಂದು ಡಿಕೆ ಶಿವಕುಮಾರ್​ ಎಚ್ಚರಿಕೆ ಕೊಟ್ಟಿದ್ದಾರೆ.

  • Share this:

ರಾಹುಲ್ ರಾಜಕೀಯ ಅಸ್ಥಿತ್ವಕ್ಕೆ ಯಾತ್ರೆ ಮಾಡ್ತಾ ಇದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar)​, ರಾಹುಲ್ ಗಾಂಧಿ (Rahul Gandhi) ಏನು ಪಕ್ಷದ ಅಧ್ಯಕ್ಷರಾ? ಮಂತ್ರಿ, ಪ್ರಧಾನಿ ಆಗಿದ್ರಾ, ಎಲ್ಲಾ ತ್ಯಾಗ ಮಾಡಿದ್ರು . ರಾಜ್ಯದಲ್ಲಿ ಜನ ಸಮೂಹ ನೋಡಿದ್ದಾರೆ‌ ಎಂದ್ರು. ಇನ್ನು ಬಿಜೆಪಿಗೆ ಯಾಕೆ ಹೊಟ್ಟೆ ಉರಿ, ನಾವು ದೇಶದ ಕೆಲಸ ಮಾಡ್ತಿದ್ದೇವೆ. ನೀವು ಜನೋತ್ಸವ ಆದ್ರೂ ಮಾಡಿ, ಕುಣೀರಿ, ತಮಟೆ ಹೊಡೆಯಿರಿ ಯಾರು ಬೇಡ ಎಂದವರು ಎಂದು ಡಿಕೆಶಿ ಕಿಡಿಕಾರಿದ್ರು. ಅಷ್ಟೇ ಅಲ್ಲದೇ ಪೇ ಸಿಎಂ (PayCM) ಟೀ ಶರ್ಟ್​ ಧರಿಸುತ್ತೇವೆ. ಪೋಸ್ಟರ್ ಅಂಟಿಸಿದ್ದೇವೆ. ನಾವು ಯಾರಿಗೂ ಎದುರುವುದಿಲ್ಲ. ಟೀ ಶರ್ಟ್ (T-Shirt) ಹಾಕಿರುವ ಯುವಕನ್ನು ಅರೆಸ್ಟ್ ಮಾಡಿ ಗಂಡಸ್ತನ ತೋರಿಸ್ತಿದ್ದೀರಾ? ಅಬ್ಬಾಬ್ಬಾ ಶಿವ ಶಿವ ಮಹಾದೇವ ಎಂದು ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.


ನಾನು ಬ್ಯಾನರ್​, ಪೋಸ್ಟರ್​ ಕಟ್ಟುತ್ತಿದ್ದೆ


ರಾಹುಲ್​ ಗಾಂಧಿ ಸ್ವಾಗತದ ವೇಳೆ ಸಿದ್ದರಾಮಯ್ಯ ನಿಯಮ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ  ನಾನು ಜನ ಕರೆಸುವುದು, ವಾಲ್ ಪೋಸ್ಟ್ ಕಟ್ಟುವುದು, ಬ್ಯಾನರ್ ಕಟ್ಟೋದು ಮಾಡಿದ್ದೇನೆ. ಯಾರು ಹೋದರು? ಯಾರು ಬಂದರು ಗೊತ್ತಿಲ್ಲ ಎಂದ್ರು. ಮೊದಲು ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿ ಬಳಿಕ ಸಿದ್ದರಾಮಯ್ಯ ಸ್ವಾಗತವನ್ನು ಡಿಕೆ ಶಿವಕುಮಾರ್​ ಸಮರ್ಥಿಸಿಕೊಂಡಿದ್ದಾರೆ.


ಅರಣ್ಯದ ರಸ್ತೆಯಲ್ಲಿ ನಾವು ಪಾದಯಾತ್ರೆ ಮಾಡಿಲ್ಲ


ಯಾರು ಹೋದ್ರೋ ಯಾರು ಬಂದ್ರೋ ನನಗೆ ಗೊತ್ತಿಲ್ಲ. ಅರಣ್ಯದಲ್ಲಿ ರಸ್ತೆ ಇದೆ ರಸ್ತೆ ಇರುವಾಗ ಓಡಾಡಬಾರದು ಅಂತ ಏನಾದರು ಕಾನೂನು ಇದೆಯಾ? ಸಿದ್ದರಾಮಯ್ಯ ಬಂದೂಕು ತಗೊಂಡು ಪ್ರಾಣಿಗೆ ಹೊಡಿಯೋಕೆ ಹೋಗಿದ್ರಾ? ನಮ್ಮ‌ನಾಯಕರು ಆ ರೋಡಲ್ಲಿ ಬಂದ್ರು ಸ್ವಾಗತ ಮಾಡೋಕೆ ಹೋಗಿದ್ದರು. ನಾವೇನು ಪಾದಯಾತ್ರೆಯನ್ನು ಅಲ್ಲಿ ಮಾಡಿದ್ವಾ? ಸಿದ್ದರಾಮಯ್ಯ ವಿರುದ್ಧ ಕೇಸ್​ ಹಾಕುವ ಕೆಲಸ ಅವ್ರು ಮಾಡಿಲ್ಲ ಎಂದು ಡಿ ಕೆ ಶಿವಕುಮಾರ್​ ಹೇಳಿದ್ದಾರೆ.


ಇದನ್ನೂ ಓದಿ: DK Shivakumar: ಭಾರತ್ ಜೋಡೋ ಯಾತ್ರೆಯಲ್ಲಿರೋ ಡಿಕೆಶಿಗೆ ED ಶಾಕ್


ಕಪ್ಪು ಬಾವುಟ ಪ್ರದರ್ಶನ ಮಾಡೋ ಯತ್ನ


ಮೈಸೂರಿನಲ್ಲಿ ಕಪ್ಪು ಬಾವುಟ ಹಂಚುವ ಪ್ರಯತ್ನ ನಡೆದಿದೆ. ಬಿಜೆಪಿಯವರು ಕಪ್ಪು ಬಾವುಟ ಹಂಚಿದ್ದಾರಂತೆ. ಪೊಲೀಸ್ ಆಯುಕ್ತರು ಇದನ್ನ ಗಮನಿಸಬೇಕು. ನೀವು ಕಪ್ಪು ಬಾವುಟ ಪ್ರದರ್ಶನ ಮಾಡಿ. ಮುಂದೆ ಇದರ ಪ್ರತಿಫಲ ಅನುಭವಿಸ್ತೀರಾ ಎಂದು ಡಿಕೆ ಶಿವಕುಮಾರ್​ ಎಚ್ಚರಿಕೆ ಕೊಟ್ಟಿದ್ದಾರೆ.


ಎಐಸಿಸಿ ಅಧ್ಯಕ್ಷ ಪಟ್ಟದ ಮೇಲೆ ಖರ್ಗೆ ಕಣ್ಣು


ಎಐಸಿಸಿ ಅಧ್ಯಕ್ಷ ಪಟ್ಟದ ಮೇಲೆ ಕಣ್ಣು ಹಾಕಿರುವ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದಾರೆ.  ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ತಮ್ಮ ಹೋರಾಟದ ಬದುಕನ್ನು ಮೆಲುಕು ಹಾಕಿದ್ದಾರೆ.


ಇದನ್ನೂ ಓದಿ: Sonia Gandhi: ಇಂದು ಸಂಜೆ ಮೈಸೂರಿಗೆ ಸೋನಿಯಾ ಗಾಂಧಿ; ನಾಳೆ ಭಾರತ್ ಜೋಡಿ ಯಾತ್ರೆಯಲ್ಲಿ ಭಾಗಿ


50 ವರ್ಷಗಳ ರಾಜಕೀಯ ಜೀವನದ ಬಗ್ಗೆ ಮಾತಾಡಿದ್ದಾರೆ. ರಾಜಕೀಯದ ಏಳು-ಬೀಳಿನ ಬಗ್ಗೆ ಹಂಚಿಕೊಂಡರು. ಬಿಜೆಪಿ ಸರ್ಕಾರ ಗಾಂಧಿ ಕುಟುಂಬಕ್ಕೆ ವಿನಾಕಾರಣ ಕಿರುಕುಳ ನೀಡ್ತಿದ್ದಾರೆ.  ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ. ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ್ರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಾಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Published by:ಪಾವನ ಎಚ್ ಎಸ್
First published: