ನಾವು ಮರಳಿ ಕಾಂಗ್ರೆಸ್ ಸೇರ್ಪಡೆ ಆಗುವ ಮಾತೇ ಇಲ್ಲ; ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಸ್ಪಷ್ಟನೆ

ಸಿದ್ದರಾಮಯ್ಯಗೆ ಅಧಿಕಾರ ಸಿಗಲಿ ಅಥವಾ ಸಿಗದಿರಲಿ ಎನ್ನುವ ಕಾರಣಕ್ಕೆ ನಾವು ಪಕ್ಷ ಬಿಟ್ಟಿಲ್ಲ. ಹೀಗಾಗಿ ನಾವು ಮರಳಿ ಕಾಂಗ್ರೆಸ್ ಸೇರ್ಪಡೆ ಆಗುವ ಮಾತೇ ಇಲ್ಲ. ನಮ್ಮ ನಿರ್ಧಾರ ಅಚಲ ಎಂದರು ಪ್ರತಾಪ್​ ಗೌಡ.

Rajesh Duggumane | news18-kannada
Updated:October 23, 2019, 11:23 AM IST
ನಾವು ಮರಳಿ ಕಾಂಗ್ರೆಸ್ ಸೇರ್ಪಡೆ ಆಗುವ ಮಾತೇ ಇಲ್ಲ; ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಸ್ಪಷ್ಟನೆ
ಪ್ರತಾಪ್ ಗೌಡ ಪಾಟೀಲ್
  • Share this:
ಬೆಂಗಳೂರು (ಅ.23): ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಕಾಂಗ್ರೆಸ್​​-ಜೆಡಿಎಸ್​ನ 17 ಶಾಸಕರು ಅನರ್ಹಗೊಂಡಿದ್ದರು. ಇವರಲ್ಲಿ ಕಾಂಗ್ರೆಸ್​​ನ ಕೆಲ ಅನರ್ಹ ಶಾಸಕರು ಮತ್ತೆ ಪಕ್ಷ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಮತ್ತೆ ಕಾಂಗ್ರೆಸ್​ ಪಕ್ಷವನ್ನು ಸೇರುವ ಮಾತೇ ಇಲ್ಲ ಎಂದು ಮಸ್ಕಿ ಅನರ್ಹ ಶಾಸಕ‌ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಪ್ರತಾಪ್ ಗೌಡ, “ವೈಯಕ್ತಿಕ ಅಸಮಧಾನಗಳಿಂದ ನಾವು ಕಾಂಗ್ರೆಸ್ ಬಿಟ್ಟಿದ್ದೇವೆ. ಸಿದ್ದರಾಮಯ್ಯಗೆ ಅಧಿಕಾರ ಸಿಗಲಿ ಅಥವಾ ಸಿಗದಿರಲಿ ಎನ್ನುವ ಕಾರಣಕ್ಕೆ ನಾವು ಪಕ್ಷ ಬಿಟ್ಟಿಲ್ಲ. ಹೀಗಾಗಿ ನಾವು ಮರಳಿ ಕಾಂಗ್ರೆಸ್ ಸೇರ್ಪಡೆ ಆಗುವ ಮಾತೇ ಇಲ್ಲ. ನಮ್ಮ ನಿರ್ಧಾರ ಅಚಲ,” ಎಂದರು.

ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಪ್ರತಾಪ್​ ಗೌಡ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿ ಪಕ್ಷ ಸೇರ್ಪಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಎಲ್ಲ ಒಟ್ಟಾಗಿ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಉಪಚುನಾವಣೆಗೆ ಸಹಕಾರ ಕೊಡುವಂತೆ ಯಡಿಯೂರಪ್ಪ, ಬಿಎಲ್ ಸಂತೋಷ್ ಮತ್ತು ನಳೀನ್ ಕುಮಾರ್ ಕಟೀಲ್ ಜೊತೆ ಚರ್ಚೆ ಮಾಡಿದ್ದೇವೆ. ಇಂದು ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರ ಬರುವ ವಿಶ್ವಾಸ ಇದೆ,” ಎಂದರು.

ಇದನ್ನೂ ಓದಿ: ಅನರ್ಹ ಶಾಸಕರಿಗೆ ಇಂದು ಮಹತ್ವದ ದಿನ; ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್​-ಜೆಡಿಎಸ್​ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನವಾಗಲು 17 ಅನರ್ಹ ಶಾಸಕರು ಕಾರಣರಾಗಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆಯಲಿದೆ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading