ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್​ಗೆ ಸಿಗಬೇಕಿತ್ತು, ತನ್ವೀರ್ ಸೇಠ್​ಗೆ ನೋಟಿಸ್ ಕೊಡಲಾಗಿದೆ; ಡಿಕೆಶಿ

ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಧು ಯಾಸ್ಕಿ ಗೌಡ್, ಕಾಂಗ್ರೆಸ್ ಪಕ್ಷ ಅಶಿಸ್ತು ಸಹಿಸಲ್ಲ, ಯಾರೇ ಆದರೂ ಶಿಸ್ತು ರೇಖೆಯನ್ನ ದಾಟಿದರೆ ಕ್ರಮ ಕೈಗೊಳ್ಳುವುದು ನಿಶ್ಚಿತ. ಈ ಬೆಳವಣಿಗೆಯಲ್ಲಿ ಯಾವುದೇ ನಾಯಕ ಇರಲಿ ನಾವು ಕ್ರಮ ಕೈಗೊಳ್ಳುತ್ತೇವೆ. ಮೈಸೂರು ಚುನಾವಣೆಯಲ್ಲಿ ನಡೆದ ಎಲ್ಲಾ ವಿಚಾರವನ್ನೂ ತಿಳಿಯುತ್ತೇನೆ. ನಂತರ ಹೈಕಮಾಂಡ್​ಗೆ ವರದಿ ನೀಡಲಿದ್ದೇವೆ ಎಂದಿದ್ದಾರೆ.

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

 • Share this:
  ಬೆಂಗಳೂರು: ಮೈಸೂರು ಪಾಲಿಕೆ ಮೇಯರ್ ಆಯ್ಕೆ ಗೊಂದಲ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಇವತ್ತು ತನ್ವೀರ್ ಸೇಠ್ ಬರ್ತಿದ್ದಾರೆ. ನಿನ್ನೆ ಸಿಕ್ಕಿರಲಿಲ್ಲ. ತನ್ವೀರ್ ಸೇಠ್ ಅವರಿಗೆ ನೋಟೀಸ್ ಕೊಡುತ್ತಿದ್ದೇವೆ.  ಮೇಯರ್ ಸ್ಥಾನ ಕಾಂಗ್ರೆಸ್ ಗೆ ಸಿಗಬೇಕಾಗಿತ್ತು. ಆದರೆ ಸಿಗಲಿಲ್ಲ. ಮೇಯರ್ ಸ್ಥಾನ ಸಿಗಬೇಕು ಎಂದು ನನ್ನ ಹಾಗೂ ಸಿದ್ದರಾಮಯ್ಯ ಅವರ ಆದೇಶ ಇತ್ತು. ಈಗ ನೊಟೀಸ್ ಕೂಡ ಕೊಡ್ತೇವೆ. ಯಾಕೆ ಏನು ಅನ್ನೋ ವಿಚಾರದಲ್ಲಿ ಗೊಂದಲವಾಗಿತ್ತು ಎಂದು ಹೇಳಿದರು.

  ಮೈಸೂರು ಮೇಯರ್ ಆಯ್ಕೆ ವಿಷಯವಾಗಿ ಎದ್ದಿರುವ ಗೊಂದಲದ ಬಗ್ಗೆ ವರದಿ ನೀಡಲು ವೀಕ್ಷಕರಾಗಿ ಎಐಸಿಸಿ ಕಾರ್ಯದರ್ಶಿ ಮಧು ಯಾಕ್ಷಿ ಗೌಡ್ ಅವರು ರಾಜ್ಯಕ್ಕೆ  ಬಂದಿದದ್ದಾರೆ. ನನ್ನ ಕೂಡ ಭೇಟಿ ಮಾಡಿದ್ರು. ಮೈಸೂರಿಗೂ ಹೋಗ್ತಾರೆ ನಂತರ ಮಧು ಯಕ್ಷಿ ಗೌಡ್ ವರದಿ ಕೊಡಲಿದ್ದಾರೆ. ಯಾಕೆ ಮೇಯರ್ ಸ್ಥಾನ ಪಡೆಯಲಿಲ್ಲ ಅಂತ ಮಾಹಿತಿ ಪಡೆಯುತ್ತೇವೆ ಎಂದು ಹೇಳಿದರು.

  ಇಂದಿನ ಪ್ರತಿಭಟನೆಗೆ ಸಿದ್ದರಾಮಯ್ಯ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಸಿದ್ದರಾಮಯ್ಯ ಸಿಎಲ್​ಪಿ ಲೀಡರ್. ಅವರಿಗೆ ಸಾಕಷ್ಟು ಕೆಲಸ ಇರುತ್ತೆ. ನೀವ್ಯಾಕೆ ಎಲ್ಲವನ್ನೂ ಕ್ರಿಯೇಟ್ ಮಾಡ್ತಿದ್ದೀರ. ನಾನು ಕೆಲವು ಕಡೆ ಹೋಗಿಲ್ಲ.  ಹಾಗೆ ಅವರು ಕೆಲವು ಕಡೆ ಬರೋಕೆ ಆಗ್ತಿಲ್ಲ. ಸಿದ್ದರಾಮಯ್ಯ ಬಂದಿಲ್ಲವೆಂದು ಯಾಕೆ ಆರೋಪ ಮಾಡ್ತೀರಾ ಎಂದು ಸಿದ್ದರಾಮಯ್ಯ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದರು.

  ಪಕ್ಷದಲ್ಲಿ ಅಶಿಸ್ತು ಸಹಿಸಲ್ಲ. ಪಕ್ಷದಲ್ಲಿ ಶಿಸ್ತು ಮುಖ್ಯ. ಅಖಂಡ ಶ್ರೀನಿವಾಸ್ ಮೂರ್ತಿ ಇರುಬಹುದು, ಪಕ್ಷದಲ್ಲಿ ಯಾರೇ ಇರಬಹುದು. ಯಾವ ನಾಯಕರ ವಿರುದ್ಧ ಮಾತನಾಡಬಾರದು. ಆಂತರಿಕವಾಗಿ ಚರ್ಚಿಸಬೇಕು. ಬಹಿರಂಗವಾಗಿ ಮಾತನಾಡಬಾರದು. ನಾನು ಇದರ ಬಗ್ಗೆ ಶಿಸ್ತುಕ್ರಮ ಕೈಗೊಳ್ತೇನೆ ಎಂದು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಡಿಕೆಶಿ ಎಚ್ಚರಿಕೆ ನೀಡಿದರು.

  ಮೈಸೂರು ಮೇಯರ್ ಚುನಾವಣೆಯಲ್ಲಾದ ಬೆಳವಣಿಗೆ ಬಗ್ಗೆ ಸತ್ಯಾಂಶ ವರದಿ ನೀಡಲು ರಾಹುಲ್ ಗಾಂಧಿ ಅವರಿಂದ ವೀಕ್ಷಕರಾಗಿ ಕಳುಹಿಸಲಾಗಿರುವ ಮಧು ಯಾಸ್ಕಿ ಗೌಡ್ ಅವರು ಇಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ.

  ಇದನ್ನು ಓದಿ: ಡಿಕೆಶಿಗೆ ಮೈಸೂರು ಸಂಕಷ್ಟ; ಎಐಸಿಸಿ ವೀಕ್ಷಕ ಯಾಸ್ಕಿ ಮುಂದೆಯೇ ಸಿದ್ದರಾಮಯ್ಯ ಆಕ್ರೋಶ

  ಸಿದ್ದರಾಮಯ್ಯ ಅವರನ್ನು ಮಧು ಯಾಸ್ಕಿ ಗೌಡ್ ಅವರು ಭೇಟಿಯಾಗಿ ಈ ವಿಚಾರವಾಗಿ ಚರ್ಚೆ ನಡೆಸಿದರು. ಈ ವೇಳೆ, ಸಿದ್ದರಾಮಯ್ಯ ಅವರು, ನಾನೇನು ಸಣ್ಣಪುಟ್ಟ ನಾಯಕನಲ್ಲ. ನಾನು ಮುಖ್ಯಮಂತ್ರಿ ಆಗಿದ್ದವನು. ಬಿಜೆಪಿ, ಜೆಡಿಎಸ್ ವಿರುದ್ಧ ರಾಜಕೀಯ ಮಾಡಬೇಕೇ ಹೊರತು ನನ್ನ ಮೇಲೆಯೇ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಧು ಯಾಸ್ಕಿ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

  ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಧು ಯಾಸ್ಕಿ ಗೌಡ್, ಕಾಂಗ್ರೆಸ್ ಪಕ್ಷ ಅಶಿಸ್ತು ಸಹಿಸಲ್ಲ, ಯಾರೇ ಆದರೂ ಶಿಸ್ತು ರೇಖೆಯನ್ನ ದಾಟಿದರೆ ಕ್ರಮ ಕೈಗೊಳ್ಳುವುದು ನಿಶ್ಚಿತ. ಈ ಬೆಳವಣಿಗೆಯಲ್ಲಿ ಯಾವುದೇ ನಾಯಕ ಇರಲಿ ನಾವು ಕ್ರಮ ಕೈಗೊಳ್ಳುತ್ತೇವೆ. ಮೈಸೂರು ಚುನಾವಣೆಯಲ್ಲಿ ನಡೆದ ಎಲ್ಲಾ ವಿಚಾರವನ್ನೂ ತಿಳಿಯುತ್ತೇನೆ. ನಂತರ ಹೈಕಮಾಂಡ್​ಗೆ ವರದಿ ನೀಡಲಿದ್ದೇವೆ ಎಂದಿದ್ದಾರೆ.
  Published by:HR Ramesh
  First published: