• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡೇ ಮಾಡುತ್ತೇವೆ; ಪ್ರಮೋದ್ ಮುತಾಲಿಕ್ ಸವಾಲು

ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡೇ ಮಾಡುತ್ತೇವೆ; ಪ್ರಮೋದ್ ಮುತಾಲಿಕ್ ಸವಾಲು

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ಸರ್ಕಾರದ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ಇದೇ 17ರಂದು ಪ್ರತಿಭಟನೆ ಮಾಡುತ್ತೇವೆ. ಈ ಎಚ್ಚರಿಕೆಗೂ ಮಣಿಯದೇ ಹೋದರೆ ನಾವು ಅನಿವಾರ್ಯವಾಗಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

  • Share this:

ಹುಬ್ಬಳ್ಳಿ (ಆ. 14): ದೇಶದಲ್ಲಿ ನೂರಾರು ವರ್ಷಗಳಿಂದ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆದುಕೊಂಡು ಬಂದಿದೆ. ಈ ಬಾರಿ ಬಿಜೆಪಿಯವರು ಕೊರೋನಾ ನೆಪ ಇಟ್ಟುಕೊಂಡು ಅದನ್ನು ಬ್ಯಾನ್ ಮಾಡಲು ಮುಂದಾಗಿದ್ದು ಸರಿಯಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.


ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡೇ ಮಾಡುತ್ತೇವೆ. ಬೇಕಾದ್ರೆ ನಮ್ಮನ್ನು ಅರೆಸ್ಟ್ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಸಾರ್ವಜನಿಕ ಗಣೇಶೋತ್ಸವವನ್ನು ಕೊರೊನಾ ನಿಯಮಗಳನ್ನು ಪಾಲಿಸಿಯೇ ಮಾಡುತ್ತೇವೆ. ನೀವು ಬಾರ್, ಜಿಮ್, ಮಾಲ್, ದೇವಸ್ಥಾನ, ಮಸೀದಿ, ಚಚ್೯ಗಳಿಗೆ ಅನುಮತಿ ನೀಡಿದ್ದೀರಿ. ಅವುಗಳಿಗೆ ನೀಡಿರೋ ನಿಯಮಗಳನ್ನು ನಾವೂ ಪಾಲಿಸುತ್ತೇವೆ. ಬಿಜೆಪಿಯವರು ನೂರಾರು ವರ್ಷಗಳ ಪರಂಪರೆಯನ್ನು ನಿಲ್ಲಿಸಲು ಹೊರಟಿದ್ದಾರೆ. ಈ ದುಷ್ಟ, ನೀಚ ಬುದ್ದಿ ನಿಮಗ್ಯಾಕೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ: Independence Day 2020: ಭಾರತದ ರಾಷ್ಟ್ರಧ್ವಜದ ಇತಿಹಾಸ, ವಿಶೇಷತೆ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ


ಸರ್ಕಾರದ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ಇದೇ 17ರಂದು ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ಎಲ್ಲಾ ಡಿಸಿ ಕಚೇರಿಗಳ ಮುಂದೆ ಪ್ರತಿಭಟನೆ ಮಾಡುತ್ತೇವೆ. ಇದು ನಮ್ಮ ಕೊನೆಯ ಎಚ್ಚರಿಕೆ. ಈ ಎಚ್ಚರಿಕೆಗೂ ಮಣಿಯದೇ ಹೋದರೆ ನಾವು ಅನಿವಾರ್ಯವಾಗಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.


ಓಲೈಕೆ ರಾಜಕಾರಣವೇ ಗಲಭೆಗೆ ಕಾರಣ:


ಕಾಂಗ್ರೆಸ್‌ನವರು ಮಾಡಿದ ಓಲೈಕೆ ರಾಜಕಾರಣವೇ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಕಾರಣ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸಾಕಿದ ಗಿಣಿಗಳು ಅವರನ್ನೇ ಕುಕ್ಕುತ್ತಿವೆ ಎಂದು ಕುಟುಕಿದ್ದಾರೆ. ಗಲಭೆಕೋರರನ್ನು ಹೀಗೆ ಬಿಟ್ಟರೆ ಅವರು ವಿಧಾನಸೌಧಕ್ಕೂ ಬೆಂಕಿ ಹಚ್ಚುತ್ತಾರೆ. ಸಿದ್ದರಾಮಯ್ಯ,‌ ಡಿಕೆಶಿಯವರೇ ನಿಮ್ಮ ಮನೆಗೂ ಬೆಂಕಿ ಹಚ್ಚುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ.


ಇದನ್ನೂ ಓದಿ: ರಾಜ್ಯ ಹೆದ್ದಾರಿಯಲ್ಲಿ ಭತ್ತ ನಾಟಿ ಮಾಡಿ ರಸ್ತೆ ಸರಿಪಡಿಸುವಂತೆ ಪ್ರತಿಭಟನೆ


ಇದರಲ್ಲಿ ಬಿಜೆಪಿಯವರೂ ಆಟ ಆಡ್ತಿದ್ದಾರೆ. ಆರ್. ಅಶೋಕ ಗೃಹ ಸಚಿವರಾಗಿದ್ದಾಗ ನಾನೇ ಪಿಎಫ್ಐ ಬ್ಯಾನ್ ಮಾಡಿ ಎಂದು ಪತ್ರ ಬರೆದಿದ್ದೆ, ಏನಾಯ್ತು? ಸದ್ಯ ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ‌. ಯಾಕೆ ಬ್ಯಾನ್ ಮಾಡ್ತಿಲ್ಲ? ನೀವೆಲ್ಲಾ ಸೇರಿಕೊಂಡು ಸಾಮಾನ್ಯ ಜನರನ್ನು ಬಲಿಕೊಡುತ್ತಿದ್ದೀರಿ. ಈ ಘಟನೆಯಲ್ಲಿ ನವೀನ್‌ನನ್ನ ಬಲಿಪಶು ಮಾಡುತ್ತಿದ್ದಾರೆ. ಆದರೆ ಅದಕ್ಕಿಂತ ಮುಂಚೆ ಬಶೀರ್ ಅಡ್ಯಾರ್ ಎನ್ನೋ ವ್ಯಕ್ತಿ ಹಿಂದೂ ದೇವರ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದ್ದ. ಅದಕ್ಕೆ‌ ಪ್ರತಿಯಾಗಿ ನವೀನ್ ಮಾಡಿದ್ದಾನೆ. ಹೀಗಾಗಿ ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದಕ್ಕೆ, ನಾವು ಬೆಂಕಿ ಹಚ್ಚಬೇಕಾ? ಅದಕ್ಕೆ ಕಾನೂನಿದೆ, ಸೈಬರ್ ಕ್ರೈಂ ಇದೆ ಅದಕ್ಕೆ ದೂರು ನೀಡಲಿ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಅವರಿಂದಲೇ ನಷ್ಟ ಭರಿಸಬೇಕು ಎಂದವರು ಒತ್ತಾಯಿಸಿದ್ದಾರೆ.


ಡಿಜೆ ಹಳ್ಳಿ ಘಟನೆ ನೋಡಿದ್ರೆ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಜಮೀರ್ ಅಹ್ಮದ್ ಓವರ್ ಆ್ಯಕ್ಟ್ ಮಾಡ್ತಿದ್ದಾನೆ. ಆತನ ನಡವಳಿಕೆ ನೋಡಿದ್ರೆ ಈ ರೀತಿಯ ಘಟನೆಯ ಹಿಂದೆ ಆತನ ಕೈವಾಡವಿದೆ‌. ಆತನ ವಿರುದ್ದ ಕ್ರಮ ಕೈಗೊಳ್ಳಬೇಕು. ಎಸ್‌ಡಿಪಿಐ ಬಗ್ಗೆಯೂ ಬಿಜೆಪಿಗೆ ಸಾಫ್ಟ್ ಕಾರ್ನರ್ ಇದೆ. ಯಾಕೆಂದ್ರೆ ಅದೊಂದು ರಾಜಕೀಯ ಪಕ್ಷ. ಹೀಗಾಗಿ ಅವರು ಎಲೆಕ್ಷನ್ ನಿಂತ್ರೆ, ಬಿಜೆಪಿಯವರಿಗೆ ಲಾಭ ಆಗುತ್ತೆ ಅನ್ನೋ ತಂತ್ರಗಾರಿಕೆ ಬಿಜೆಪಿಯವರದ್ದು ಎಂದವರು ಆರೋಪಿಸಿದ್ದಾರೆ.

Published by:Sushma Chakre
First published: