ಕರ್ನಾಟಕದಲ್ಲಿ 22 ಸೀಟು ಗೆದ್ದು ಮೋದಿ ಕೈ ಬಲಪಡಿಸುತ್ತೇವೆ; ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ವಿಶ್ವಾಸ!

ತನ್ನ ಭದ್ರಕೋಟೆಯಾಗಿದ್ದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಬಿಜೆಪಿ ಸೋತು ಕಾಂಗ್ರೆಸ್​​ ಅಧಿಕ್ಕಾರಕ್ಕೇರಿದೆ. ಇಲ್ಲಿ ಎದುರಾಳಿ ಕಾಂಗ್ರೆಸ್​ ಮುಂದೆ ಸೋತ ಬಿಜೆಪಿ ಈ ಬಾರಿ ಎಚ್ಚೆತ್ತುಕೊಂಡಿದೆ.

Ganesh Nachikethu | news18
Updated:April 14, 2019, 10:02 AM IST
ಕರ್ನಾಟಕದಲ್ಲಿ 22 ಸೀಟು ಗೆದ್ದು ಮೋದಿ ಕೈ ಬಲಪಡಿಸುತ್ತೇವೆ; ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ವಿಶ್ವಾಸ!
ಬಿಎಸ್ ಯಡಿಯೂರಪ್ಪ
Ganesh Nachikethu | news18
Updated: April 14, 2019, 10:02 AM IST
ಬೆಂಗಳೂರು(ಏ.14): ಕರ್ನಾಟಕದಲ್ಲಿ 22 ಸೀಟು ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​​ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ನಗರದಲ್ಲಿ ನಡೆದ ವಿಜಯಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಯಲ್ಲಿ ಈಗಾಗಲೇ ಬಿರುಕು ಮೂಡಿದೆ. ಅಧಿಕಾರಕ್ಕಾಗಿ ಎರಡು ಪಕ್ಷಗಳ ನಡುವೇ ಬಡಿದಾಟ ಪ್ರಾರಂಭವಾಗಿದೆ. ಸರ್ಕಾರ ಐಸಿಯುನಲ್ಲಿದ್ದು, ಕೋಮಾಗೆ ಜಾರಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ದೇಶದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗದ ನಾಯಕ ಪ್ರಧಾನಿಯಾಗಿದ್ದಾರೆ. ಪರಿಶಿಷ್ಟರಿಗೆ ರಾಷ್ಟ್ರಪತಿ ಸ್ಥಾನದ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ ಹಿಂದುಳಿದವರನ್ನು ಕಡೆಗಣಿಸಲಾಗುತ್ತಿದೆ ಎಂಬುವರಿಗೆ ಇದೇ ತಕ್ಕ ಉತ್ತರವಾಗಿದೆ ಎಂದು ಹೇಳಿದರು. ಜತೆಗೆ ಕಲ್ಬುರ್ಗಿಗೆ ಈಗಾಗಲೇ ಮೂರು ಬಾರಿ ಹೋಗಿ ಬಂದಿದ್ದೇನೆ. ಅಲ್ಲಿ ಖರ್ಗೆ, ಕೋಲಾರದಲ್ಲಿ ಕೆ.ಎಚ್​​ ಮುನಿಯಪ್ಪ ಸೋಲು ಸ್ಪಷ್ಟ. ಅಲ್ಲದೇ ಮುಂದಿನ ಬಾರಿಯೂ ಪ್ರಧಾನಿ ಮೋದಿಯವರೇ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆಗೆ ದಿಣಗಣನೆ ಶುರುವಾಗಿದೆ. ಒಂದೆಡೆ ಕಾಂಗ್ರೆಸ್​-ಜೆಡಿಎಸ್​ ನಾಯಕರು​ ಮೈತ್ರಿಧರ್ಮ ಪಾಲನೆ ತಿಕ್ಕಾಟದ ನಡುವೆಯೇ ಹೆಣಗಾಡುತ್ತಿದ್ದರೇ, ಇತ್ತ ಬಿಜೆಪಿ ಮಾತ್ರ ಲೋಕಸಭೆ ರಣರಂಗಕ್ಕೆ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿಯನ್ನು ಹೇಗೆ ಎದುರಿಸಬೇಕು; ಚುನಾವಣೆ ಮಹಾಸಮರಕ್ಕೆ ನಡೆಸಿಕೊಳ್ಳಬೇಕಾದ ಪೂರ್ವ ಸಿದ್ಧತೆ; ವಿರೋಧ ಪಕ್ಷಗಳನ್ನು ಸೆದೆ ಬಡಿಯುವುದು ಹೇಗೆ? ಎಂಬ ಚರ್ಚೆ ನಡೆಯುತ್ತಲೇ ಇದೆ.

ಇದನ್ನೂ ಓದಿ: ಆಂಧ್ರದಲ್ಲಿ ಮತದಾನದ ವೇಳೆ ಕೈಕೊಟ್ಟ ಇವಿಎಂ; ಆಯೋಗಕ್ಕೆ ಸಿಎಂ ಚಂದ್ರಬಾಬು ನಾಯ್ಡು ದೂರು!

ಇನ್ನು ದೇಶಾದ್ಯಂತ ಬಿಜೆಪಿ ವಿರೋಧಿ ಪಡೆ ಪುಟಿದೇಳುತ್ತಿದೆ. ಕಾಂಗ್ರೆಸ್​​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಪ್ರಧಾನಿ ಮೋದಿ ಸರ್ಕಾರವನ್ನು ಬಗ್ಗು ಬಡೆಯಲು ಮುಂದಾಗಿವೆ. ಇದೀಗ ಕೇಂದ್ರ ವಿಕ್ಷಗಳಿಗೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಬಿಜೆಪಿಯೂ ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ 123 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು "ಮಿಷನ್‌ 123' ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ ಸಾಲುಸಾಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ತನ್ನ ಭದ್ರಕೋಟೆಯಾಗಿದ್ದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಬಿಜೆಪಿ ಸೋತು ಕಾಂಗ್ರೆಸ್​​ ಅಧಿಕ್ಕಾರಕ್ಕೇರಿದೆ. ಇಲ್ಲಿ ಎದುರಾಳಿ ಕಾಂಗ್ರೆಸ್​ ಮುಂದೆ ಸೋತ ಬಿಜೆಪಿ ಈ ಬಾರಿ ಎಚ್ಚೆತ್ತುಕೊಂಡಿದೆ. ಹೇಗಾದರೂ ಮತ್ತೆ ಮತದಾರರನ್ನು ತಲುಪು ಯೋಜನೆಗಳನ್ನು ಹಾಕಿಕೊಂಡಿದೆ. ಕಳೆದ 2014ರ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ ಹೆಚ್ಚು ಸ್ಥಾನಗಳು ಗೆಲ್ಲಬೇಕು. ಸ್ಪರ್ಧಿಸಿ ಸೋತ 123 ಸ್ಥಾನಗಳಲ್ಲಿಯೂ ನಮ್ಮ ಛಾಪು ಮೂಡಿಸಬೇಕೆಂದು ಬಿಜೆಪಿ ಹೊರಟಿದೆ.
Loading...

-------------
First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626