HOME » NEWS » State » WE SUPPORT TO SUMALATHA IF SHE CONTEST INDEPENDENTLY SAYS SHOBHA KARANDLAJE

ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ;​ ಪಕ್ಷೇತರವಾಗಿ ನಿಂತರೂ ಬೆಂಬಲವಿದೆ; ಶೋಭಾ ಕರಂದ್ಲಾಜೆ

ಬಿಜೆಪಿಗೆ ಯಾರೂ ಬಂದರೂ ಸ್ವಾಗತವಿದೆ. ಸುಮಲತಾ ಅಂಬರೀಶ್ ಬಿಜೆಪಿಗೆ ಬಂದರೂ ಸ್ವಾಗತ. ಅವರು ಪಕ್ಷೇತರವಾಗಿ ನಿಂತರೂ ಬಿಜೆಪಿ ಬೆಂಬಲ ನೀಡುತ್ತದೆ. ಬೆಂಬಲ ಯಾಚಿಸಿದರೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

Latha CG | news18
Updated:March 3, 2019, 5:35 PM IST
ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ;​ ಪಕ್ಷೇತರವಾಗಿ ನಿಂತರೂ ಬೆಂಬಲವಿದೆ; ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
  • News18
  • Last Updated: March 3, 2019, 5:35 PM IST
  • Share this:
ಮಂಗಳೂರು,(ಮಾ.03): ಸುಮಲತಾ ಸ್ವಾಗತಕ್ಕೆ ಬಿಜೆಪಿ ಸದಾ ಸಿದ್ಧವಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ನಿಂತರೂ ಬಿಜೆಪಿ ಬೆಂಬಲ ನೀಡುತ್ತದೆ. ಸಹಾಯ ಬೇಕಿದ್ದರೆ ಖಂಡಿತವಾಗಿ ಬೆಂಬಲ ನೀಡುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ನಿಖಿಲ್‌ಗೆ ಮಂಡ್ಯ ಟಿಕೆಟ್ ನೀಡುವುದು ಆಂತರಿಕ ವಿಚಾರ. ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಹೋಗಲ್ಲ. ದೇವೇಗೌಡರ ಕುಟುಂಬವೇ ರಾಜಕಾರಣ ಎಂದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಎಂದು ಹೇಳಿದ್ದಾರೆ. ಬಿಜೆಪಿಗೆ ಯಾರೂ ಬಂದರೂ ಸ್ವಾಗತವಿದೆ. ಸುಮಲತಾ ಅಂಬರೀಶ್ ಬಿಜೆಪಿಗೆ ಬಂದರೂ ಸ್ವಾಗತ. ಅವರು ಪಕ್ಷೇತರವಾಗಿ ನಿಂತರೂ ಬಿಜೆಪಿ ಬೆಂಬಲ ನೀಡುತ್ತದೆ. ಬೆಂಬಲ ಯಾಚಿಸಿದರೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಮಂಡ್ಯದಲ್ಲಿ ನಿಖಿಲ್​​ ಸ್ಪರ್ಧೆ ಖಚಿತ; ಹಿಂದೆ ಸರಿಯುವ ಮಾತೇ ಇಲ್ಲ- ಸಿಎಂ ಎಚ್​ಡಿಕೆ

ಭಾರತದ ಸೇನೆ, ವಾಯುಪಡೆ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದೆ. ಅಭಿನಂದನ್ ಪಾಕಿಸ್ತಾನದ ವಿಮಾನ‌ ಹೊಡೆದುರುಳಿಸಿದರು. ಅಚಾನಕ್ಕಾಗಿ ಪ್ಯಾರಚೂಟ್ ಪಾಕಿಸ್ತಾನದಲ್ಲಿ ಲ್ಯಾಂಡ್ ಆಗಿತ್ತು. ಆದರೆ, ಕಾಂಗ್ರೆಸ್ಸಿಗರ ಮನಸ್ಥಿತಿ ನಮ್ಮನ್ನು ಭಯಗೊಳಿಸುತ್ತಿದೆ. ದಿಗ್ವಿಜಯ ಸಿಂಗ್ ಮುಂತಾದವರು ದೇಶದ ಸೈನಿಕರ‌ ಹೋರಾಟಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಈ ರೀತಿಯ ಹೇಳಿಕೆ ಸರಿಯಲ್ಲ, ಇದು ದೇಶದ್ರೋಹದ ಕೆಲಸ ಎಂದರು.

ಅಭಿನಂದನ್ ಬರುವಾಗ ಇಡೀ ದೇಶ‌ ಉಸಿರು ಬಿಗಿ ಹಿಡಿದು ಕಾದಿತ್ತು. ಲೋಕಸಭಾ ಚುನಾವಣೆ‌ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ವಿಷಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಈಗಲಾದರೂ ಅರ್ಥ ಮಾಡಿಕೊಳ್ಳಿ. ಈ ರೀತಿ ಹೇಳಿಕೆ ನೀಡಿದವರನ್ನು ಕಿತ್ತು ಹಾಕಿ ಎಂದು ಆಗ್ರಹಿಸಿದರು.

First published: March 3, 2019, 5:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories