ಉಪ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ ; ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಬಿಜೆಪಿಗೆ ಸಪೋರ್ಟ್ ಮಾಡುವ ಪ್ರಶ್ನೆ ಬರಲ್ಲ ಆದರೆ ನಾವೇನು ಸನ್ಯಾಸಿಗಳಲ್ಲ. ಅಂಥ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ಕೂರಲ್ಲ. ಜಾತ್ಯತೀತ ಪಕ್ಷದ ನೆಲೆಯಲ್ಲಿ ನಮ್ಮ ಪ್ರಯತ್ನ ಮಾಡುತ್ತೇವೆ

G Hareeshkumar | news18-kannada
Updated:November 9, 2019, 3:54 PM IST
ಉಪ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ ; ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
  • Share this:
ಉಡುಪಿ(ನ.09): ಉಪ ಚುನಾವಣೆಯಲ್ಲಿ ಜೆಡಿಎಸ್ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಏಕಾಂಗಿಯಾಗಿ ಹೋರಾಟ ಮಾಡುತ್ತೇವೆ. ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ತೀರ್ಪು ಏನೇ ಬರಲಿ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎಂದು ಮಾಜಿ ಪ್ರಧಾನಿ ಹೆಚ್ ಡಿ  ದೇವೇಗೌಡ ಹೇಳಿದ್ದಾರೆ.  

ಬಿಜೆಪಿಗೆ ಸಪೋರ್ಟ್ ಮಾಡುವ ಪ್ರಶ್ನೆ ಬರಲ್ಲ ಆದರೆ ನಾವೇನು ಸನ್ಯಾಸಿಗಳಲ್ಲ. ಅಂಥ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ಕೂರಲ್ಲ. ಜಾತ್ಯತೀತ ಪಕ್ಷದ ನೆಲೆಯಲ್ಲಿ ನಮ್ಮ ಪ್ರಯತ್ನ ಮಾಡುತ್ತೇವೆ. ಮಹಾರಾಷ್ಟ್ರದಲ್ಲಿ ಅಣ್ಣ- ತಮ್ಮಂದಿರು ಹೊಡೆದಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಸಾಫ್ಟ್ ಆಗಿದ್ದೀನಿ ಅಂತೇನಿಲ್ಲ ಎಂದರು

ರೈತರ ಸಾಲಮನ್ನಾ ಪ್ರಸ್ತಾವ ಇಟ್ಟಾಗ ಕಾಂಗ್ರೆಸ್, ಬಿಜೆಪಿ ಅಪಹಾಸ್ಯ ಮಾಡಿದ್ದವು.  ಜೆಡಿಎಸ್ ಅಧಿಕಾರಕ್ಕೆ ಬಂದರಲ್ವಾ ಅಂತ ಮೂದಲಿಕೆ ಮಾತಾಡಿದ್ದರು ಆದರೆ, ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ ಮಾತ್ರ . ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 72 ಸಾವಿರ ಮಂದಿಗೆ ಸಾಲಮನ್ನಾ ಲಾಭ ಆಗಿದೆ. ಈ ಎರಡು ಜಿಲ್ಲೆಗಳಿಗೆ ಸಾಲಮನ್ನಾಕ್ಕಾಗಿ 580 ಕೋಟಿ ರೂ. ವ್ಯಯಿಸಲಾಗಿದೆ ಎಂದರು.

ಇದನ್ನೂ ಓದಿ : ವಿಧಿ ತುಮಕೂರಿಗೆ ಎಳೆದುಕೊಂಡು ಬಂದು ಚುನಾವಣೆಯಲ್ಲಿ ಸೋಲುವಂತೆ ಮಾಡಿತು; ದೇವೇಗೌಡ

ಆಯೋಧ್ಯ ರಾಮಜನ್ಮಭೂಮಿ ಪರ ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,  ಸುಪ್ರೀಂ ಕೋರ್ಟ್ ನ ನಿರ್ಧಾರವನ್ನು ಸ್ವಾಗತಿಸುತ್ತೇನೆ.  ಆದರೆ ಮಸೀದಿ ಒಡೆದಿರೋದು ತಪ್ಪು ಅಂತಾ ನ್ಯಾಯಾಲಯ ಹೇಳಿದೆ. ಮಸೀದಿ ಒಡೆದ ಆರೋಪಿಗಳನ್ನು ಖುಲಾಸೆ ಮಾಡಿದ್ದಾರೆ. ಮಸೀದಿಗೆ ಒಡೆದದ್ದಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಅಯೋದ್ಯೆ ತೀರ್ಪು ಹಿನ್ನೆಲೆಯಲ್ಲಿ ಸುಪ್ರೀಂನ ತೀರ್ಪನ್ನು ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಲಪಾದಿಸಿದ ಈ ದೇಶದ ಸಿದ್ದಾಂತ ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ ಅಂದಹಾಗೆ ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ. ಹೀಗಾಗಿ ರಾಮ‌ಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಿಕೊಡಲು ಶ್ರಮಿಸೋಣ ಟ್ವಿಟರ್ ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ

 

ಇದನ್ನೂ ಓದಿ : Ayodhya Verdict ; ಅಯೋಧ್ಯೆ ತೀರ್ಪು ಸ್ವಾಗತಿಸಿದ ವಿಶ್ವೇಶತೀರ್ಥ ಸ್ವಾಮೀಜಿ‌, ಸಿದ್ದಲಿಂಗ ಸ್ವಾಮೀಜಿ‌ 
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ