ಕೊಪ್ಪಳದಲ್ಲಿ ಆರಂಭವಾಗಿದೆ We Stand With Suresh ಕ್ಯಾಂಪೇನ್: ಏನಿದು ಅಭಿಯಾನ?

ಇಂಜನೀಯರ್ ಯುವಕನ ಪರವಾಗಿ ವಿ ಸ್ಟಾಂಡ್ ವಿಥ್ ಸುರೇಶ್ (We Stand With Suresh) ಎಂಬ ಅಭಿಯಾನ (Campaign) ಆರಂಭಿಸಿದ್ದಾರೆ. ಈ ಮಧ್ಯೆ ನಾವು ರಾಜಕಾರಣ ಮಾಡುತ್ತಿಲ್ಲ. ಮೊದಲು ನಮ್ಮ ರಸ್ತೆ ಸರಿ ಮಾಡಿ ಎಂದು ಕೊಪ್ಪಳದ ವಿವಿಧ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕೊಪ್ಪಳದ ಯುವಕ

ಕೊಪ್ಪಳದ ಯುವಕ

  • Share this:
ಕೊಪ್ಪಳ: ನಮ್ಮೂರಿಗೆ ರಸ್ತೆ  (Road) ಇಲ್ಲ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ (Social Media) ಅಪ್ಲೋಡ್ ಮಾಡಲಾಗಿತ್ತು. ಈ ಯುವಕನಿಗೆ ಪೊಲೀಸರು ಪ್ರಕರಣ ದಾಖಲಿಸಲಾಗುವುದು ಎಂಬ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ಬಗ್ಗೆ ನ್ಯೂಸ್ 18 ವರದಿ ಪ್ರಸಾರದ ವೇಳೆ ವಿಡಿಯೋ ಮಾಡಿದ ಯುವಕನಿಗೆ ತಲೆ ಸರಿ ಇಲ್ಲ ಎಂದು ಕನಕಗಿರಿ ಶಾಸಕ ಬಸವರಾಜ್  ದಡೇಸಗೂರು (MLA Basavaraj Dadesaguru) ಹೇಳಿದ್ದರು. ಈ ಪ್ರಕರಣದ ನಂತರ ಇಡೀ ರಾಜ್ಯದ ಯುವಕರು ರಸ್ತೆಯ ಬಗ್ಗೆ ವಿಡಿಯೋ ಮಾಡಿದ ಇಂಜನೀಯರ್ ಯುವಕನ ಪರವಾಗಿ ವಿ ಸ್ಟಾಂಡ್ ವಿಥ್ ಸುರೇಶ್ (We Stand With Suresh) ಎಂಬ ಅಭಿಯಾನ (Campaign) ಆರಂಭಿಸಿದ್ದಾರೆ. ಈ ಮಧ್ಯೆ ನಾವು ರಾಜಕಾರಣ ಮಾಡುತ್ತಿಲ್ಲ. ಮೊದಲು ನಮ್ಮ ರಸ್ತೆ ಸರಿ ಮಾಡಿ ಎಂದು ಕೊಪ್ಪಳದ ವಿವಿಧ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕೊಪ್ಪಳ ತಾಲೂಕಿನ ಕಾರಟಗಿ ತಾಲೂಕಿನ ಉಳೇನೂರು ಗ್ರಾಮಕ್ಕೆ ಸಂಪರ್ಕ ಒದಗಿಸುವ ರಸ್ತೆ ಸರಿ ಇರಲಿಲ್ಲ. ಕಳಪೆ ರಸ್ತೆಯನ್ನು ಕಂಡು ಬೆಂಗಳೂರಿನಲ್ಲಿ ಇಂಜನೀಯರ್ ಆಗಿರುವ ಸುರೇಶ್ ಎಂಬವರು ವಿಡಿಯೋ ಮಾಡಿದ್ದರು. ಆಗಸ್ಟ್ ತಿಂಗಳಲ್ಲಿ ಈ ರಸ್ತೆ ಸರಿ ಪಡಿಸಿ ಎಂದು ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಪ್ರತಿಭಟನೆ  ಸಹ ನಡೆಸಿದ್ದರು.

ವಿಡಿಯೋ ವೈರಲ್ ಬಳಿಕ ತೇಪೆ ಹಚ್ಚುವ ಕೆಲಸ!

ಈ ಸಂದರ್ಭದಲ್ಲಿ ಅಂದು ರಸ್ತೆಗೆ ಸ್ವಲ್ಪ ಮೆಟಲಿಂಗ್ ಮಾಡಿ ಕೈ ಬಿಟ್ಟಿದ್ದರು, ಮತ್ತೆ ಮೊದಲಿನಂತೆ ರಸ್ತೆಯಾಗಿದ್ದರಿಂದ ಇತ್ತೀಚಿಗೆ ಮತ್ತೆ ಸುರೇಶ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ, ಸಿಎಂ, ಲೋಕೋಪಯೋಗಿ ಇಲಾಖೆ ಸೇರಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಳುಹಿಸಿದ್ದರು.

ಪೊಲೀಸರಿಂದ ಬೆದರಿಕೆ ಆರೋಪ!

ಇದರ ನಂತರ ಕಾರಟಗಿ ಪೊಲೀಸರು ಎರಡು ದಿನಗಳ ಹಿಂದೆ ಸುರೇಶ್ ಮನೆಗೆ ಹೋಗಿ ಪೊಲೀಸ್ ಠಾಣೆಗೆ ಬರಬೇಕು. ಇಲ್ಲದಿದ್ದರೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಮನೆಗೆ ಪೊಲೀಸರು ಬಂದಿರೋದನ್ನು ಪ್ರಶ್ನಿಸಿ ಸುರೇಶ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ವಿಡಿಯೋ ವೈರಲ್ ಬಳಿಕ ಹಲವು ಫೋನ್ ಮಾಡಿದ್ದರಿಂದ ಪೊಲೀಸರು ಹಿಂದಿರುಗಿದ್ದರು.

ಇದನ್ನೂ ಓದಿ:  Weekend Curfew ಇರುತ್ತಾ? ಇರಲ್ವಾ?: ಎಲ್ಲರ ಚಿತ್ತ ಸಿಎಂ ಸಭೆಯತ್ತ!

ಸುರೇಶ್ ಮಡಿವಾಳದ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಇಂಜನೀಯರ್ ಆಗಿದ್ದಾರೆ. ಕಳೆದೆರಡು ವರ್ಷದಿಂದ ವರ್ಕ್ ಫ್ರಂ ಹೋಂ ನಿಂದಾಗಿ ಊರಿನಲ್ಲಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನಿತ್ಯ ಓಡಾಡುವ ಸಿದ್ದಾಪುರದಿಂದ ಉಳೇನೂರು ರಸ್ತೆ ಸರಿ ಇಲ್ಲದಿರುವದಕ್ಕೆ ಆಕ್ರೋಶಗೊಂಡು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.

ಈ ಪ್ರಕರಣದ ಬಗ್ಗೆ  ಜನವರಿ 19 ರಂದು ಮಾಧ್ಯಮಯೊಂದರ  ನೇರ ಪ್ರಸಾರದ ವೇಳೆ ವಿಡಿಯೋ ಮಾಡಿದ ಯುವಕನಿಗೆ ತಲೆ ಕೆಟ್ಟಿದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಹೇಳಿದ್ದರು.

ವಿ ಸ್ಟಾಂಡ್ ವಿಥ್ ಸುರೇಶ್ ಅಭಿಯಾನ

ಯುವಕನಿಗೆ ಪೊಲೀಸರ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಈಗ ಪೊಲೀಸರು ಸುಮ್ಮನೆ ಆಗಿದ್ದಾರೆ. ಈ ಘಟನೆಯು ಇಡೀ ರಾಜ್ಯದಲ್ಲಿ ಯುವಕರನ್ನು ಕೆರಳಿಸಿದ್ದು ವಿ ಸ್ಟಾಂಡ್ ವಿಥ್ ಸುರೇಶ್ ಎಂಬ ಅಭಿಯಾನ ಆರಂಭಿಸಿದ್ದಾರೆ.

ನೂರಾರು ಜನರು ಸುರೇಶ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಮಧ್ಯೆ ಸುರೇಶ್ ಹಾಗೂ ಆತನ ಸ್ನೇಹಿತರು ಕೊಪ್ಪಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಧಿಕಾರಿ, ಲೋಕಪಯೋಗ ಇಲಾಖೆ, ಸಂಸದರಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:  ರಾಜ್ಯಕ್ಕೆ GOOD NEWS: ಶಿರಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಕೇಂದ್ರದ ಗ್ರೀನ್​ಸಿಗ್ನಲ್​​

ನಮಗೆ ಶಾಸಕರು ಜರಿದರು ಪರವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ಸಿಕ್ಕಿದ್ದರು, ನಮಗೆ ಇದಕ್ಕಿಂತ ಮೊದಲು ನಮ್ಮೂರ ರಸ್ತೆ ಸರಿಯಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈಗಲಾದರೂ ಈ ರಸ್ತೆ ಸರಿಪಡಿಸಲಾಗುತ್ತದೆಯೋ ಕಾದು ನೋಡಬೇಕು.
Published by:Mahmadrafik K
First published: