‘ಡಿಕೆಶಿ ಬೆದರಿಕೆಗೆ ನಾವು ಬಗ್ಗಬಾರದು‘: ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್​​

ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಾ.ಸಿ.ಎನ್.ಅಶ್ವತ್ ನಾರಾಯಣ್​​ ಪ್ರಸ್ತಾಪಿಸಿದ ಈ ವಿಷಯಕ್ಕೆ ಎಲ್ಲಾ ಮಂತ್ರಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬೆದರಿಕೆಗೆ ಕೇರ್​ ಮಾಡಬೇಡಿ ಎಂದು ಸಚಿವರು ಸಿಎಂ ಬಿ.ಎಸ್​​ ಯಡಿಯೂರಪ್ಪ ಅವರಿಗೂ ಮನವಿ ಮಾಡಿದ್ದಾರೆ.

news18-kannada
Updated:October 31, 2019, 4:54 PM IST
‘ಡಿಕೆಶಿ ಬೆದರಿಕೆಗೆ ನಾವು ಬಗ್ಗಬಾರದು‘: ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್​​
ಅಶ್ವಥ್​ ನಾರಾಯಣ್​-ಡಿಕೆಶಿವಕುಮಾರ್
  • Share this:
ಬೆಂಗಳೂರು(ಅ.31): ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಬೆದರಿಕೆಗೆ ನಾವು ಹೆದರಬಾರದು ಎಂದು ಡಿಸಿಎಂ ಅಶ್ವಥ್​​ ನಾರಾಯಣ್​​ ಖಡಕ್ಕಾಗಿಯೇ ಹೇಳಿದ್ದಾರೆ. ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾತಾಡಿದ ಡಿಸಿಎಂ, "ಡಿಕೆಶಿ ಬೆದರಿಕೆಗೆ ಯಾರು ಬಗ್ಗಬಾರದು. ಯಾವುದೇ ಬೆದರಿಕೆಗೂ ಬಗ್ಗದೇ ಡೋಂಟ್ ಕೇರ್ ಎನ್ನುವ ಮನೋಭಾವ ಇರಿಸಿಕೊಳ್ಳೋಣ" ಎಂದಿದ್ದಾರೆ.

"ಯಾವುದೇ ಕಾರಣಕ್ಕೂ ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಡಬಾರದು. ನಿಯಾಮವಳಿ ಪ್ರಕಾರ ತಾಲ್ಲೂಕಿಗೊಂದು ಮೆಡಿಕಲ್ ಕಾಲೇಜು ಕೊಡುವಂತಿಲ್ಲ. ಡಿಕೆಶಿ ಏನೇ ಬೆದರಿಕೆ ಹಾಕಲಿ, ಉಪವಾಸ ಕೂರಲಿ, ನಾವ್ ಕೇರ್ ಮಾಡಬಾರದು. ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ  ವಿಚಾರದಲ್ಲಿ ನಾವು ಹಿಂದೆ ಸರಿಯಲೇಬಾರದು" ಎಂದು ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಅಶ್ವಥ್​​ ನಾರಾಯಣ್​​ ಹೇಳಿದ್ಧಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಸಂಪುಟ ಒಗ್ಗಟ್ಟು ಪ್ರದರ್ಶನ ಮಾಡುವ ತೀರ್ಮಾನಕ್ಕೆ ಬಂದಿದೆ.

ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಾ.ಸಿ.ಎನ್.ಅಶ್ವತ್ ನಾರಾಯಣ್​​ ಪ್ರಸ್ತಾಪಿಸಿದ ಈ ವಿಷಯಕ್ಕೆ ಎಲ್ಲಾ ಮಂತ್ರಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬೆದರಿಕೆಗೆ ಕೇರ್​ ಮಾಡಬೇಡಿ ಎಂದು ಸಚಿವರು ಸಿಎಂ ಬಿ.ಎಸ್​​ ಯಡಿಯೂರಪ್ಪ ಅವರಿಗೂ ಮನವಿ ಮಾಡಿದ್ದಾರೆ. ಈ ವೇಳೆ ತಾನು ಸಚಿವ ಸಂಪುಟ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಸಿಎಂ ಮಾತು ನೀಡಿದ್ದಾರೆನ್ನಲಾಗಿದೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಕನಸಿಗೆ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇತಿಶ್ರೀ ಹಾಡಿದೆ. ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಈಗ ದೊಡ್ಡಬಳ್ಳಾಪುರದ ಪಾಲಾಗಿದೆ. ಅನರ್ಹ ಶಾಸಕ ಡಾ. ಸುಧಾಕರ್​​ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಕನಕಪುರ ಮೆಡಿಕಲ್ ಕಾಲೇಜು ದೊಡ್ಡಬಳ್ಳಾಪುರಕ್ಕೆ ಶಿಫ್ಟ್​​​ ಮಾಡಿದೆ. ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಡಿಕೆಶಿ ಕನಸು ಭಗ್ನ: ಸುಧಾಕರ್​​​ ಒತ್ತಾಯಕ್ಕೆ ಮಣಿದ ಸರ್ಕಾರ: ಕನಕಪುರ ಮೆಡಿಕಲ್​​​​​​ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್

ಕಳೆದ ಮೈತ್ರಿ ಸರ್ಕಾರದ ಬಜೆಟ್​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕನಕಪುರ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು. ಅಲ್ಲದೆ, ಈ ಯೋಜನೆಗೆ ಸಾವಿರಾರು ಕೋಟಿ ಅನುದಾನವನ್ನೂ ಸಹ ತೆಗೆದಿಟ್ಟಿದ್ದರು. ಆದರೆ, ಇದೀಗ ಸಿಎಂ ಬಿ.ಎಸ್. ಯಡಿಯೂರಪ್ಪ ಈ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡುವ ಮೂಲಕ ಡಿಕೆಶಿ ಕನಸು ಭಗ್ನ ಮಾಡಿದೆ.

ಈ ಹಿಂದೆಯೇ ಮೆಡಿಕಲ್ ಕಾಲೇಜನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಚಿಕ್ಕಬಳ್ಳಾಪುರದಲ್ಲೇ ನಿರ್ಮಾಣ ಮಾಡಬೇಕು. ಈ ಹಿಂದೆ ಸರ್ಕಾರ ನಿಗದಿ ಮಾಡಿದಂತೆ ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕು. ಯಾವುದೇ ಕಾರಣಕ್ಕೂ ಡಿಕೆಶಿ ಮಾತಿಗೆ ಮನ್ನಣೆ ಕೊಡದೆ, ಈ ಹಿಂದೆ ಮಾಡಿದ ನಿರ್ಧಾರವನ್ನು ಮುಂದುವರೆಸುವಂತೆ ಕೆ.ಸುಧಾಕರ್ ಅವರು ಸಿಎಂ ಬಿಎಸ್​ವೈಗೆ ಒತ್ತಾಯಪೂರ್ವಕ ಮನವಿ ಮಾಡಿದ್ದರು.ಇದಕ್ಕೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಸರ್ಕಾರದಿಂದ ತೀರ್ಮಾನ ಆಗಿದೆ. ಈಗ ಯಾರೋ‌ ಹೇಳ್ತಾರೆ ಅಂತಾ ಅದನ್ನು ಮತ್ತೆ ಬೇರೆಡೆಗೆ ಸ್ಥಳಾಂತರ ಮಾಡೋಕೆ ಆಗುವುದಿಲ್ಲ. ನೀವು ಏನು ಚಿಂತೆ ಮಾಡಬೇಡಿ, ನಿಮ್ಮ ಕ್ಷೇತ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ಆಗಲಿದೆ. ಇದಕ್ಕೆ ಸರ್ಕಾರ ಬದ್ದವಿದೆ ಎಂದು ಸಿಎಂ ಯಡಿಯೂರಪ್ಪ ಅನರ್ಹ ಶಾಸಕ ಸುಧಾಕರ್​​ಗೆ ಭರವಸೆ ನೀಡಿದ್ದರು.
------
First published: October 31, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading