News18 India World Cup 2019

'ಪಟಾಕಿ ಹೊಡೆಯೋಕೆ ಆತುರ ಮಾಡಬಾರದು'; ಚುನಾವಣೋತ್ತರ ಸಮೀಕ್ಷೆ ನಂಬಲ್ಲ ಎಂದ ಮೈತ್ರಿ ನಾಯಕರು

ಕರ್ನಾಟಕದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಬಿಜೆಪಿ ಬರೋಬ್ಬರಿ 15-25 ಸ್ಥಾನಗಳನ್ನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದು ಮೈತ್ರಿ ಸರ್ಕಾರಕ್ಕೆ ಆತಂಕ ತಂದಿದೆ.

Rajesh Duggumane | news18
Updated:May 20, 2019, 8:03 AM IST
'ಪಟಾಕಿ ಹೊಡೆಯೋಕೆ ಆತುರ ಮಾಡಬಾರದು'; ಚುನಾವಣೋತ್ತರ ಸಮೀಕ್ಷೆ ನಂಬಲ್ಲ ಎಂದ ಮೈತ್ರಿ ನಾಯಕರು
ಸಚಿವ ಆರ್​ ವಿ ದೇಶಪಾಂಡೆ
Rajesh Duggumane | news18
Updated: May 20, 2019, 8:03 AM IST
ಬೆಂಗಳೂರು (ಮೇ 20): ರಾಜ್ಯದ 28 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆ ಮೈತ್ರಿ ಸರ್ಕಾರವನ್ನು ಆತಂಕಕ್ಕೆ ಈಡು ಮಾಡಿವೆ. ಎಕ್ಸಿಟ್​ ಪೋಲ್​ ವಿಚಾರಕ್ಕೆ ಸಂಬಂಧಿಸಿ ಮೈತ್ರಿ ನಾಯಕರು ಮೌನ ಮುರಿದಿದ್ದು, ಈ ಸಮೀಕ್ಷೆಗಳು ಎಲ್ಲ ಬಾರಿಯೂ ಕರಾರುವಕ್​ ಆಗಿರುವುದಿಲ್ಲ ಎಂದು ಹೇಳಿದ್ದಾರೆ.

ಗದಗದಲ್ಲಿ ಮಾತನಾಡಿದ ಸಚಿವ ಆರ್.ವಿ ದೇಶಪಾಂಡೆ, “ಎಲ್ಲಾ ಚುನಾವಣೋತ್ತರ ಸಮೀಕ್ಷೆಯೂ ಸರಿಯಾಗಿ ಇರುವುದಿಲ್ಲ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಬಿಜೆಪಿಗೆ ಎಷ್ಟು ಸ್ಥಾನ ಬರುತ್ತದೆ ಎಂದು ಹೇಳಿದ್ದರೋ ಅದಕ್ಕಿಂತ ಹೆಚ್ಚು ಸ್ಥಾನಗಳು ಬಂದಿದ್ದವು. ರಾಜಸ್ಥಾನ, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳಲ್ಲಿ ಸಮೀಕ್ಷೆಯ ಲೆಕ್ಕಾಚಾರ ಅದಲು ಬದಲಾಗಿತ್ತು. ಎಕ್ಸಿಟ್ ಪೋಲ್​ ಮೇಲೆ ಡಿಪೆಂಡ್ ಆಗೋದಾದರೆ ಕೌಂಟಿಂಗ್ ಮಾಡುವ ಅವಶ್ಯಕತೆಯೇ ಇಲ್ಲ. ಸಮೀಕ್ಷೆ ನೋಡಿಯೇ ಫಲಿತಾಂಶ ಪ್ರಕಟಿಸಿ ಬಿಡೋಣ,” ಎಂದಿದ್ದಾರೆ. ಈ ಮೂಲಕ ತಾವು ಚುನಾವಣೋತ್ತರ ಸಮೀಕ್ಷೆಯನ್ನು ನಂಬುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ರಾಜಕಾರಣಗಳಿಗೆ ಹೆಚ್ಚು ತಾಳ್ಮೆ ಬೇಕು ಎಂದಿರುವ ಅವರು, “ಪಟಾಕಿ ಹೊಡೆಯೋಕೆ ಯಾವಾಗಲೂ ಆತುರ ಮಾಡಬಾರದು. ರಾಜಕಾರಣಿಗಳಿಗೆ ಹೆಚ್ಚು ತಾಳ್ಮೆ ಬೇಕು. ಮೇ 23ರಂದು ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ. ಆಗ ಮಾತನಾಡುತ್ತೇನೆ,” ಎಂದರು.

ಇದನ್ನೂ ಓದಿ:  ರಾಜ್ಯದಲ್ಲಿ ಯಾರೆಷ್ಟು ಗೆಲ್ಲಬಹುದು? ವಿವಿಧ ಸಮೀಕ್ಷೆಗಳು ಏನು ಹೇಳುತ್ತವೆ? ಮಂಡ್ಯದಲ್ಲಿ ಸುಮಲತಾ ಗೆಲ್ಲಬಹುದೆನ್ನುತ್ತೆ ಸಿವೋಟರ್

ಕರ್ನಾಟಕದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಬಿಜೆಪಿ ಬರೋಬ್ಬರಿ 15-25 ಸ್ಥಾನಗಳನ್ನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ನ್ಯೂಸ್18 ಮತ್ತು IPSOS ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 21-23 ಸ್ಥಾನ ಸಿಗಬಹುದೆಂದು ನಂಬಲಾಗಿದೆ. ಎಬಿಪಿ ನೀಲ್ಸನ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 15 ಮತ್ತು ಮೈತ್ರಿಪಕ್ಷಕ್ಕೆ 13 ಸ್ಥಾನ ಸಿಗುವ ನಿರೀಕ್ಷೆ ಇದೆ.

ಇನ್ನು, ಕೌಶಲ್ಯಾಭಿವೃದ್ಧಿ  ಮತ್ತು ಮುಜರಾಯಿ ಸಚಿವ ಪಿ.ಟಿ ಪರಮೇಶ್ವರ ನಾಯಕ್ ಮಾತನಾಡಿದ್ದು, “ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಯಲ್ಲಿ ನಾನು ಸೋಲುತ್ತೇನೆ ಎಂದಿದ್ದರು. ಆದರೆ ನಾನು ಗೆದ್ದಿದ್ದೇನೆ. ಸಮೀಕ್ಷೆ ಆಧಾರವಾಗಿಟ್ಟುಕೊಳ್ಳುವುದು ಅಷ್ಟು ಸಮಂಜಸವಲ್ಲ. ಜನ ಏನು ತೀರ್ಮಾನ ಮಾಡುತ್ತಾರೋ ಆ ತೀರ್ಪಿಗೆ ನಾವು ತಲೆ ಬಾಗಬೇಕಾಗುತ್ತದೆ,” ಎಂದರು.
Loading...

ಇದನ್ನೂ ಓದಿ: Lok Sabha Elections Exit Polls: ಇಲ್ಲಿದೆ 11 ಮತಗಟ್ಟೆ ಸಮೀಕ್ಷೆಗಳ ಪಟ್ಟಿ; ಎನ್​ಡಿಎ ಗೆಲುವು ಬಹುತೇಕ ಖಚಿತ?

First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...