ಉಪಚುನಾವಣೆ ಮೋದಿ ಹೆಸರಿನಲ್ಲಿ ನಡೆಯಲಿದೆ; ಪ್ರಧಾನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕಬೇಕು; ಎಚ್​​.ಡಿ ದೇವೇಗೌಡ

ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ದಿನಾಂಕ ನಿಗದಿ ಮಾಡಿದೆ. ಇದೇ ತಿಂಗಳು ಅಕ್ಟೋಬರ್​​ 21ಕ್ಕೆ ನಡೆಯಲಿರುವ ಈ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿಯೂ ಮಾಜಿ ಪ್ರಧಾನಿ ದೇವೇಗೌಡರು ಘೋಷಿಸಿದ್ದಾರೆ.

news18-kannada
Updated:October 16, 2019, 5:01 PM IST
ಉಪಚುನಾವಣೆ ಮೋದಿ ಹೆಸರಿನಲ್ಲಿ ನಡೆಯಲಿದೆ; ಪ್ರಧಾನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕಬೇಕು; ಎಚ್​​.ಡಿ ದೇವೇಗೌಡ
ದೇವೇಗೌಡ- ಮೋದಿ
news18-kannada
Updated: October 16, 2019, 5:01 PM IST
ಬೆಂಗಳೂರು(ಅ.16): "ಕರ್ನಾಟಕ ವಿಧಾನಸಭಾ ಉಪಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲೇ ನಡೆಯಲಿದೆ. ಈ ಉಪಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕಬೇಕು" ಎನ್ನುವ ಮೂಲಕ ಮಾಜಿ ಪ್ರಧಾನಿ ಎಚ್​​.ಡಿ ದೇವೇಗೌಡರು ಅಚ್ಚರಿ ಮೂಡಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಪ್ರಧಾನಿ ಎಚ್​​.ಡಿ ದೇವೇಗೌಡರು, ಕರ್ನಾಟಕ ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಚುನಾವಣೆಯೂ ಮೋದಿ ಹೆಸರಿನಲ್ಲೇ ನಡೆಯಲಿದೆ. ನಾನು ಮಾಜಿ ಪ್ರಧಾನಿ ಎಂಬುದು ಎಷ್ಟೋ ಜನರಿಗೆ ಮರೆತು ಹೋಗಿದೆ. ಹಾಗಾಗಿ ಪ್ರಧಾನಿ ಮೋದಿಯನ್ನು ಎದುರಿಸಲು ಸಮರ್ಥವಾದ ನಾಯಕ ಬೇಕಿದೆ ಎಂದು ತಿಳಿಸಿದ್ದಾರೆ.

ಇನ್ನು, ಎಷ್ಟು ಮಂದಿ ಅನರ್ಹ ಶಾಸಕರು ಗೆಲ್ಲಲಿದ್ದಾರೋ ಎಂದು ಗೊತ್ತಿಲ್ಲ. ಉಪಚುನಾವಣೆ ನಂತರ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇರುತ್ತೋ, ಇಲ್ಲವೋ ಎಂದು ಖಾತ್ರಿಯಿಲ್ಲ. ನಮ್ಮದು ಪ್ರಾದೇಶಿಕ, ರಾಷ್ಟ್ರೀಯ ಪಕ್ಷವಲ್ಲ ಎಂದು ಜೆಡಿಎಸ್​​ ವರಿಷ್ಠ ದೇವೇಗೌಡರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಉಪಚುನಾವಣೆಯಲ್ಲಿ ಪರೋಕ್ಷವಾಗಿ ಬಿಜೆಪಿಗೆ ಹೆಚ್ಚಿನ ಲಾಭ ಇದೆ ಎಂದು ಹೇಳಿದ್ದಾರೆ.

ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ದಿನಾಂಕ ನಿಗದಿ ಮಾಡಿದೆ. ಇದೇ ತಿಂಗಳು ಅಕ್ಟೋಬರ್​​ 21ಕ್ಕೆ ನಡೆಯಲಿರುವ ಈ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿಯೂ ಮಾಜಿ ಪ್ರಧಾನಿ ದೇವೇಗೌಡರು ಘೋಷಿಸಿದ್ದಾರೆ.

ಈ ಹಿಂದೆಯೇ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಮನಗಂಡಿದ್ದ ದೇವೇಗೌಡರು, ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆಗೆ ಸೋನಿಯಾ ಗಾಂಧಿಯವರ ಕದ ತಟ್ಟಿದ್ದರು. ನಾವು ಪ್ರತ್ಯೇಕವಾಗಿ ಚುನಾವಣೆಗೆ ಹೋದರೆ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ಫಲಿತಾಂಶಕ್ಕಾಗಿ ಮೈತ್ರಿ ಮಾಡಿಕೊಳ್ಳೋಣ ಎಂದು ಗೌಡರು ಮತ್ತೊಮ್ಮೆ ಕಾಂಗ್ರೆಸ್​ಗೆ ಸ್ನೇಹ ಹಸ್ತ ಚಾಚಿದ್ದರು.

ಇದನ್ನೂ ಓದಿ: ನಾನು ಕುರುಬ ಎಂದು ಹೀಗೆ ಸಾರಾ ಮಹೇಶ್​​​ ಹಿಂಸೆ ನೀಡುತ್ತಿದ್ದಾರೆ: ಅನರ್ಹ ಶಾಸಕ ಎಚ್​​. ವಿಶ್ವನಾಥ್​​

ಆದರೆ, ಇಲ್ಲಿಯವರೆಗೂ ಜೆಡಿಎಸ್​​ ಜೊತೆಗಿನ ಮೈತ್ರಿ ಬಗ್ಗೆ ಕಾಂಗ್ರೆಸ್​ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಜೆಡಿಎಸ್​​ ವರಿಷ್ಠ ದೇವೇಗೌಡರು ಕಾಂಗ್ರೆಸ್​​ ಹೈಕಮಾಂಡ್​​ಗೆ ಮನವರಿಕೆ ಮಾಡಲು ಮುಂದಾದರೂ, ಸೋನಿಯಾ ಗಾಂಧಿ ಯಾವುದೇ ಗ್ರೀನ್​​ ಸಿಗ್ನಲ್ ನೀಡಿಲ್ಲ ಎಂದು ನ್ಯೂಸ್​​-18 ಕನ್ನಡಕ್ಕೆ ತಿಳಿದು ಬಂದಿದೆ.
Loading...

ರಾಜ್ಯದ 17 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಚುನಾವಣೆ ಆಯೋಗ ಉಪಚುನಾವಣೆ ಘೋಷಿಸಿದೆ. ಸುಪ್ರೀಂಕೋರ್ಟ್​ನಲ್ಲಿ ತಮ್ಮ ಪ್ರಕರಣ ಇತ್ಯರ್ಥವಾಗದೇ ಉಪ ಚುನಾವಣೆ ನಡೆಯುವುದಿಲ್ಲ ಎಂದು ಬಲವಾಗಿ ನಂಬಿಕೊಂಡಿದ್ದ ಅನರ್ಹ ಶಾಸಕರಿಗೆ ಚುನಾವಣಾ ಆಯೋಗ ಅನಿರೀಕ್ಷಿತ ಶಾಕ್ ಕೊಟ್ಟಿದೆ. 17 ಕ್ಷೇತ್ರಗಳ ಪೈಕಿ ಮಸ್ಕಿ ಮತ್ತು ಆರ್.ಆರ್. ನಗರ ಹೊರತುಪಡಿಸಿ ಉಳಿದ 15ರಲ್ಲಿ ಅ. 21ರಂದು ಉಪಚುನಾವಣೆ ನಡೆಸುವುದಾಗಿ ಆಯೋಗ ತಿಳಿಸಿದೆ. ಸುಪ್ರೀಂ ತೀರ್ಪು ಬರುವವರೆಗೂ ಉಪಚುನಾವಣೆ ನಡೆಸಬಾರದೆಂದು ಚುನಾವಣಾ ಆಯೋಗಕ್ಕೂ ಮನವಿ ಮಾಡಿಕೊಂಡಿದ್ದ ಅನರ್ಹ ಶಾಸಕರಿಗೆ ಇದೀಗ ಚುನಾವಣೆ ಘೋಷಣೆ ನುಂಗಲಾರದ ತುತ್ತಾಗಿ ಭಾಸವಾಗಿದೆ.
-----------
First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...