ಇನ್ನೂ ದೊಡ್ಡವರಿಗೂ ನಾವು ಕೈ ಹಾಕಿದ್ದೇವೆ, ರಾಜಕಾರಣದಲ್ಲಿ ಇದೆಲ್ಲ ಇದ್ದಿದ್ದೇ; ಬಿಜೆಪಿ ಶಾಸಕ ಸಿ.ಟಿ. ರವಿ

ಜಮೀರ್ ಅಹಮದ್​ ಖಾನ್​, ಬಾಲಕೃಷ್ಣ ಅವರನ್ನೆಲ್ಲ ಯಾರೂ ದುಡ್ಡು ಕೊಟ್ಟು ಕರೆದುಕೊಂಡು ಬರಲಿಲ್ಲ. ಅವರೆಲ್ಲ ಕಾಂಗ್ರೆಸ್​ನವರ ಮುಖ ನೋಡಿ ಪ್ರಭಾವಿತರಾಗಿ ಪಕ್ಷಕ್ಕೆ ಬಂದವರು. ಹಾಗಾಗಿ, ಕಾಂಗ್ರೆಸ್​ನವರು ಯಡಿಯೂರಪ್ಪನವರ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

sushma chakre | news18
Updated:February 11, 2019, 1:17 PM IST
ಇನ್ನೂ ದೊಡ್ಡವರಿಗೂ ನಾವು ಕೈ ಹಾಕಿದ್ದೇವೆ, ರಾಜಕಾರಣದಲ್ಲಿ ಇದೆಲ್ಲ ಇದ್ದಿದ್ದೇ; ಬಿಜೆಪಿ ಶಾಸಕ ಸಿ.ಟಿ. ರವಿ
ಸಿ.ಟಿ. ರವಿ
sushma chakre | news18
Updated: February 11, 2019, 1:17 PM IST
ಬೆಂಗಳೂರು (ಫೆ.11): ರಾಜಕಾರಣ ಎಂದಮೇಲೆ ಇದೆಲ್ಲವೂ ಇದ್ದಿದ್ದೇ. ನಾವು ಇನ್ನೂ ದೊಡ್ಡವರಿಗೂ ಕೈ ಹಾಕಿದ್ದೇವೆ. ದೊಡ್ಡವರ ಜೊತೆಗೂ ಮಾತುಕತೆ ನಡೆದಿದೆ. ಅದೆಲ್ಲ ಬಹಿರಂಗವಾಗಿಲ್ಲ ಅಷ್ಟೇ. ಇಲ್ಲಿ ಯಾವ ಪಕ್ಷದವರೂ ಸಾಚಾ ಅಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪನವರು ಆಮಿಷವೊಡ್ಡಿದ ಆಡಿಯೋ ರಿಲೀಸ್​ ಮಾಡಿದ ನಂತರ ಕಾಂಗ್ರೆಸ್​-ಜೆಡಿಎಸ್​ ನಾಯಕರು ಯಡಿಯೂರಪ್ಪನವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕುರಿತು ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪನವರ ರಾಜೀನಾಮೆ ಕೇಳಲು ಕಾಂಗ್ರೆಸ್​-ಜೆಡಿಎಸ್​ ನಾಯಕರಿಗಲ್ಲದೆ ಬೇರಾರಿಗೂ ನೈತಿಕತೆಯಿಲ್ಲ. ಅವರು ನೈತಿಕತೆಯ ಉತ್ತುಂಗದಲ್ಲಿದ್ದಾರೆ. ನೈತಿಕ ರಾಜಕಾರಣ ಮಾಡುವುದು ಹೇಗೆಂಬುದನ್ನು ಅವರನ್ನು ನೋಡಿ ಕಲಿಯಬೇಕು ಎಂದು ಟೀಕಿಸಿದ್ದಾರೆ.

ಚಾರಿತ್ರ್ಯವಧೆ ಮಾಡಿದ್ರೆ ಅದು ಸಾವಿಗಿಂತ ಕ್ರೂರ; ಭಾವುಕರಾದ ಸ್ಪೀಕರ್​ ರಮೇಶ್​ ಕುಮಾರ್​

1983ರಲ್ಲಿ ಕಾಂಗ್ರೆಸೇತರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ ವೀರಪ್ಪ ಮೊಯ್ಲಿ ಅವರು ಸಿ. ಬೈರೇಗೌಡ ಅವರನ್ನು 5 ಲಕ್ಷ ಹಣ ನೀಡಿ ತಮ್ಮೆಡೆಗೆ ಸೆಳೆದುಕೊಂಡರು. ಅದು ಮೊಯ್ಲಿ ಟೇಪ್​ ಹಗರಣ ಎಂದು ಪ್ರಖ್ಯಾತವಾಯಿತು. ಹಾಗೇ, ಜಮೀರ್ ಅಹಮದ್​ ಖಾನ್​, ಬಾಲಕೃಷ್ಣ ಅವರನ್ನೆಲ್ಲ ಯಾರೂ ದುಡ್ಡು ಕೊಟ್ಟು ಕರೆದುಕೊಂಡು ಬರಲಿಲ್ಲ. ಅವರೆಲ್ಲ ಕಾಂಗ್ರೆಸ್​ನವರ ಮುಖ ನೋಡಿ ಪ್ರಭಾವಿತರಾಗಿ ಪಕ್ಷಕ್ಕೆ ಬಂದವರು. ಹಾಗಾಗಿ, ಅವರು ಯಡಿಯೂರಪ್ಪನವರ ರಾಜೀನಾಮೆ ಕೇಳುತ್ತಿದ್ದಾರೆ. ಅವರ ಟ್ರ್ಯಾಕ್​ ರೆಕಾರ್ಡ್​ ಬಹಳ ಹಿಂದಿನಿಂದಲೂ ಇರುವುದರಿಂದ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ಅತೃಪ್ತರಿಗೆ ಆಪತ್ತು; ನಾಲ್ವರು ರೆಬೆಲ್ ಶಾಸಕರ ಅನರ್ಹತೆಗೆ ಕೋರಿ ಸಿದ್ದರಾಮಯ್ಯ ದೂರು

ಬಿಜೆಪಿ ರೆಬೆಲ್​ ಶಾಸಕರನ್ನು ಜೆಡಿಎಸ್​ನವರು ಗೋವಾಗೆ ಕರೆದುಕೊಂಡು ಹೋಗಲಿಲ್ಲ, ಚೆನ್ನೈಗೂ ಕರೆದುಕೊಂಡು ಹೋಗಲಿಲ್ಲ. ಅವರು ನೈತಿಕತೆಯ ಉನ್ನತ ಸ್ಥಿತಿಯಲ್ಲಿದ್ದಾರೆ. ಅವರ ಕುಟುಂಬದೊಳಗಿನ ಸಮಸ್ಯೆಗೇ ಇನ್ನೂ ಪರಿಹಾರ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಇದೇ ದೇವೇಗೌಡರು ಸಿದ್ದರಾಮಯ್ಯನವರಂಥ ಕೆಟ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದು ಹೇಳಿದ್ದರು. ಈಗ ಅವರೇ ಸಿದ್ದರಾಮಯ್ಯನವರ ಜೊತೆಗೆ ಕೈಜೋಡಿಸಿಲ್ಲವೇ? ರಾಜಕಾರಣದಲ್ಲಿ ಎಲ್ಲವೂ ಸಾಧ್ಯ. ನಾವು ಇನ್ನೂ ದೊಡ್ಡ ನಾಯಕರಿಗೇ ಕೈಹಾಕಿದ್ದೇವೆ. ಅದೆಲ್ಲವೂ ಬಹಿರಂಗವಾಗಿಲ್ಲ. ಕಾಂಗ್ರೆಸ್​ನವರೂ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...