Malali Mosque: ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ: ಮಜೀದ್ ಹೇಳಿಕೆಗೆ ಮುತಾಲಿಕ್ ತಿರುಗೇಟು

ಸೊಕ್ಕಿನ ಮಾತು ಬಿಡಿ. ಮೇಲೆ ನಿಮ್ಮ ಅಪ್ಪ ಕೂತಿದ್ದಾನೆ. ಪ್ರಚೋದನೆಗೆ ದಾರಿ ಮಾಡಿಕೊಡುತ್ತಿದೆ ಅವರ ಮಾತು. ನಮ್ಮ ಧರ್ಮದ ಸಂಪ್ರದಾಯದ ತಾಂಬೂಲ ಪ್ರಶ್ನೆ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಾಲಿಗೆ ಸೀಳು ಹಾಕುತ್ತೇವೆ ಎಂದು ಕಿಡಿಕಾರಿದರು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
Malali Jumma Mosque: ಮಳಲಿಯ ಜುಮ್ಮಾ ಮಸೀದಿಯನ್ನು ದೇವಸ್ಥಾನ ಮಾಡುವುದು ಕನಸಿನ ಮಾತು ಎಂಬ SDPI ಅಧ್ಯಕ್ಷ ಅಬ್ದುಲ್ ಮಜೀದ್ (SDPI State President Abdul Majeed) ಹೇಳಿಕೆಗೆ ಮೈಸೂರಿನಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Mutalik) ಪ್ರತಿಕ್ರಿಯಿಸಿದರು. ಮಳಲಿಯ ಸಂಪೂರ್ಣ ದೇವಸ್ಥಾನವನ್ನು (Temple) ಕಾನೂನಿನ ಪ್ರಕಾರವೇ ಪಡೆಯುತ್ತೇವೆ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಸೌಹಾರ್ದಯತೆ ಬದುಕುವ ಆಸೆ ಇದ್ದರೆ ಕಬಳಿಸಿರುವ ದೇವಸ್ಥಾನ ವಾಪಾಸ್ ಕೊಡಿ. ಇದು ಯಾರ ಅಪ್ಪನ ಸೊತ್ತು ಅಲ್ಲ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಹೇಳಿದ್ದಾರೆ. ಇದು ನಮ್ಮ ಅಪ್ಪನದೇ ಏನಿವಾಗ ಎಂದು ಪ್ರಶ್ನೆ ಮಾಡಿದರು.

ಸೊಕ್ಕಿನ ಮಾತು ಬಿಡಿ. ಮೇಲೆ ನಿಮ್ಮ ಅಪ್ಪ ಕೂತಿದ್ದಾನೆ. ಪ್ರಚೋದನೆಗೆ ದಾರಿ ಮಾಡಿಕೊಡುತ್ತಿದೆ ಅವರ ಮಾತು. ನಮ್ಮ ಧರ್ಮದ ಸಂಪ್ರದಾಯದ ತಾಂಬೂಲ ಪ್ರಶ್ನೆ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಾಲಿಗೆ ಸೀಳು ಹಾಕುತ್ತೇವೆ ಎಂದು ಕಿಡಿಕಾರಿದರು.

ಎಲ್ಲಾ ದೇವಸ್ಥಾನ ವಾಪಸ್ ಪಡೆಯುತ್ತೇವೆ

ಇಂತಹ ಮಾತು ಆಡುತ್ತಿರುವ ವ್ಯಕ್ತಿ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ಮಜೀದ್ ಹೇಳಿಕೆ ಖಂಡಿಸುತ್ತೇನೆ. ಹಿಂದೂ ದೇವಸ್ಥಾನ ವೀರಶೈವ ಮಠ. ಅಲ್ಲಿನ ಪರಿಸ್ಥಿತಿ ನೋಡಿದರೆ ಅದು ದೇವಸ್ಥಾನ ಅನ್ನೋದು ಗೊತ್ತಾಗುತ್ತೆ. ಇದು ಗಲಭೆ ಪ್ರಚೋದನೆಗಾಗಿ ಕೆರಳಿಸುವ ಹೇಳಿಕೆ. ಬರಿ ಮಳಲಿ ದೇವಸ್ಥಾನ ಅಲ್ಲ ದೇಶದ ಎಲ್ಲಾ ದೇವಸ್ಥಾನ ವಾಪಸ್ಸು ಪಡೆಯುತ್ತೇವೆ ಎಂದು ಗುಡುಗಿದರು.

ಇದನ್ನೂ ಓದಿ:  Malali Mosque: ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು: SDPI ರಾಜ್ಯಾಧ್ಯಕ್ಷ

ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ

ಅಯೋಧ್ಯೆಗೂ ಇದೇ ಹೇಳಿದ್ದಿರಿ, ರಕ್ತಪಾತ ಆಗುತ್ತೇ ಅಂತ ಹೇಳಿದ್ದೀರಿ. ಈಗ ಏನಾಯ್ತು ಅದನ್ನು ಕಟ್ಟುತ್ತಿದ್ದೇವೆ ಏನು ಮಾಡಿದ್ರಿ ? ಉದ್ದಟತನ ಸೊಕ್ಕಿನ ಮಾತು ಇನ್ನು ಮೇಲೆ ನಡೆಯುವುದಿಲ್ಲ. ಮೇಲೆ ನಿಮ್ಮ ಅಪ್ಪ ಕುಳಿತಿದ್ದಾನೆ. ಸಂವಿಧಾನದ ಆಧಾರದ ಮೇಲೆ ಪಡೆಯುತ್ತೇವೆ. ಇಲ್ಲಿನ ಮುಸ್ಲಿಂರಲ್ಲಿ ಹಿಂದೂ ರಕ್ತ ಇದೆ. ನೀವು ಎಲ್ಲೂ ಹೋಗಬೇಡಿ ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ ಎಂದರು.

ಮುಸ್ಲಿಮರು ಹತಾಶರಾಗಿದ್ದಾರೆ

30 ಸಾವಿರ ದೇವಸ್ಥಾನ  ಒಡೆದು ಮಸೀದಿ ಕಟ್ಟಿದ್ದಿರಿ ಅಷ್ಟನ್ನು ವಾಪಸ್ಸು ಪಡೆಯುತ್ತೇವೆ. ದಾಳಿ ಮಾಡಿ ವಾಪಸ್ಸು ಪಡೆಯಲ್ಲ. ನ್ಯಾಯಾಲಯದ ಮೂಲಕವೇ ಪಡೆಯುತ್ತೇವೆ. ತಾಂಬೂಲ ಪ್ರಶ್ನೆ ಹೋಮ ಹವನ ಎಲ್ಲವೂ ಸಾಕಷ್ಟು ಶಕ್ತಿಯುತವಾಗಿವೆ. ವೈಜ್ಞಾನಿಕವಾಗಿದೆ ಇದನ್ನು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ಸಾಧಕರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ. ಮುಸ್ಲಿಮರು ಎಲ್ಲಾ ಕೈ ತಪ್ಪುತ್ತಿದೆ ಅಂತಾ ಹತಾಶರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಸಾವರ್ಕರ್‌ನ ಒಂದು ಕೂದಲಿಗೂ ಟಿಪ್ಪು ಸಮನಲ್ಲ

ಸಾಮಾಜಿಕ ಜಾಲತಾಣದಲ್ಲಿ ಸಾವರ್ಕರ್ ಟಿಪ್ಪು ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಟಿಪ್ಪು ಒಬ್ಬ ಮತಾಂಧ ದೇಶದ್ರೋಹಿ ಕನ್ನಡ ದ್ರೋಹಿ ದೇವಸ್ಥಾನ ಒಡೆದು ಹಾಕಿದವನು. ಮತಾಂಧ ದೇಶ ದ್ರೋಹಿ ಜೊತೆ ಹೋಲಿಕೆ ಸಾವರ್ಕರ ಜೊತೆ ಸರಿ ಅಲ್ಲ. ಸಾವರ್ಕರ್‌ನ ಒಂದು ಕೂದಲಿಗೂ ಟಿಪ್ಪು ಸಮನಲ್ಲ ಎಂದು ಟಿಪ್ಪುಗೆ ದಿಕ್ಕಾರ ಎಂದು ಕೂಗಿದರು.

ಇದೇ ಕಾರಣಕ್ಕೆ ಟಿಪ್ಪುವಿನ ಕೆಲ ವಿಷಯ ಕೈ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ತೆಗೆದು ಹಾಕುವ ಕೆಲಸ ಮಾಡುತ್ತಾರೆ ಎಂದರು.

ಅಬ್ದುಲ್ ಮಜೀದ್ ಹೇಳಿದ್ದೇನು?

ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟು ಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮಳಲಿ ಮಸೀದಿ ವಿಚಾರದಲ್ಲಿ ಮಾತಾಡದಂತೆ ತಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ (Congress) ಮುಸ್ಲಿಮರ (Muslim) ಪರ ಅಲ್ಲ ಅನ್ನೋದನ್ನ ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ (Tambula Prashne) ಎಂದು ಬರುವವರನ್ನು ಪೊಲೀಸರು (Police) ಒದ್ದು ಒಳಗೆ ಹಾಕಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Mangaluru Hijab Row: ವಿದ್ಯಾರ್ಥಿ ನಾಯಕ ರಾಜೀನಾಮೆ, ಹಿಜಾಬ್ ವಿದ್ಯಾರ್ಥಿನಿಯರಿಂದ ದಾಖಲೆ ಬಿಡುಗಡೆ

ತಾಂಬೂಲ ಪ್ರಶ್ನೆ ಎಂದು ಬರುವವರರನ್ನು 'ಪೂಜಾ ಸ್ಥಳ ಕಾಯ್ದೆ 1991' ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆ್ಯಕ್ಟ್ ಅನ್ನು ಪೊಲೀಸರು ಓದಿಲ್ವೇ? 2006ರಲ್ಲಿ 200 ವರ್ಷಗಳಷ್ಟು ಹಳೆಯದಾದ ಸಂಡೂರಿನ ಸುಗ್ಗುಲಮ್ಮ ದೇವಾಲಯ ಒಡೆದು ಹಾಕಿದ್ದರಲ್ಲ. ಸಂಘ ಪರಿವಾರದ ಕಾರ್ಯಕರ್ತರು ತಾಕತ್ತಿದ್ದರೆ ಅದರ ಬಗ್ಗೆ ತಾಂಬೂಲ ಪ್ರಶ್ನೆ ಇಡಲಿ ಎಂದು ಸವಾಲು ಹಾಕಿದರು.
Published by:Mahmadrafik K
First published: