ಕಾಂಗ್ರೆಸ್​ನಲ್ಲೂ ನಮ್ಮ ಬಾತ್ಮೀದಾರರು ಇದ್ದಾರೆ, ಅವರು ಎಲ್ಲ ವಿಷಯ ಹಂಚಿಕೊಳ್ಳುತ್ತಾರೆ; ಸಿ ಟಿ ರವಿ

ನಾಳೆ ನಾವು ಅಧಿಕಾರ ಕಳೆದುಕೊಳ್ಳುತ್ತೇವೆ ಎಂದು ಅವರಿಗೂ ಗೊತ್ತು. ಹೀಗಾಗಿ ಸಂತೆಯಲ್ಲಿ ನಡೆಯುವ ಹಾಗೆ ಗುಡ್ಡೆ ಲೆಕ್ಕದಲ್ಲಿ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ರೇವಣ್ಣನ ನಿಂಬೆ ಹಣ್ಣು ಸರ್ಕಾರ ಉಳಿಸುತ್ತದೆ ಅಂದರೆ ಅದು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

HR Ramesh | news18
Updated:July 20, 2019, 9:52 PM IST
ಕಾಂಗ್ರೆಸ್​ನಲ್ಲೂ ನಮ್ಮ ಬಾತ್ಮೀದಾರರು ಇದ್ದಾರೆ, ಅವರು ಎಲ್ಲ ವಿಷಯ ಹಂಚಿಕೊಳ್ಳುತ್ತಾರೆ; ಸಿ ಟಿ ರವಿ
ಸಿಟಿ ರವಿ
HR Ramesh | news18
Updated: July 20, 2019, 9:52 PM IST
ಬೆಂಗಳೂರು: ಕಾಂಗ್ರೆಸ್​ನಲ್ಲಿ ನಮಗೂ ಬಾತ್ಮೀದಾರರು ಇದ್ದಾರೆ, ಆತ್ಮೀಯರು ಇದ್ದಾರೆ. ಅವರು ನಮ್ಮ‌ಬಳಿ ಎಲ್ಲ ವಿಷಯ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್​ನಲ್ಲೂ ನಮಗೆ ಇಂಟಲಿಜನ್ಸ್ ಇದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.

ರಮಡಾ ರೆಸಾರ್ಟ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರು ಮತ್ತು ಸಿ.ಎಲ್‌.ಪಿ ಒಂದಾಗಿದ್ದಾರೆ. ಶಾಸಕರಿಗೆ ಗಾಳ ಹಾಕಿ ಕಾಯ್ತಾ ಇದ್ದಾರೆ. ಸೊಮವಾರವು ಸದನ ಮುಂದೆ ಹಾಕಿ ಕಾಲ ಕಳೆಯಲು ಪ್ರಯತ್ನ ನಡೀತಿದೆ. ಅವರದ್ದೇ ಶಾಸಕರ‌ ಮೇಲೆ ಅವರಿಗೆ ನಂಬಿಕೆ ಇಲ್ಲ. ಕೆಲ ಅತೃಪ್ತ ಶಾಸಕರು ಖರೀದಿ ಮಾಡುವ ಶಕ್ತಿ ಹೊಂದಿದ್ದಾರೆ.  ಈಗಲೂ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾರೆ. ಬರಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿರೋದು. ಶಾಸಕರು ಮನಸ್ಸಿಗೆ ನೊವಾಗಿರೋದನ್ನು ಹೇಳಿದ್ದಾರೆ ಎಂದರು.

ನಮ್ಮ ಪಕ್ಷದ ಇಬ್ಬರು ಶಾಸಕರ ಮೇಲೆ ಅರೋಪ ಮಾಡಿದರು. ಯಾವುದೇ ಒಬ್ಬ ಶಾಸಕನ ಮೇಲೆ ಆರೋಪ ಮಾಡಬೇಕಾದರೆ ನೊಟೀಸ್ ಕೊಡಬೇಕು. ನಮಗೆ ಆದೇಶ ಇತ್ತು ಏನು ಮಾತನಾಡಬಾರದು ಎಂದು, ಹಾಗಾಗಿ ನಾವು ಸದನದಲ್ಲಿ ಗಲಬೆ ಉಂಟು ಮಾಡಲಿಲ್ಲ. ಸಮ್ಮಿಶ್ರ ಸರ್ಕಾರದ ಸಚಿವರು ನಾವು ಹರಿಶ್ಚಂದ್ರ ಎಂದು ಬಿಂಬಿಸಿಕೊಳ್ತಾ ಇದ್ದಾರೆ ಎಂದು ಕಡಿಕಾರಿದರು.

ಸಂಬಂಧ,  ವಿಶ್ವಾಸ ಇಟ್ಟುಕೊಂಡಿದ್ದರೆ ಈಗ ಈ ಗತಿ ಬರುತ್ತಿರಲಿಲ್ಲ. ದಿನಕ್ಕೆ ಒಬ್ಬ ಶಾಸಕರು ರಾಜೀನಾಮೆ ಕೊಡ್ತಾ ಇರಲೇಇಲ್ಲ. ಅವರ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಸ್ವಾರ್ಥ ಇಲ್ಲದೆ, ನಿಸ್ವಾರ್ಥ ಇದ್ದಿದ್ದರೆ ಎಲ್ಲರೂ ಪಕ್ಷದಲ್ಲಿ ಇರುತ್ತಿದ್ದರು ಎಂದು ಕಾಂಗ್ರೆಸ್​ ಬುದ್ಧಿಮಾತು ಹೇಳಿದರು.

ಇದನ್ನು ಓದಿ: ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಶಾಸಕರೊಂದಿಗೆ ಮಹತ್ವದ ಸಭೆ; ಎಲ್ಲ ಶಾಸಕರ ಕಡ್ಡಾಯ ಹಾಜರಾತಿಗೆ ಸೂಚನೆ

ನಿಮ್ಮ ಪಕ್ಷಕ್ಕೆ ರಾಜ್ಯದಲ್ಲಿ ಒಂದು ಸೀಟು ಕೊಟ್ಟರು. ಒಂದು ಸೀಟು ತಗೊಂಡ ನಿಮಗೆ ನೈತಿಕ ಪ್ರಜ್ಞೆ ಇಲ್ವಾ. ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ರು. ಸೋಲಿನ ನೈತಿಕ ಹೊಣೆ ಹೊತ್ತು ನೀವು ಯಾರು ರಾಜೀನಾಮೆ ಕೊಟ್ರಿ? ಎಂದು ರಾಜ್ಯ ಕಾಂಗ್ರೆಸ್​ ನಾಯಕರನ್ನು ಪ್ರಶ್ನಿಸಿದರು.

ಪ್ರಧಾನಿಗಳು ಒಂದೂ ಸ್ಥಾನ ಬಾರದ ಆಂಧ್ರ, ಕೇರಳದಲ್ಲಿ ಹೇಳಿದ್ರು, ನನಗೆ ದೇಶದ ಎಲ್ಲಾ ನಾಗರಿಕರು, ಎಲ್ಲಾ ಕ್ಷೇತ್ರಗಳು ಒಂದೇ ಎಂದು. ಸಮ್ಮಿಶ್ರ ಸರ್ಕಾರ ರಾಜ್ಯಪಾಲರು, ಸಂವಿಧಾನಕ್ಕೂ ಮರ್ಯಾದೆ ಕೊಡ್ತಿಲ್ಲ. ಕೇವಲ‌ ದಿನ ತಳ್ಳಬಹುದು, ಅಧಿಕಾರ ಉಳಿಯಲ್ಲ. ಯಾವ ಯಾವುದೋ ಕಡತಗಳು ಮೂವ್ ಆಗ್ತಾ ಇವೆ. ಈಗ ರಿಡಕ್ಷನ್ ರೇಟಲ್ಲಿ ಫೈಲ್ ಮೂವ್ ಆಗ್ತಾ ಇದ್ದಾವೆ. ಇದರಿಂದ ಸ್ವಲ್ಪ ಕಾಸು ಮಾಡಿಕೊಳ್ಳಬಹುದು ಅಷ್ಟೇ. ಮಾಲ್ ಗಳ ರೀತಿ ಸೀಸನಲ್‌ ಸೇಲ್ ನಡೀತಾ ಇದೆ. ಇದಕ್ಕೂ ಒಂದು ಕೊನೆ ಬರಲಿದೆ ಎಂದರು.

ನಾಳೆ ನಾವು ಅಧಿಕಾರ ಕಳೆದುಕೊಳ್ಳುತ್ತೇವೆ ಎಂದು ಅವರಿಗೂ ಗೊತ್ತು. ಹೀಗಾಗಿ ಸಂತೆಯಲ್ಲಿ ನಡೆಯುವ ಹಾಗೆ ಗುಡ್ಡೆ ಲೆಕ್ಕದಲ್ಲಿ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ರೇವಣ್ಣನ ನಿಂಬೆ ಹಣ್ಣು ಸರ್ಕಾರ ಉಳಿಸುತ್ತದೆ ಅಂದರೆ ಅದು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

First published:July 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...