ಬಳ್ಳಾರಿ: ಸಚಿವ ಶ್ರೀರಾಮುಲು (Minister Sriramulu) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಇಬ್ಬರು ರಾಜಕೀಯ ಬದ್ಧವೈರಿಗಳು. 2018ರಲ್ಲಿ ಬಾದಾಮಿ (Badami Constituency) ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಬ್ಬರು ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು. ಚುನಾವಣೆ ಬಳಿಕವೂ ಈ ವಾಗ್ದಾಳಿ ಮುಂದುವರಿದಿತ್ತು. ಇಂದು ಬಳ್ಳಾರಿಯಲ್ಲಿ (Ballary) ಮಾಧ್ಯಮಗಳ ಜೊತೆ ಮಾತನಾಡಿರುವ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ತೋರಿದ್ದಾರೆ. ಸಿದ್ದರಾಮಯ್ಯ ನಾನು ಇಬ್ಬರು ಒಂದೇ ಬಾರಿ ಅನಿವಾರ್ಯ ಕಾರಣಕ್ಕಾಗಿ ಕ್ಷೇತ್ರ ಬಿಟ್ಟೇವು. ಅವತ್ತಿನ ಸನ್ನಿವೇಶದಲ್ಲಿ ಇಬ್ಬರು ಕ್ಷೇತ್ರ ಬಿಡಬೇಕಾಯ್ತ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಸಿದ್ದರಾಮಯ್ಯ ನಾನು ಕ್ಷೇತ್ರ ಬಿಡಬೇಕಾಯ್ತು ಎಂದು 2018ರ ಚುನಾವಣೆಯ ಸನ್ನಿವೇಶ ಮೆಲಕು ಹಾಕಿಕೊಂಡರು.
ಸರ್ಕಾರ ರಚನೆಯಾಗಬೇಕಾದ್ರೆ ಪಾಪುಲರ್ ಕ್ಯಾಂಡಿಟ್ಗಳು ಬೇರೆ ಬೇರೆ ಕಡೆ ನಿಲ್ಲಬೇಕಾಗುತ್ತದೆ. ಇದರಲ್ಲಿ ನನ್ನ ಮತ್ತು ಸಿದ್ದರಾಮಯ್ಯ ಅವರ ಸ್ವಾರ್ಥ ಇರಲ್ಲ. ಸರ್ಕಾರದ ರಚನೆಗಾಗಿ ಇಬ್ಬರು ಕ್ಷೇತ್ರ ಬಿಟ್ಟೇವು ಎಂದು ಹೇಳಿದರು.
ಮಗನ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ವರುಣಾಗೆ ಹೋಗ್ತಿಲ್ಲ
ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲಬೇಕು.ಆದ್ರೆ ಮಗನ ರಾಜಕೀಯಕ್ಕಾಗಿ ವರುಣಾಕ್ಕೆ ಹೋಗುತ್ತಿಲ್ಲ. ಮಗನ ಭವಿಷ್ಯ ಮತ್ತು ಸಿದ್ದರಾಮಯ್ಯ ಕೂಡ ರಾಜಕೀಯದಲ್ಲಿರಬೇಕು. ಹೀಗಾಗಿ ಕ್ಷೇತ್ರದ ಆಯ್ಕೆ ಬಗ್ಗೆ ಗೊಂದಲವಾಗುತ್ತಿದೆ. ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧೆ ಮಾಡಲಿ. ಅದು ಅವರ ಪಕ್ಷಕ್ಕೆ ಬಿಟ್ಟದ್ದು, ರಾಜಕೀಯದಲ್ಲಿ ಇದೊಂದು ಸಹಜ ಪಕ್ರಿಯೆ ಎಂದು ಸಾಫ್ಟ್ ಕಾರ್ನರ್ ತೋರಿದರು.
2018ರಲ್ಲಿ ಎದುರಾಳಿ
ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಅನ್ನೋದಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ಪಾಪ್ಯುಲರ್ ಕ್ಯಾಂಡಿಟ್ಗಳ ಸಮಸ್ಯೆ ಬರುತ್ತದೆ. ಯಾವುದೇ ಕ್ಷೇತ್ರದಲ್ಲಿ ನಿಂತು ಗೆಲ್ಲುವವರೇ ಪಾಪುಲರ್ ಕ್ಯಾಂಡೆಟ್ ಕೆಲವೊಮ್ಮೆ ಸಾಹಸ ಮಾಡಬೇಕಾಗುತ್ತದೆ. ಹಾಗಾಗಿಯೇ 2018ರಲ್ಲಿ ಇಬ್ಬರು ಸಾಹಸ ಮಾಡಿದೇವು ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಅತಿ ಹೆಚ್ಚು ಕ್ಷೇತ್ರಗಳಲ್ಲಿ ನಾವು ಬಂದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದರು. ಆದ್ರೆ ಆ ಮೈತ್ರಿ ಸರ್ಕಾರ ಪತನಗೊಂಡಿದ್ದಿರಂದ ಬಿಜೆಪಿ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ನಾಯಕರು ಕಿವಿಯಲ್ಲಿ ಇಷ್ಟು ದಿನ ಹೂವು ಇಡ್ತಿದ್ರು. ಇದೀಗ ಹೈಟೆಕ್ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್ ಇಡೋ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Actor Kishore: ಉರಿಗೌಡ, ನಂಜೇಗೌಡ ವಿವಾದದಕ್ಕೆ ಎಂಟ್ರಿ ಕೊಟ್ಟ ಕಿಶೋರ್; ಕಾಂತಾರ ನಟನ ಖಡಕ್ ರಿಪ್ಲೈ ಏನು?
ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು
ಗ್ಯಾರಂಟಿ ಕಾರ್ಡ್ ವಾರಂಟಿ ಕಾರ್ಡ್ ಬಗ್ಗೆ ಜನರಿಗೆ ಗೊತ್ತಿಲ್ಲ. ಯಾಕಂದ್ರೆ ಅಧಿಕಾರಕ್ಕೆ ಬಾರದೇ ಇರೋರು ಏನು ಗ್ಯಾರಂಟಿ ಕೊಡ್ತಾರೆ. ಚುನಾವಣೆ ಬಂದಾಗ ಸುಳ್ಳು ಹೇಳೋದು ಸಾಮಾನ್ಯ. ಇದೀಗ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತ. ಕಾಂಗ್ರೆಸ್ ಗಿಮಿಕ್ಸ್ ಗೆ ಜನರು ಮರಳಾಗೋದಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ