ನಾವೇನೂ ಅಧಿಕಾರ ಕೊಡಿ ಅಂತಾ ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ ; ಮಾಜಿ ಪ್ರಧಾನಿ ದೇವೇಗೌಡ

ಮೈತ್ರಿ ಸರಕಾರ ಇದ್ದಾಗ ನನ್ನ ಒಂದು ಕಾರ್ಯಕ್ರಮವೂ ನಿಲ್ಲಬಾರದು ಅಂತಾ ಸಿದ್ದರಾಮಯ್ಯ ಷರತ್ತು ಹಾಕಿದ್ರು. ಆ ಯೋಜನೆಗಳನ್ನು ಮುಂದುವರಿಸಿ, ಅದಕ್ಕೆ ಹಣ ಹೊಂದಿಸಿ ನಂತರ ಕೊಡಗಿಗೂ ಕುಮಾರಸ್ವಾಮಿ ಪರಿಹಾರ ಹಣ ಕೊಟ್ಟರು. ಆಗ ಕೇಂದ್ರ ಸರಕಾರ ತಕ್ಷಣ ಒಂದು ರೂಪಾಯಿ ಕೊಟ್ಟಿರಲಿಲ್ಲ.

G Hareeshkumar | news18-kannada
Updated:October 11, 2019, 3:20 PM IST
ನಾವೇನೂ ಅಧಿಕಾರ ಕೊಡಿ ಅಂತಾ ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ ; ಮಾಜಿ ಪ್ರಧಾನಿ ದೇವೇಗೌಡ
ಹೆಚ್.ಡಿ. ದೇವೇಗೌಡ
  • Share this:
ಮೈಸೂರು(ಅ.11) : ನಾವೇನೂ ಅಧಿಕಾರ ಕೊಡಿ ಅಂತಾ ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ. ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಅವರೆ ಮನೆಗೆ ಬಂದು ನನ್ನ ಕೈ ಹಿಡಿದು ಕೊಂಡು ನಮಗೆ ಅಧಿಕಾರ ಕೊಟ್ಟರು ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಹೇಳಿದ್ದಾರೆ.

ನಮಗೆ ಅಧಿಕಾರ ಬೇಡ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ನಾವು ಹೇಳಿದ್ದೇವೂ ಆದರೂ, ಕೇಳದ ಗುಲಾಂ ನಬಿ ಆಜಾದ್​ ಅವರು ಕೈ ಹಿಡಿದುಕೊಂಡು ಸರ್ಕಾರ ನಡೆಸುವಂತೆ ನನ್ನನ್ನು ಒಪ್ಪಿಸಿದರು. ಮೈತ್ರಿ ಸರಕಾರ ಇದ್ದಾಗ ನನ್ನ ಒಂದು ಕಾರ್ಯಕ್ರಮವೂ ನಿಲ್ಲಬಾರದು ಅಂತಾ ಸಿದ್ದರಾಮಯ್ಯ ಷರತ್ತು ಹಾಕಿದ್ರು. ಆ ಯೋಜನೆಗಳನ್ನು ಮುಂದುವರಿಸಿ, ಅದಕ್ಕೆ ಹಣ ಹೊಂದಿಸಿ ನಂತರ ಕೊಡಗಿಗೂ ಕುಮಾರಸ್ವಾಮಿ ಪರಿಹಾರ ಹಣ ಕೊಟ್ಟರು. ಆಗ ಕೇಂದ್ರ ಸರಕಾರ ತಕ್ಷಣ ಒಂದು ರೂಪಾಯಿ ಕೊಟ್ಟಿರಲಿಲ್ಲ.ಕುಮಾರಸ್ವಾಮಿ ಎಲ್ಲವನ್ನು ಸರಿದೂಗಿಸಿದ್ದರು ಎಂದು  ಎಚ್ಡಿಕೆ ಆಡಳಿತವನ್ನು ಮಾಜಿ ಪ್ರಧಾನಿ ದೇವೇಗೌಡ ಪ್ರಶಂಸಿಸಿದರು.

ಪ್ರಜ್ವಲ್ ಇನ್ನೂ ಚುನಾವಣೆಗೆ ಬರಲ್ಲ. ಅವನು ಸಂಸದ ಆಗಿದ್ದಾನೆ. ನಿಖಿಲ್ ಏನೂ ಬರಲ್ಲ, ಹಾಗಾಗಿ ಸ್ಥಳೀಯರಿಗೆ ಟಿಕೆಟ್ ನೀಡಲಾಗುತ್ತದೆ. ಚುನಾವಣೆ ನಡೆಯೋದು ಅನುಮಾನವಿದ್ದು, ಸುಪ್ರೀಂ ಕೋರ್ಟ್ ತೀರ್ಪು ಏನು ಬರುತ್ತೆ ಅದರ ಮೇಲೆ ಎಲ್ಲದೂ ನಿರ್ಣಯ ಆಗುತ್ತೆ ಎಂದರು

ಇದನ್ನೂ ಓದಿ : ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾತನಾಡುವಾಗ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿ -ಸಚಿವರಿಗೆ ಸಿಎಂ ಯಡಿಯೂರಪ್ಪ ಸೂಚನೆ

ಸರಕಾರ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ. ಯಡಿಯೂರಪ್ಪ ಎಷ್ಟೇ ಜೋರಾಗಿ ಮಾತಾಡಿದ್ರು ನಾನು ದ್ವೇಷದಿಂದ ಮಾತನಾಡಲ್ಲ  ಎಂದು ದೇವೇಗೌಡರು ಹೇಳಿದರು.

ಬಿಜೆಪಿಯಲ್ಲಿ ಇರುವವರೆಲ್ಲ ಪ್ರಾಮಾಣಿಕರಾ ? 

ಐಟಿ, ಇಡಿ, ಸಿಬಿಐ ಎಲ್ಲಾ ತನಿಖಾ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಿತಕ್ಕೆ ಬಳಸಿ ಕೊಳ್ಳುತ್ತಿದ್ದಾರೆ. ತಮ್ಮ ಎದುರಾಳಿಗಳ ಹಣಿಯಲು ತನಿಖಾ ಸಂಸ್ಥೆಗಳ ಬಳಕೆ ಮಾಡಿಕೊಳ್ಳುತ್ತಿದೆ.  ಮಾಜಿ  ಡಿಸಿಎಂ ಪರಮೇಶ್ವರ್ ತಂದೆ ಮೆಡಿಕಲ್ ಕಾಲೇಜ್ ಸ್ಥಾಪಿಸಿ ಅದನ್ನು ಬೆಳೆಸಿದ್ದಾರೆ. ಅವರೇನೂ ನಿನ್ನೆ ಮೊನ್ನೆ ಶ್ರೀಮಂತರಾದವಲ್ಲ. 50 ವರ್ಷದ ಹಿಂದೆಯೆ ಅವರು ತಂದೆ ಈ ಆಸ್ತಿ ಮಾಡಿದ್ದರು. ಪರಮೇಶ್ವರ್ ಏನೂ ಮಾಡಿದ್ದಾರೆ. ಪರಮೇಶ್ವರ್ ದಿಢೀರನೆ ಐದು ಸಾವಿರ ಕೋಟಿ ಆಸ್ತಿ ಮಾಡಿಲ್ಲ. ಬಿಜೆಪಿಯಲ್ಲಿ ಇರುವವರೆಲ್ಲಾ ಪ್ರಾಮಾಣಿಕರಾ? ಅವರಲ್ಲಿ ತಪ್ಪು ಮಾಡಿದವರೇ ಇಲ್ವಾ? ಎಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಶ್ನೆ ಮಾಡಿದರು. ‌
First published:October 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ