ಧರ್ಮೇಗೌಡರ ಆತ್ಮಹತ್ಯೆ ಪ್ರಕರಣದ ತನಿಖೆಯಾಗಬೇಕು- ಸಭಾಧ್ಯಕ್ಷರ ಪೀಠಕ್ಕೆ ನುಗ್ಗುವವರ ಸದಸ್ಯತ್ವ ರದ್ದು ಮಾಡಬೇಕು: ಯತ್ನಾಳ

ಕಾಂಗ್ರೆಸ್​​ನವರು ವಿಧಾನ ಪರಿಷತ್ತಿನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಅಂದು ಸಭಾಧ್ಯಕ್ಷರ ಪೀಠಕ್ಕೆ ತೆರಳಿ ಗದ್ದಲ ನಡೆಸಿದವರ ವಿರುದ್ಧ ಇನ್ನೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಭಾಪತಿಗಳು ನಾಚಿಕೆ ಬಿಟ್ಟು ಆ ಸ್ಥಾನಕ್ಕೆ ಅಂಟಿಕೊಂಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ

ಶಾಸಕ ಬಸನಗೌಡ ಪಾಟೀಲ ಯತ್ನಾಳ

  • Share this:
ವಿಜಯಪುರ(ಡಿಸೆಂಬರ್​. 29): ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರಕಾರವನ್ನು ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ವಿಧಾನ ಪರಿಷತ್ ನಲ್ಲಿ ಇತ್ತೀಚೆಗೆ ನಡೆದ ಉಪಸಭಾಪತಿಗಳನ್ನು ಎಳೆದಾಡಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು. ಘಟನೆಯಲ್ಲಿ ತಪ್ಪಿತಸ್ಥರ ಸದಸ್ಯತ್ವ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಇಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎನಿಸುತ್ತದೆ. ವಿಧಾನ ಪರಿಷತ್ ನಲ್ಲಿ ನಡೆದ ಇತ್ತೀಚಿನ ಗದ್ದಲ ಸೂಕ್ಷ್ಮ ಸ್ವಭಾವದ ಧರ್ಮೇಗೌಡ ಅವರಿಗೆ ನೋವುಂಟು ಮಾಡಿತ್ತು ಅನಿಸುತ್ತದೆ. ಧರ್ಮೇಗೌಡ ಓರ್ವ ಸಾತ್ವಿಕ ಮತ್ತು ಒಳ್ಳೆಯ ರಾಜಕಾರಣಿ. ಜೆಡಿಎಸ್ ನಲ್ಲಿ ನಾನು ಇದ್ದಾಗಿನಿಂದಲೂ ಅವರ ಬಗ್ಗೆ ಗೊತ್ತಿದೆ. ಅವರ ಆತ್ಮಹತ್ಯೆಗೆ ಏನು ಕಾರಣ ಎಂಬುದರ ಬಗ್ಗೆ ತನಿಖೆಯಾಗಬೇಕು. ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್​​ನವರು ವಿಧಾನ ಪರಿಷತ್ತಿನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಅಂದು ಸಭಾಧ್ಯಕ್ಷರ ಪೀಠಕ್ಕೆ ತೆರಳಿ ಗದ್ದಲ ನಡೆಸಿದವರ ವಿರುದ್ಧ ಇನ್ನೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಭಾಪತಿಗಳು ನಾಚಿಕೆ ಬಿಟ್ಟು ಆ ಸ್ಥಾನಕ್ಕೆ ಅಂಟಿಕೊಂಡಿದ್ದಾರೆ. ಸಭಾಪತಿಗಳ ಕಾರ್ಯವೈಖರಿ, ಕಾಂಗ್ರೆಸ್ ಸದಸ್ಯರ ಗೂಂಡಾಗಿರಿ ಇಡೀ ದೇಶದ ಜನ ತಲೆತಗ್ಗಿಸುವಂತಿದೆ.

ಕಾಂಗ್ರೆಸ್ಸಿಗೆ ನೈತಿಕತೆ ಇದ್ದರೆ, ಸಭಾಪತಿಗಳಿಗೆ ಗೌರವ ಮರ್ಯಾದೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ವಿಧಾನ ಪರಿಷತನಲ್ಲಿ ಧರ್ಮೇಗೌಡರನ್ನು ಎಳೆದಾಡಿದ ಬಲವಂತಚಾಗಿ, ಅವಮಾನಕಾರಿಯಾಗಿ ಇಳಿಸಿದವರ ಸದಸ್ಯರ ಸದಸ್ಯತ್ವ ರದ್ದುಪಡಿಸಬೇಕು. ಇಲ್ಲದಿದ್ದರೆ ಯಾರಿಗೂ ಕಾನೂನಿನ ಮೇಲೆ ಗೌರವ ಇರಲ್ಲ. ಅಂದಿನ ಘಟನೆಯಿಂದ ಧರ್ಮೆಗೌಡ ನೊಂದಿದ್ದರು ಅನಿಸುತ್ತೆ ಎಂದರು.

ಇದನ್ನೂ ಓದಿ : ಬಡವರನ್ನ ಮತ್ತಷ್ಟು ಬಡವರನ್ನಾಗಿಸುವುದೆ ಬಿಜೆಪಿ ಅಜೆಂಡಾ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಘಟನೆ ನಡೆದು ಇಷ್ಟು ದಿನಗಳಾದರೂ ಈವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಇದನ್ನು ನೋಡಿದರೆ ಹೊಂದಾಣಿಕೆ ರಾಜಕೀಯ ಕಾಣಿಸುತ್ತದೆ. ಪ್ರತಿಪಕ್ಷಗಳು ಸತ್ತು ಹೋಗಿವೆ. ಮುಖ್ಯ ಸಮಸ್ಯೆಗಳಿದ್ದರೂ ಮೌನ ವಹಿಸುತ್ತವೆ. ಆಡಳಿತ ಮತ್ತು ಪ್ರತಿಪಕ್ಷಗಳು ಪರಸ್ಪರ ತಪ್ಪನ್ನು ಮುಚ್ಚಿ ಹಾಕುತ್ತಿವೆ. ಈ ಹೊಂದಾಣಿಕೆ ರಾಜಕಾರಣ ಸದ್ಯದಲ್ಲಿಯೇ ಕೊನೆಯಾಗಲಿದೆ ಎಂದು ಅವರು ತಿಳಿಸಿದರು.

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ. ಈ ಹಿಂದೆ ಜಯಲಲಿತಾಗೂ ವಿಧಾನಸಭೆಯಲ್ಲಿ ಅವಮಾನಿಸಲಾಗಿತ್ತು. ಆಗ ಜನ ಚುನಾವಣೆತಲ್ಲು ತಕ್ಕ ಪಾಠ ಕಲಿಸಿದ್ದರು. ಜನರು ಜನಪ್ರತಿನಿಧಿಗಳಿಗೆ ಚುನಾವಣೆ ಮೂಲಕ ತಕ್ಕ ಉತ್ತರ ನೀಡುತ್ತಾರೆ. ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆ ಅಧ್ಯಕ್ಷರ, ಸಭಾಪತಿಗಳ ಪೀಠಕ್ಕೆ ಹೋಗುವ ಸದಸ್ಯರ ಸದಸ್ಯತ್ವ ರದ್ದಾಗಬೇಕು. ಆಗ ಇಂಥ ಸದಸ್ಯರಿಗೆ ಬುದ್ದಿ ಬರುತ್ತೆ ಎಂದರು.
Published by:G Hareeshkumar
First published: