ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ; ಅನರ್ಹ ಶಾಸಕ ರೋಷನ್ ಬೇಗ್ ಪ್ರಶ್ನೆ

ಬೆಂಗಳೂರಿನ ರಸೆಲ್ ಮಾರ್ಕೆಟ್ ಚೌಕ್ ಭೇಟಿ ನೀಡಿದ ರೋಷನ್ ಬೇಗ್, ಮುಸ್ಲಿಂ ಸಮಾಜದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಅವರು ಮಾಧ್ಯಮದ ಜೊತೆ ಮಾತನಾಡಿದರು.

Rajesh Duggumane | news18-kannada
Updated:November 9, 2019, 3:16 PM IST
ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ; ಅನರ್ಹ ಶಾಸಕ ರೋಷನ್ ಬೇಗ್ ಪ್ರಶ್ನೆ
ರೋಷನ್​​​ ಬೇಗ್​​
  • Share this:
ಬೆಂಗಳೂರು (ನ.9):  ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್​ ಇಂದು ತೀರ್ಪು ಪ್ರಕಟ ಮಾಡಿದೆ. ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಈ ಆದೇಶವನ್ನು ಅನರ್ಹ ಶಾಸಕ ರೋಷನ್​ ಬೇಗ್​ ಸ್ವಾಗತಿಸಿದ್ದಾರೆ.

ಬೆಂಗಳೂರಿನ ರಸೆಲ್ ಮಾರ್ಕೆಟ್ ಚೌಕ್ ಭೇಟಿ ನೀಡಿದ ರೋಷನ್ ಬೇಗ್, ಮುಸ್ಲಿಂ ಸಮಾಜದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅವರು ಬರುತ್ತಿದ್ದಂತೆ ಹಿಂಬಾಲಕರು ಭಾರತ್ ಮಾತಾಕಿ ಜೈ ಘೋಷಣೆ ಕೂಗಿ ಅವರನ್ನು ಸ್ವಾಗತಿಸಿದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, “ ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ? ಇದನ್ನು ವರ್ಷದ ಹಿಂದೆಯೇ ಹೇಳಿದ್ದೇ. ಅಯೋಧ್ಯೆ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ,” ಎಂದರು.

ಸುನ್ನಿ ಬೋರ್ಡ್​ಗೆ ಬೇರೆ ಜಾಗದಲ್ಲಿ ಐದು ಎಕರೆ ಭೂಮಿ ನೀಡುವ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ತೀರ್ಪು ಪ್ರಶ್ನಿಸಿ ಕೆಲವರು ಮೇಲ್ಮನವಿ ಹಾಕಲು ಮುಂದಾಗಿದ್ದಾರೆ. ಅಂಥ ಕೆಲಸ ಮಾಡಬೇಡಿ ಎಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ. ನಮಗೂ ಈ ವಿಚಾರ ಸಾಕಾಗಿ ಹೋಗಿದೆ. ನಮಗೆ ಸಮಾನತೆ ಬೇಕು. ಜೊತೆಗೆ ಸೌಹಾರ್ದತೆಯಿಂದ ಬದುಕಬೇಕು. ಒಳ್ಳೆಯ ತೀರ್ಪು ಬಂದಿದೆ,” ಎಂದು ಸುಪ್ರೀಂಕೋರ್ಟ್​​ ಆದೇಶವನ್ನು ಶ್ಲಾಘಿಸಿದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

“ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರುತ್ತೇವೆ. 5 ಎಕರೆ ಜಾಗದಲ್ಲಿ ಮಸೀದಿ ಕಟ್ಟುವಾಗ ಹಿಂದೂಗಳು ಬನ್ನಿ. ಹಿಂದೂ ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ. ದೇಶದಲ್ಲಿ ಸಾಮರಸ್ಯದಿಂದ ಇಬ್ಬರೂ ಬದುಕೋಣ,” ಎಂದರು.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading